
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 6 ತಾಲೂಕುಗಳಿವೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲ. ಜಿಲ್ಲಾಸ್ಪತ್ರೆಯ ಈ ದುಸ್ಥಿತಿಗೆ ಯಾರು ಹೊಣೆ? ಸದ್ಯಕ್ಕೆ ಉತ್ತರ ಗೊತ್ತಿಲ್ಲ. ಆದರೆ ಈ ವ್ಯವಸ್ಥೆ ಮಾತ್ರ ಹಾಗೆ ಮುಂದುವರಿದಿದೆ.
ಖುದ್ದು ಜಿಲ್ಲಾ ವೈದ್ಯಾಧಿಕಾರಿಗಳೆ ಹೇಳುವ ಪ್ರಕಾರ ವೆಂಟಿಲೇಟರ್ ಇಲ್ಲ. ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನ ಆಗಿಲ್ಲ. ಒಟ್ಟಿನಲ್ಲಿ ಭಾಷಣ ಮಾಡುವ ದೊಡ್ಡವರ ದಂಡಿನ ನಡುವೆ ಜಿಲ್ಲಾಸ್ಪತ್ರೆಯ ಕೂಗು ಮಾತ್ರ ಯಾರಿಗೂ ಕೇಳುತ್ತಿಲ್ಲ.
"
"