ಬೆಂಗಳೂರಲ್ಲಿ ಮನೆ ಕಟ್ಟೋರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಚಿವ ಕೃಷ್ಣ ಬೈರೇಗೌಡ

Published : Sep 19, 2026, 06:28 PM IST
Krishna Byre Gowda

ಸಾರಾಂಶ

ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟುವವರಿಗಾಗಿ ರಾಜ್ಯ ಸರ್ಕಾರ 'ನಂಬಿಕೆ ನಕ್ಷೆ 2.0' ತಂತ್ರಾಂಶವನ್ನು ಜಾರಿಗೆ ತಂದಿದೆ. ಇದರಿಂದ ಕೇವಲ 15 ರಿಂದ 30 ನಿಮಿಷಗಳಲ್ಲಿ ಆನ್‌ಲೈನ್ ಮೂಲಕವೇ ಬಿಲ್ಡಿಂಗ್ ಪ್ಲಾನ್ ಅನುಮೋದನೆ ಪಡೆಯಬಹುದು. ಸದ್ಯ 50x80 ಅಳತೆಯ ನಿವೇಶನಗಳಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ.

ಬೆಂಗಳೂರು: ರಾಜಧಾನಿಯಲ್ಲಿ ಸ್ವಂತ ಮನೆ ಕಟ್ಟಬೇಕು ಅಂದುಕೊಂಡವರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. ಈ ಹಿಂದೆ ಬಿಲ್ಡಿಂಗ್‌ ಪ್ಲಾನ್‌ ಮಂಜುರಾತಿ ಪಡೆಯಲು ಒಂದರಿಂದ 2 ತಿಂಗಳ ಕಾಲ ಕಚೇರಿಗೆ ಅಲಿಯಬೇಕಿತ್ತು. ಇನ್ಮುಂದೆ ಅಂತಹ ಪ್ರಮೇಯ ಬರೋದಿಲ್ಲ. ಜಸ್ಟ್‌ 30 ನಿಮಿಷದಲ್ಲಿ ಬಿಲ್ಡಿಂಗ್‌ ಪ್ಲಾನ್‌ಗೆ ಅನುಮೋದನೆ ಸಿಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಸಚಿವರು ಹೇಳಿದ್ದೇನು?

ಇವತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ವಿಕಾಸಸೌಧದಲ್ಲಿ ಸುಧಾರಿತ ನಂಬಿಕೆ ನಕ್ಷೆ 2.0 (Nambike Nakshe 2.0) ತಂತ್ರಾಂಶಕ್ಕೆ ಅಧಿಕೃತ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಹಿಂದೆ ಒಂದು ಬಿಲ್ಡಿಂಗ್ ಪ್ಲಾನ್ ಅಪ್ರೂವಲ್ ತಗೋಳೋಕೆ ಕನಿಷ್ಠ 1 ರಿಂದ 2 ತಿಂಗಳು ಕಾಯಬೇಕಿತ್ತು. ಅಧಿಕಾರಿಗಳ ಸಹಿ, ದಾಖಲೆಗಳ ಪರಿಶೀಲನೆ ಅಂತ ಜನ ಸುಸ್ತಾಗುತ್ತಿದ್ದರು. ಈಗ ಆ ಸಮಯವನ್ನು ಕೇವಲ 15 ರಿಂದ 30 ನಿಮಿಷಕ್ಕೆ ಇಳಿಸಿದ್ದೇವೆ. ಮಧ್ಯವರ್ತಿಗಳ ಹಾವಳಿಗೆ ಸಂಪೂರ್ಣ ಬ್ರೇಕ್ ಹಾಕಲು ಈ ಸುಧಾರಿತ ತಂತ್ರಾಂಶ ತರಲಾಗಿದೆ ಎಂದು ಸ್ಪಷ್ಟಪಡಿಸಿದರು.

ಹೇಗೆ ಕೆಲಸ ಮಾಡುತ್ತೆ?

  1. ನೀವು ಯಾವುದೇ ಬಿಬಿಎಂಪಿ/ಸರ್ಕಾರಿ ಕಚೇರಿಗೆ ಹೋಗಿ ಅಧಿಕಾರಿಗಳ ಕೈ-ಕಾಲು ಕಟ್ಟಬೇಕಿಲ್ಲ
  2. ನಿಮ್ಮ ಕಟ್ಟಡದ ನಕ್ಷೆಯನ್ನು 'KAD (CAD) ಫಾರ್ಮೆಟ್'ನಲ್ಲಿ ಅಪ್‌ಲೋಡ್ ಮಾಡಿದರೆ ಸಾಕು
  3. ಕಂಪ್ಯೂಟರ್ ತಂತ್ರಾಂಶವೇ ಆ ನಕ್ಷೆಯನ್ನು ಓದಿ ನಿಯಮಾವಳಿ ಪ್ರಕಾರ ಇದೆಯೇ ಎಂದು ಪರೀಕ್ಷೆ
  4. Property Documents ಕೂಡ ಸಿಸ್ಟಮ್ ತಾನಾಗಿಯೇ ಪರಿಶೀಲಿಸುತ್ತದೆ
  5. ನೀವು ಸಲ್ಲಿಸಿರುವ ನಕ್ಷೆ ಮತ್ತು ದಾಖಲೆಗಳು ನಿಯಮಬದ್ಧವಾಗಿದ್ದರೆ
  6. ಕೇವಲ 15 ರಿಂದ 30 ನಿಮಿಷದಲ್ಲೇ ಮನೆ ಕಟ್ಟಲು ಕಾನೂನುಬದ್ಧ ಅಪ್ರೂವಲ್

ಸದ್ಯಕ್ಕೆ 50x80 ಅಳತೆಯ ನಿವೇಶನಗಳಲ್ಲಿ ಗರಿಷ್ಠ 4 ಘಟಕಗಳವರೆಗೆ ಮನೆ ಕಟ್ಟುವವರಿಗೆ ಹಾಗೂ 4,000 ಚದರ ಅಡಿವರೆಗಿನ ವಸತಿ ಕಟ್ಟಡಗಳಿಗೆ ಈ ನಿಮಯ ಅನ್ವಯವಾಗಲಿದೆ. ಪ್ರಾಯೋಗಿಕವಾಗಿ ನಿರ್ದಿಷ್ಟ ಪ್ರದೇಶಗಳಲ್ಲಿ ಇಂದಿನಿಂದಲೇ ಜಾರಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಕಟ್ಟಡಗಳಿಗೂ ಈ ಸರಳ ವಿಧಾನವನ್ನು ವಿಸ್ತರಿಸುವ ಯೋಜನೆಯಿದೆ ಎಂದು ಇದೇ ವೇಳೆ ತಿಳಿಸಿದರು.

ನಾವು ಜನರ ಮೇಲೆ ನಂಬಿಕೆ ಇಟ್ಟು ಈ ವ್ಯವಸ್ಥೆಯನ್ನ ಜಾರಿಗೆ ತಂದಿದ್ದೇವೆ. ನಿಯಮ ಪಾಲಿಸಿ ಮನೆ ಕಟ್ಟೋರಿಗೆ ಯಾವುದೇ ತೊಂದರೆ ಆಗಬಾರದು ಅನ್ನೋದು ನನ್ನ ಉದ್ದೇಶ. ಒಂದು ವೇಳೆ ಯಾರಾದರೂ ಇದನ್ನು ದುರುಪಯೋಗಪಡಿಸಿಕೊಂಡರೆ ಕಾನೂನು ಪ್ರಕಾರ ಭಾರೀ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಇನ್ನು ನಿನ್ನೆಯ ದಿನ ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿದರು. ಈ ವೇಳೆ ಬೀದಿ ದೀಪದ ಸಮಸ್ಯೆ, ಫುಟ್‌ಪಾತ್‌ ಸಮಸ್ಯೆಗಳನ್ನ ಕಣ್ಣಾರೆ ಕಂಡು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಸ್ಥಳದಲ್ಲೇ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

PREV
Read more Articles on
click me!

Recommended Stories

15 ವರ್ಷಕ್ಕೇ 14 ಲಕ್ಷ ಹೂಡಿಕೆ, ʼಹಣ ಸೇವ್‌ ಆಗ್ತಿಲ್ಲʼ ಅನ್ನೋರು ಬೆಂಗಳೂರಿನ ಈ ಹುಡುಗಿಯ ಟ್ರಿಕ್ಸ್‌ ಸಹಾಯಕ್ಕೆ ಬರುತ್ತೆ
ವೇದಿಕೆಯಲ್ಲಿ ಸಂಸ್ಕತ ಶ್ಲೋಕ ಹೇಳಿದ ತಕ್ಷಣ ಸಂಸ್ಕಾರ ಬರಲ್ಲ: ನಿಖಿಲ್‌ ಕುಮಾರಸ್ವಾಮಿ ಕಿಡಿ