ಸುವರ್ಣ ಮಂಡ್ಯ ಪುಸ್ತಕ ಸತ್ಯ ದರ್ಶನ ಮಾಡಿಸಿದೆ: ಸಿಟಿ ರವಿ

By Kannadaprabha News  |  First Published Mar 21, 2023, 5:33 AM IST

: ಉರಿಗೌಡ, ನಂಜೇಗೌಡ ಎಂಬುದು ಕಾಲ್ಪನಿಕ ಪಾತ್ರಗಳಾಗಿದ್ದು ಅದು ಬಿಜೆಪಿ ಸೃಷ್ಟಿಎಂದು ಹೇಳುತ್ತಿದ್ದವರಿಗೆ ಸುವರ್ಣ ಮಂಡ್ಯ ಪುಸ್ತಕ ಸತ್ಯ ದರ್ಶನ ಮಾಡಿಸಿದೆ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.


 ತುಮಕೂರು: ಉರಿಗೌಡ, ನಂಜೇಗೌಡ ಎಂಬುದು ಕಾಲ್ಪನಿಕ ಪಾತ್ರಗಳಾಗಿದ್ದು ಅದು ಬಿಜೆಪಿ ಸೃಷ್ಟಿಎಂದು ಹೇಳುತ್ತಿದ್ದವರಿಗೆ ಸುವರ್ಣ ಮಂಡ್ಯ ಪುಸ್ತಕ ಸತ್ಯ ದರ್ಶನ ಮಾಡಿಸಿದೆ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ಅದನ್ನು ಬರೆದಿದ್ದು 1994 ರಲ್ಲಿ. ಆವತ್ತು ಜನತಾದಳ ಸರ್ಕಾರ ಅಧಿಕಾರದಲ್ಲಿತ್ತು. ದೇವೆಗೌಡರು ಮುಖ್ಯಮಂತ್ರಿ ಆಗಿದ್ದರು. ಕಾಲ್ಪನಿಕ ಪಾತ್ರಗಳು ಅಂತ ಸತ್ಯಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದ ಅವರು ಟಿಪ್ಪುವನ್ನು ಕೊಂದದ್ದು ಉರಿಗೌಡ ಮತ್ತು ನಂಜೇಗೌಡ ಎಂದರು. ಸತ್ಯ ದರ್ಶನ ಆಗಬೇಕಾದರೆ ಸಂಶೋಧನೆ ಮಾಡಲಿ ಎಂದು ಸವಾಲು ಹಾಕಿದರು.

Latest Videos

undefined

ಟಿಪ್ಪುವಿನ ಆಡಳಿತದಿಂದ ಜನರು ಕೂಡ ಆಕ್ರೋಶವಾಗಿದ್ದರು ಎನ್ನುವುದು ಸಹ ಗೊತ್ತಾಗಿದೆ. ಕನ್ನಡ ಬದಲು ಪರ್ಶಿಯನ್‌ ಭಾಷೆ ಬಳಸಿದ್ದು. ಆಯ ಕಟ್ಟಿನ ಸ್ಥಳದಲ್ಲಿ ಮುಸ್ಲಿಂರನ್ನು ಕೂರಿಸಿದ್ದು, ಅತಿಯಾದ ತೆರಿಗೆ ಹಾಕಿ ಜನರನ್ನು ಕೊಂದಿದ್ದು, ದೇವಾಲಯಗಳನ್ನು ಧ್ವಂಸ ಮಾಡಿ ಮಸೀದಿಯಾಗಿ ಬದಲಾಯಿಸಿದ್ದು, ಮಹಾರಾಜರಿಗೆ ನಿಷ್ಠರಾದವರನ್ನು ಕೊಂದಿದ್ದು ಇವೆಲ್ಲವೂ ಕೂಡ ಜನರಿಗೆ ಆಕ್ರೋಶ ಇತ್ತು ಎಂದರು.

ಟಿಪ್ಪುವನ್ನು ಸರಳ ಪ್ರೇಮಿ ಅಂತಾ ಕರಿಬಾರದು. ಕನ್ನಡ ವಿರೋಧಿ ಅಂತ, ಮತಾಂಧ ಅಂತ ಕರಿಬೇಕು. ಧರ್ಮ ಬೀರು, ಸಹಿಷ್ಣು ಅಂತೇಲ್ಲಾ ಕರಿಬಾರದು. ಆತನನ್ನು ರೈತ ವಿರೋಧಿ ಅಂತ ಕರಿಬೇಕು. ಟಿಪ್ಪುವನ್ನು ವೈಭವಿಕರಿಸಿದ್ದು ಬಹಳ ದುರುದ್ದೇಶ ಅಂತ ಗೊತ್ತಾಗುತ್ತೆ ಎಂದರು.

ಕುಟ್ಟಪ್ಪ, ರಾಜು, ರುದ್ರೇಶ್‌ ಹಾಗೂ 28 ಜನರ ಸಾವಿಗೆ ಕಾರಣವಾದ ಕಾಂಗ್ರೆಸ್‌ ರಾಜ್ಯದ ಜನರ ಬಳಿ ಕ್ಷಮೆ ಯಾಚನೆ ಮಾಡಬೇಕು. 2047ಕ್ಕೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಬೇಕು, ಹಾಗೆಯೇ ದಕ್ಷಿಣ ಭಾರತದಲ್ಲೇ ಶುರುಮಾಡಬೇಕು ಎಂಬಂತಹ ಸಂಚು ರೂಪಿಸಿದ ಪಿಎಫ್‌ಐ ಪರವಾಗಿ ಕಾಂಗ್ರೆಸ್‌ ಇದ್ದು ಇದು ರಾಜ್ಯಕ್ಕೆ ಮಾಡಿದ ದ್ರೋಹ ಎಂದರು.

ಪಿಸ್ತಕ ಬಡುಗಡೆ ಮಾಡಿದ್ದು ಗೌಡರು

ಚಿಕ್ಕಮಗಳೂರು (ಮಾ.20): 1994ರಲ್ಲಿ ಸಾಹಿತಿ ದೇ.ಜವರೇಗೌಡ ಅವರ ಸಂಪಾದಕತ್ವದ ‘ಸುವರ್ಣ ಮಂಡ್ಯ’ ಎನ್ನುವ ಪುಸ್ತಕದಲ್ಲಿ ಉರಿಗೌಡ, ನಂಜೇಗೌಡರ ಪಾತ್ರ ಇತ್ತೆಂದು ಹೇಳಿದ್ದಾರೆ. ಉರಿಗೌಡ, ದೊಡ್ಡ ನಂಜೇಗೌಡ ಸೇರಿದಂತೆ ಒಕ್ಕಲಿಗರು ಟಿಪ್ಪು ವಿರುದ್ಧ ತಿರುಗಿ ಬಿದ್ದಿದ್ದರು. ಅದಕ್ಕೆ ಆತನ ನೀತಿ ಕಾರಣ ಇರಬಹುದು ಎನ್ನುವುದು ಪುಸ್ತಕದಲ್ಲಿ ಉಲ್ಲೇಖವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ(CT Ravi) ಹೇಳಿದರು.

ಉರಿಗೌಡ, ದೊಡ್ಡ ನಂಜೇಗೌಡ(Urigowda and doddananjegowda) ಅವರೇ ಟಿಪ್ಪುTippu sultana(ವನ್ನು ಕೊಂದರು ಎನ್ನುವುಕ್ಕೆ ಬಿಜೆಪಿಯವರ ಬಳಿ ಸಾಕ್ಷ್ಯ ಇದೆಯೇ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಪುಸ್ತಕದಲ್ಲಿ ಇವರಿಬ್ಬರ ಉಲ್ಲೇಖವಿದೆ. ದೇ.ಜವರೇಗೌಡರು ಬಿಜೆಪಿಯವರಲ್ಲ. ಅಂದು ಅಧಿಕಾರದಲ್ಲಿದ್ದ ಪಕ್ಷ ಬಿಜೆಪಿಯಲ್ಲ. ಅಂದು ಮುಖ್ಯಮಂತ್ರಿ ಆಗಿದ್ದವರು ಎಚ್‌.ಡಿ.ದೇವೇಗೌಡರು. 2ನೇ ಬಾರಿ ಆ ಪುಸ್ತಕ ಪುನರ್‌ ಮುದ್ರಣಗೊಂಡಿದೆ. ಆ ಸಂದರ್ಭದಲ್ಲಿ ದೇವೇಗೌಡರೇ ಆ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಉರಿಗೌಡ, ನಂಜೇಗೌಡರೇ ಟಿಪ್ಪುವನ್ನು ಕೊಂದಿದ್ದು ಎಂದು ನಾವು ಹೇಳುತ್ತಿದ್ದೇವೆ. ಬೇಕಿದ್ದರೆ ಇದರ ಬಗ್ಗೆ ಇನ್ನಷ್ಟುಸಂಶೋಧನೆಗಳಾಗಲಿ ಎಂದರು.

ಶಿವಮೊಗ್ಗ ಡಿಸಿ ಕಚೇರಿ ಎದುರು ನಿಂತು ಅಜಾನ್‌ ಕೂಗಿದ ಯುವಕ: ವಿಡಿಯೋ ವೈರಲ್‌

ಟಿಪ್ಪುವಿನ ನೀತಿಯನ್ನು ನಾವು ಮುಂದಿಟ್ಟರೆ ಅದು ಮುಸಲ್ಮಾನರ ವಿರುದ್ಧ ಅಲ್ಲ:

ಟಿಪ್ಪುವಿನ ನೀತಿಯನ್ನು ನಾವು ಮುಂದಿಟ್ಟರೆ ಅದು ಮುಸಲ್ಮಾನರ ವಿರುದ್ಧ ಎಂದು ಮುಸಲ್ಮಾನರು ಭಾವಿಸಬಾರದು. ಅವರು ಟಿಪ್ಪು, ಲಾಡೆನ್‌, ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ಬೆಂಕಿ ಹಾಕಿದವರೊಂದಿಗೆ ಗುರುತಿಸಿಕೊಳ್ಳುವ ಪ್ರಯತ್ನ ಮಾಡಿದರೆ ಜಿನ್ನಾ ಮಾನಸಿಕತೆಯಲ್ಲಿರುವವರು ಎನ್ನಿಸುತ್ತೆ. ಮುಸ್ಲಿಮರು ತಮ್ಮನ್ನು ಗುರುತಿಸಿಕೊಳ್ಳಲು ಸಂತ ಶಿಶುನಾಳ ಶರೀಫರಿದ್ದಾರೆ. ಎಪಿಜೆ ಅಬ್ದುಲ್‌ ಕಲಾಂ ಇದ್ದಾರೆ, ಕ್ಯಾಪ್ಟನ್‌ ಅಬ್ದುಲ್‌ ಹಮೀದ್‌ ಇದ್ದಾರೆ. ಇಬ್ರಾಹಿಂ ಸುತಾರ, ಹಾಜಬ್ಬ ಅಂತಹವರೆಲ್ಲಾ ಇದ್ದಾರೆ. ಅವರ ಮೂಲಕ ಗುರುತಿಸಿಕೊಂಡರೆ ಹಿಂದೂಗಳಿಗೂ ನಮ್ಮವರು ಎನ್ನಿಸುತ್ತೆ ಎಂದರು.

ಸಿದ್ದರಾಮಯ್ಯ ರಾಜ್ಯದ ನಿರ್ವೀವ ನಾಯಕ, ಆದರೆ ಕಾಂಗ್ರೆಸ್ಸಿಗರಿಗೆ ಪಾಕಿಸ್ತಾನ ಸೇಫ್: ಸಿ.ಟಿ.ರವಿ

ಇದೇ ವೇಳೆ, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಅವರು, ಕಾಂಗ್ರೆಸ್‌ ನಾಯಕನಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸುರಕ್ಷತೆ ಇಲ್ಲದಿದ್ದರೆ ಅವರ ಪಾರ್ಟಿಗೆ ಹೇಗೆ ಸುರಕ್ಷತೆ ಇರುತ್ತದೆ. ನಾಯಕನೆ ಗೆದ್ದು ಬರೋದು ಕಷ್ಟವಾದರೆ, ಪಕ್ಷ ಹೇಗೆ ಗೆದ್ದು ಬರುತ್ತೆ, ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸುರಕ್ಷಿತವಾದ ಸ್ಥಳ ಇಲ್ಲ ಎಂದು ಟೀಕಿಸಿದರು.

click me!