ಲೋಕಸಭಾ ಚುನಾವಣೆ: ಎಲ್ಲ ಕಾಂಗ್ರೆಸ್ ಸಂಸದರಿಗೂ ಟಿಕೆಟ್ ಪಕ್ಕಾ

By Web Desk  |  First Published Aug 22, 2018, 1:13 PM IST

ಎಲ್ಲ ಪಕ್ಷಗಳಿಂದಲೂ ಲೋಕಸಭಾ ಚುನಾವಣೆಗೆ ಸಕಲ ತಯಾರಿ ನಡೆಯುತ್ತಿದೆ. ರಾಜ್ಯದಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ನಡೆಸುತ್ತಿದ್ದು, ಚುನಾವಣೆಗೂ ಈ ಮೈತ್ರಿ ಮುಂದುವರಿಯುವ ಸಾಧ್ಯತೆ ಇದೆ. ಆದರೆ, ಪ್ರಸ್ತುತ ಕಾಂಗ್ರೆಸ್ ಸಂಸದರಿಗೆ ಟಿಕೆಟ್ ಕೈ ತಪ್ಪೋಲ್ಲ ಎಂದಿದ್ದಾರೆ ಚಿಕ್ಕಾಬಳ್ಳಾಪುರ ಸಂಸದ ವೀರಪ್ಪ ಮೋಯ್ಲಿ.


ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ ಸರ್ವ ಪಕ್ಷಗಳು ಸನ್ನದ್ಧವಾಗುತ್ತಿವೆ. ಯಾರಿಗೆ ಟಿಕೆಟ್ ಸಿಗುತ್ತೋ, ಬಿಡುತ್ತೋ ಗೊತ್ತಿಲ್ಲ. ಆದರೆ, ಎಲ್ಲರೂ ತಮಗೆ ಟಿಕೆಟ್ ಗ್ಯಾರಂಟಿ ಎನ್ನುವ ವಿಶ್ವಾಸದಲ್ಲಿದ್ದಾರೆ. ಇಂಥದ್ದೇ ವಿಶ್ವಾಸವನ್ನು ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪ ಮೋಯ್ಲಿ ಸಹ ವ್ಯಕ್ತಪಡಿಸಿದ್ದು, ಎಲ್ಲ ಕಾಂಗ್ರೆಸ್ ಸಂಸದರಿಗೂ ಟಿಕೆಟ್ ಪಕ್ಕಾ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಇದರಿಂದ ಹಾಲಿ ಕಾಂಗ್ರೆಸ್ ಸಂಸದರಿಗೆ ಯಾವುದೇ ಪರಿಣಾಮ ಬೀರುವುದಿಲ್ಲವೆಂಬುವುದು ಅವರ ನಂಬಿಕೆ.

Tap to resize

Latest Videos

ಎತ್ತಿನ ಹೊಳೆಯಿಂದ ಹಾಸನದಲ್ಲಿ ಗುಡ್ಡ ಕುಸಿತ?
ಮಳೆಗೆ ಕೊಡಗು ಜರ್ಜರಿತವಾಗಿದೆ. ಹಾಸನ ಹಾಗೂ ಚಿಕ್ಕಮಗಳೂರಿನಲ್ಲಿಯೂ ಮಳೆಯ ಭೀತಿ ಕಾಡುತ್ತಿದೆ. ಸಕಲೇಶಪುರದಲ್ಲಿಯೂ ಗುಡ್ಡ ಕುಸಿತವಾಗಿದ್ದು, ಇದಕ್ಕೆ ಎತ್ತಿನ ಹೊಳೆ ಯೋಜನೆಯೇ ಕಾರಣವೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ, ಯೋಜನೆಯನ್ನು ವೈಜ್ಞಾನಿಕವಾಗ ಕೈ ಗೆತ್ತಿಕೊಂಡಿದ್ದು, ಗುಡ್ಡ ಕುಸಿತಕ್ಕೆ ಇದು ಕಾರಣವಲ್ಲವೆಂದು ಮೊಯ್ಲಿ ಹೇಳಿದ್ದಾರೆ. 

ಅಟಲ್ ಅಸ್ಥಿ ನದಿಗಳಿಗೆ:
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನು ರಾಜ್ಯದ ಎಲ್ಲ ನದಿಗಳಲ್ಲಿಯೂ ವಿಸರ್ಜಿಸಲಿದ್ದು, ಇದನ್ನು ತರಲು ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದಾರೆ. ಆದರೆ, ಈ ಬಗ್ಗೆ ಕೆಲವರು ಅಪ ಪ್ರಚಾರ ಮಾಡುತ್ತಿರುವುದನ್ನು ಮೊಯ್ಲಿ ಅವರು ಖಂಡಿಸಿದ್ದಾರೆ.

ವಾಜಪೇಯಿ ಅವರು ಉತ್ತಮ ಪ್ರಧಾನಿಯಾಗಿದ್ದವರು, ಕವಿಗಳು ಕೂಡ. ಅವರ ಚಿತಾ ಭಸ್ಮ ಎಲ್ಲ ನದಿಗಳಲ್ಲೂ ವಿಸರ್ಜಿಸೋದು ಸ್ಚಾಗತಾರ್ಹ, ಇದನ್ನು ಯಾರೂ ರಾಜಕೀಯದಿಂದ ನೋಡಬಾರದು. ದೇಶದಲ್ಲಿ ಶಾಂತಿ, ಸಹಿಷ್ಣುತೆ ಬೇಕಾಗಿದೆ. ಈ ನಿಟ್ಟಿನಲ್ಲಿ ‌ಪ್ರಧಾನಿ ಮೋದಿಯವರೇ ಮಾತನಾಡಬೇಕಿದೆ. ಗಲಭೆಗಳು ಮಾಡುವವರನ್ನು, ಶಾಂತಿಭಂಗ ಉಂಟುಮಾಡೊದನ್ನ ನಿಯಂತ್ರಿಸಬೇಕಿದೆ ಎಂದು ಆಗ್ರಹಿಸಿದರು.

ರಾಜ್ಯದ 8 ನದಿಗಳಲ್ಲಿ ಅಸ್ಥಿ ವಿಸ್ರರ್ಜನೆ

click me!