ಕಾಂಗ್ರೆಸ್ ಅವಧಿಯಲ್ಲಿ ಭಾರತವನ್ನ ಹೀಯಾಳಿಸಲಾಗ್ತಿತ್ತು: ಲಕ್ಷ್ಮಣ ಸವದಿ

By Suvarna News  |  First Published Mar 20, 2023, 9:49 PM IST

ವಿಜಯಪುರ  ನಾಗಠಾಣ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ರೋಡ್ ಶೋ ನಡೆಸಿದೆ. ವಿಜಯ ಸಂಕಲ್ಪ ಯಾತ್ರೆಯಲ್ಲಿ ಸವದಿ, ಕಾರಜೋಳ ಭಾಗಿ. ಇನ್ನು 25ರಂದು ದಾವಣಗೆರೆಯಲ್ಲಿ ಈ ವಿಜಯಸಂಕಲ್ಪ ಯಾತ್ರೆಯ ಮಹಾಸಂಗಮ ಕಾರ್ಯಕ್ರಮ ನಡೆಯಲಿದೆ.


ವಿಜಯಪುರ (ಮಾ.20): ಇಂದು ನಮ್ಮ ನಾಲ್ಕನೇ ತಂಡದ ಕೊನೆಯ ಮತಕ್ಷೇತ್ರ ಇಂಡಿಯಲ್ಲಿ ಕೊನೆಯಾಗುತ್ತಿದ್ದು, 25ರಂದು ದಾವಣಗೆರೆಯಲ್ಲಿ ಈ ವಿಜಯಸಂಕಲ್ಪ ಯಾತ್ರೆಯ ಮಹಾಸಂಗಮ ಕಾರ್ಯಕ್ರಮ ನಡೆಯಲಿದ್ದು, ಅಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗಿಯಾಗಲಿದ್ದಾರೆ ಎಂದು ಮಾಜಿ ಡಿಸಿಎಂ  ಲಕ್ಷ್ಮಣ ಸವದಿ ಹೇಳಿದ್ದಾರೆ. ನಾಗಠಾಣ ಕ್ಷೇತ್ರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, 2023ರಲ್ಲಿ ರಾಜ್ಯದಲ್ಲಿ ಹಾಗೂ 2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಹಾಗೂ ಜನರು ಸಂಕಲ್ಪ ಮಾಡುವ ಯಾತ್ರೆಯಾಗಿದೆ. ಮೇ ತಿಂಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಂಕಣ ಬದ್ಧರಾಗಿರಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಅವಧಿಯಲ್ಲಿ ಭಾರತವನ್ನ ಹೀಯಾಳಿಸಲಾಗ್ತಿತ್ತು: ಸವದಿ!
ಈ ಮೊದಲು ಭಾರತವನ್ನು ಭಿಕ್ಷುಕರ, ಬಡವರ ದೇಶ ಎಂದು ಹಿಯಾಳಿಸುತ್ತಿದ್ದರು. ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ಮೇಲೆ ಅಮೆರಿಕಾ ಕೂಡಾ ಗೌರವ ನೀಡುತ್ತಿದೆ, ನಮ್ಮ ಪ್ರಧಾನಿಯವರ ನೀತಿಯನ್ನು ಬೇರೆ ರಾಷ್ಟ್ರಗಳು ಕೂಡಾ ಅಳವಡಿಸಿಕೊಳ್ಳುತ್ತಿವೆ ಎಂದು  ಲಕ್ಷ್ಮಣ ಸವದಿ ಹೇಳಿದರು.

Tap to resize

Latest Videos

ಸಚಿವ ಗೋವಿಂದ ಕಾರಜೋಳ ಭಾಷಣ:
ಇದೇ ವೇಳೆ ಮಾತನಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಈ ವಿಜಯ ಸಂಕಲ್ಪಯಾತ್ರೆಯಲ್ಲಿ ಸೇರುತ್ತಿರುವ ಜನರನ್ನ ನೋಡಿದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಪ್ರಧಾನಿ ಮೋದಿಯವರ ಕೈ ಬಲಪಡಿಸಲು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಆಶೀರ್ವಾದ ಮಾಡಬೇಕು ಎಂದು ಕರೆನೀಡಿದರು.

ಈ ಯಾತ್ರೆಯ ಮೂಲಕ ನಾವು ಆಶೀರ್ವಾದ ಬೇಡುತ್ತಿದ್ದು, ಬಿಜೆಪಿಗೆ ಮತ ನೀಡಬೇಕು ಎಂದರು. ಅಲ್ಲದೆ ಕಳೆದ ಚುನಾವಣೆಯಲ್ಲಿ ಮೈಮರೆತಿದ್ದರಿಂದ ಕೆಲವೇ ಮತಗಳ ಅಂತರದಲ್ಲಿ ಸೋತೆವು, ಈ ಬಾರಿ ಹಾಗಾಗಬಾರದು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ಕರೆ ನೀಡಿದರು.

ಅಕ್ರಮ ಮರಳುಗಾರಿಕೆ ವಿರುದ್ದ ಧ್ವನಿ ಎತ್ತಿದ್ರೆ ಹುಷಾರ್!, ಉಡುಪಿಯಲ್ಲಿ ವ್ಯಕ್ತಿ ಮೇಲೆ ಹಲ್ಲೆ

ಬಿಜೆಪಿ ಬೆಳಗಾವಿ ವಿಭಾಗಿಯ ಪ್ರಭಾರಿ ಚಂದ್ರಶೇಖರ ಕವಟಗಿ ಮಾತನಾಡಿ, ನಾಗಠಾಣ ಮತಕ್ಷೇತ್ರದ  ಅಭ್ಯರ್ಥಿ ಗೋಪಾಲ ಕಾರಜೋಳ ಅವರನ್ನು ಗೆಲ್ಲಿಸಿ ಎನ್ನುವ ಮೂಲಕ ನಾಗಠಾಣಕ್ಕೆ ಕಾರಜೋಳ ಅವರೇ ಅಭ್ಯರ್ಥಿ ಎಂದು ಪರೋಕ್ಷವಾಗಿ ಘೋಷಣೆ ಮಾಡಿದರು. ಇದಕ್ಕೆ ಧ್ವನಿಗೂಡಿಸಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ನಿಮ್ಮ ಮನಸ್ಸಿನಲ್ಲಿರುವ ವ್ಯಕ್ತಿಯೇ ಖಂಡಿತವಾಗಿಯೂ ಈ ಕ್ಷೇತ್ರದ ಅಭ್ಯರ್ಥಿ ಆಗಲಿದ್ದಾರೆ, ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಿಮ್ಮದು ಎನ್ನುವ ಮೂಲಕ ಗೋಪಾಲ ಕಾರಜೋಳ ಅವರೇ ಅಭ್ಯರ್ಥಿ ಎಂದು ಸೂಚ್ಯವಾಗಿ ತಿಳಿಸಿದರು. ಈ ವೇಳೆ ಗೋಪಾಲ್ ಕಾರಜೋಳ ಅವರಿಗೆ ಅಭಿಮಾನಿಗಳು ಜೈಕಾರ ಹಾಕಿದರು.

ಬಳ್ಳಾರಿ ಜಿಲ್ಲಾಡಳಿತದಿಂದ 1ಲಕ್ಷಕ್ಕೂ ಹೆಚ್ಚು ನಕಲಿ ಮತದಾರರ ಹೆಸರು ಡಿಲೀಟ್!

ಪಾಕಿಸ್ತಾನದಲ್ಲೂ ಬಿಜೆಪಿ ಬಾವುಟ ಅರಳಿದೆ: ಲಕ್ಷ್ಮಣ ಸವದಿ 
ಪಾಕಿಸ್ತಾನದಲ್ಲಿಯೂ ಬಿಜೆಪಿ ಬಾವುಟ ಅರಳಿದ್ದನ್ನು ಮಾಧ್ಯಮದಲ್ಲಿ ನೋಡಿದ್ದೆ, ಇದು ಪಾಕಿಸ್ತಾನದಲ್ಲಿಯೂ ಬಿಜೆಪಿ ಅಧಿಕ್ಕಾರಕ್ಕೆ ಬರಬೇಕು ಹಾಗೂ ಮೋದಿಯಂತಹ ನಾಯಕ ಬೇಕು ಎನ್ನುವುದನ್ನು ಅಲ್ಲಿಯ ಜನ ಬಯಸುತ್ತಿದ್ದಾರೆ ಎಂಬುದು ತೋರಿಸುತ್ತದೆ ಎಂದು ಮಾಜಿ ಡಿಸಿಎಂ ಸವದಿ  ಹೇಳಿದರು. ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ, ಬಿಜೆಪಿ ಆಕಾಂಕ್ಷಿ ಗೋಪಾಲ ಕಾರಜೋಳ ಸೇರಿದಂತೆ ಅನೇಕರು ಈ ಯಾತ್ರೆಯಲ್ಲಿ ಭಾಗವಹಿಸಿದ್ದರು.

click me!