ಜಿ ಪರಮೇಶ್ವರ್‌ ಪರವಾಗಿ ಪ್ರತಿಧ್ವನಿಸಿದೆ ಮುಖ್ಯಮಂತ್ರಿ ಕೂಗು

Kannadaprabha News   | Asianet News
Published : Nov 16, 2020, 10:05 AM IST
ಜಿ ಪರಮೇಶ್ವರ್‌ ಪರವಾಗಿ ಪ್ರತಿಧ್ವನಿಸಿದೆ ಮುಖ್ಯಮಂತ್ರಿ ಕೂಗು

ಸಾರಾಂಶ

ರಾಜ್ಯದಲ್ಲಿ ಬಿರುಸುಗೊಂಡ ರಾಜಕೀಯ ಚಟುವಟಿಕೆ. ಕೈನಲ್ಲಿ ಜೋರಾಗಿದೆ ಮುಖ್ಯಮಂತ್ರಿ ಸ್ಥಾನದ ಚರ್ಚೆ.. ಈ ಚರ್ಚೆಗೆ ಇದೀಗ ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಹೆಸರು ಸೇರ್ಪಡೆ

ತುಮಕೂರು (ನ.16):  ತಾಲೂಕಿನ ಗೌಜುಗಲ್ಲು ಗ್ರಾಮದಲ್ಲಿ ಆಂಜನೇಯ ಸ್ವಾಮಿದಶಮಾನೋತ್ಸವ ಕಾರ್ಯಕ್ರಮದಲ್ಲಿ ಮೂರು ಮಠಾಧೀಶ್ವರರಿಂದ ಡಾ.ಜಿ.ಪರಮೇಶ್ವರ್‌ ಮುಖ್ಯಮಂತ್ರಿ ಪದವಿ ಬಗ್ಗೆ ಒಂದೇ ಧ್ವನಿಗೊಡಿಸಿದರು. ತುಮಕೂರು ತಿಗಳರ ಸಂಸ್ಥಾನದ ಜ್ಞಾನಾನಂದಗಿರಿ ಸ್ವಾಮೀಜಿ, ತುಮಕೂರು ಜಿಲ್ಲೆ 2013ರ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ್‌ ಸೊಲಿನಿಂದ ಮಹತ್ತರ ಪದವಿ ಮತ್ತು ಅಭಿವೃದ್ಧಿಯನ್ನು ಕಳೆದುಕೊಂಡಿತ್ತು ಎಂದರೆ, ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನದ ಹನುಮಂಥನಾಥ ಸ್ವಾಮೀಜಿ ಮಾತನಾಡಿ, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲೂ ಪರಮೇಶ್ವರ್‌ ಕೊರಟಗೆರೆ ಕ್ಷೇತ್ರದಿಂದ ಮುಖ್ಯಮಂತ್ರಿ ಪದವಿಗೆ ಏರಿ ಜಿಲ್ಲೆಯ ಅಭಿವೃದ್ಧಿಗೊಳಿಸಲಿ ಎಂದರು.

ಪ್ರಮಾದ ಮರುಕಳಿಸದಂತೆ ಕಾಂಗ್ರೆಸ್‌ನಲ್ಲಿ ತಂತ್ರ

ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಡಾ.ಜಿ.ಪರಮೇಶ್ವರ್‌ ಮುಖ್ಯಮಂತ್ರಿಯಾಗಿ ಬಯಲು ಸೀಮೆಯ ಈ ಭಾಗಕ್ಕೆ ಹೆಚ್ಚಿನ ಶಾಶ್ವತ ನೀರಾವರಿ ಯೋಜನೆಗಳನ್ನು ನೀಡಿದರೆ ಈ ಭಾಗದ ಜನತೆಯ ಬದುಕು ಹಸನಾಗುತ್ತದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಡಾ.ಜಿ.ಪರಮೇಶ್ವರ್‌, ಕ್ಷೇತ್ರದ ಜನರ ಆಶೀರ್ವಾದದಿಂದ ಉಪಮುಖ್ಯಮಂತ್ರಿಯಾಗಿ ಸೇವೆ ಮಾಡಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಪದವಿ ದೊರೆತಲ್ಲಿ ರಾಜ್ಯಕ್ಕೆ ಮತ್ತು ಕ್ಷೇತ್ರಕ್ಕೆ ನಿಸ್ವಾರ್ಥ ಹಾಗೂ ಪ್ರಮಾಣಿಕ ಸೇವೆಯನ್ನು ಮಾಡುವುದಾಗಿ ಈ ಮೂರು ಮಠಾಧೀರುಗಳ ನಂಬಿಕೆಯನ್ನು ಉಳಿಸಿಕೊಳ್ಳುವ ಭರವಸೆ ನೀಡಿದರು.

PREV
click me!

Recommended Stories

ದೀಪಾಂಜಲಿ ನಗರ ಜಂಕ್ಷನ್‌ನ ಬಳಿಯ ನೈಸ್‌ ರಸ್ತೆ ಸಾರ್ವಜನಿಕರಿಗೆ ಶೀಘ್ರ ಮುಕ್ತ
ಬೆಂಗಳೂರಿನ ಬೀದಿ ನಾಯಿಗಳಿಗೆ ಪ್ರತಿನಿತ್ಯ 2 ಬಾರಿ ಚಿಕನ್‌ ರೈಸ್‌ !