
ಮೈಸೂರು (ಸೆ.19) ರಾಜ್ಯದಲ್ಲಿ ಗಣೇಶೋತ್ಸವ ಆಚರಿಸಲಾಗಿದೆ.ಹಲವೆಡೆ ಗಣಪನ ವಿಸರ್ಜನೆ ಕಾರ್ಯಗಳು ನಡೆಯುತ್ತಿದೆ. ಇದರ ನಡುವೆ ಟಿ ನರಸೀಪುರ ರಾಜ್ಯದ ಗಮನಸೆಳೆದಿತ್ತು. ಮಸೀದಿ ಮುಂದೆ ಗಣಪತಿ ಮೆರವಣಿಗೆ ಹೋಗಬಾರದು ಅನ್ನೋ ಹೇಳಿಕೆಯನ್ನು ಸವಾವಾಲಾಗಿ ಸ್ವೀಕರಿಸಿದ ಹಿಂದೂ ಜಾಕರಣ ವೇದಿಕೆ ಟಿ ನರಸೀಪುರ ಗಣಪ ಮೆರವಣಿಗೆ ಅದ್ದೂರಿಯಾಗಿ ನೆರವೇರಿಸಿದೆ. ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ನಾಯಕರು ಟಿ ನರಸೀಪುರದಲ್ಲಿ ಭಾರಿ ಹೋರಾಟ ನಡೆಸಿ ಕೊನೆಗೂ ಗಣೇಶ ಮೆರವಣಿಗೆ ಅದ್ಧೂರಿಯಾಗಿ ಮಾಡಿದ್ದಾರೆ. ಆದರೆ ಮೆರವಣಿಗೆ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಗರಂ ಆಗಿದೆ. ಪ್ರತಾಪ್ ಸಿಂಹ ಸೇರಿದಂತೆ ಹಲವರ ವಿರುದ್ದ ದೂರು ದಾಖಲಾಗಿದೆ.
ಟಿ ನರಸೀಪುರದಲ್ಲಿ ನಡೆದ ಗಣಪತಿ ಮೆರವಣಿಗೆ ವಿರುದ್ಧ ಮೈಸೂರು ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ಮೆರವಣಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇಷ್ಟೇ ಅಲ್ಲ ಮೆರವಣಿಗೆಯಲ್ಲಿ ಪ್ರತಾಪ್ ಸಿಂಗ್ ಸೇರಿದಂತೆ ಹಲವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಮೈಸೂರು ಕಾಂಗ್ರೆಸ್ ನಿಯೋದ ದೂರು ನೀಡಿದೆ. ಮೈಸೂರು ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿಗೆ ದೂರು ನೀಡಲಾಗಿದೆ.
ಮೆರವಣಿಗೆ ಆಯೋಜಕರು ನಿಗದಿತ ಸಮಯದಲ್ಲಿ ಕಾರ್ಯಕ್ರಮ ಮುಗಿಸಿಲ್ಲ. ಇನ್ನು ಮೆರವಣಿಗೆಯಲ್ಲಿ ಪಾಲ್ಗೊಂಡ ಹಲವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಹೀಗಾಗಿ ಇವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಮೈಸೂರು ಕಾಂಗ್ರೆಸ್ ದೂರು ನೀಡಿದೆ.
ಟಿ ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ ಗಣಪತಿ ಕಾರ್ಯಕ್ರಮ ಆಯೋಜಕರಿಗೆ ಎಚ್ಚರಿಕೆ ನೀಡಿದ ಬಳಿಕ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಮಸೀದಿ ಮುಂದೆ ಪಟಾಕಿ ಹೊಡೆದರೆ ಗ್ರಹಚಾರ ಬಿಡಿಸ್ತೀನಿ ಎಂದು ಎಚ್ಚರಿಕೆ ನೀಡಿದ್ದರು. ಈ ಸವಾಲು ಸ್ವೀಕರಿಸಿ ಟಿ ನರಸೀಪುರ ಹಿಂದೂ ಜಾಗರಣ ವೇದಿಕೆ ಸತತ ಹೋರಾಟದ ಬಳಿಕ ಅದ್ದೂರಿಯಾಗಿ ಗಣಪತಿ ಮೆರವಣಿಗೆ ಆಯೋಜಿಸಿತ್ತು. ಮಸೀದಿ ಮುಂಭಾಗದ ರಸ್ತೆಯಲ್ಲೇ ಗಣಪತಿ ಮೆರವಣಿಗೆ ಸಾಗಿತ್ತು. ಇಷ್ಟೇ ಅಲ್ಲ ಮಸೀದಿ ಮುಂಭಾಗ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದ್ದರು. ಹಿಂದೂ ಕಾರ್ಯಕರ್ತರು ಮರವಣಿಗೆಯಲ್ಲಿ ಹೆಜ್ಜೆ ಹಾಕಿದ್ದರು.
ಟಿ ನರಸೀಪುರ ಶೋಭಯಾತ್ರೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿ ಗಮನಸೆಳೆದಿದ್ದರು. ಗಣಪತಿ ಕೂರಿಸಿದ ವಾಹನ ಹತ್ತು ಸ್ಟೆಪ್ ಹಾಕಿ ಸಂಭ್ರಮಿಸಿದ್ದರು. ಹಿಂದೂ ಧ್ವಜ ಬೀಸುವ ಮೂಲಕ ಯುವಕರನ್ನು ಹುರಿದುಂಬಿಸಿದ್ದರು. ಇದೇ ವೇಳೆ ಶೋಭಯಾತ್ರೆಯಲ್ಲಿ ಸಾವಿರಾರು ಯುವಕರು ಕುಣಿದು ಕುಪ್ಪಳಿಸಿದ್ದರು.