ಪ್ರಕರಣವೊಂದರ ನಿರ್ವಹಣೆಯಲ್ಲಿ ಈ ಮೂವರು ಪೊಲೀಸರು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆ ಎಸ್ಪಿ ಶ್ರೀಹರಿಬಾಬು ಅಮಾನತು ಮಾಡಿದ್ದಾರೆ. ಈ ಪ್ರಕರಣದಲ್ಲಿ ಈ ಮೂವರ ವಿರುದ್ಧ ಇಲಾಖೆ ವಿಚಾರಣೆಗೂ ಸೂಚಿಸಲಾಗಿದೆ.
ಹೊಸಪೇಟೆ(ಮೇ.25): ಪ್ರಕರಣವೊಂದರಲ್ಲಿ ಕರ್ತವ್ಯಲೋಪವೆಸಗಿದ ಆರೋಪದ ಮೇರೆಗೆ ನಗರದ ಠಾಣೆಯ ಎಎಸ್‌ಐ ಸೇರಿ ಮೂವರು ಪೊಲೀಸರನ್ನು ವಿಜಯನಗರ ಜಿಲ್ಲಾ ಎಸ್ಪಿ ಶ್ರೀಹರಿಬಾಬು ಅಮಾನತುಗೊಳಿಸಿದ್ದಾರೆ.
ಪಟ್ಟಣ ಠಾಣೆಯ ಎಎಸ್‌ಐ ಕೋದಂಡಪಾಣಿ, ಮುಖ್ಯಪೇದೆ ನಾಗರಾಜ, ಪೇದೆ ಗುರುಬಸವರಾಜ ಅಮಾತುಗೊಂಡ ಸಿಬ್ಬಂದಿ. ಇನ್ನು ಪಟ್ಟಣ ಠಾಣೆ ಪಿಐ ಬಾಳನಗೌಡರ ವಿರುದ್ಧವೂ ಇಲಾಖೆ ವಿಚಾರಣೆಗಾಗಿ ಮೇಲಧಿಕಾರಿಗಳಿಗೆ ವರದಿ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
undefined
ಪೊಲೀಸ್ ಇಲಾಖೆಯನ್ನೂ ಬಿಡ್ತಿಲ್ಲ ಹ್ಯಾಕರ್ಸ್; ವಿಜಯನಗರ ಎಸ್ಪಿ ಹೆಸರಲ್ಲಿ ನಕಲಿ ಖಾತೆ , ಹಣಕ್ಕೆ ಬೇಡಿಕೆ!
ಪ್ರಕರಣವೊಂದರ ನಿರ್ವಹಣೆಯಲ್ಲಿ ಈ ಮೂವರು ಪೊಲೀಸರು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆ ಎಸ್ಪಿ ಶ್ರೀಹರಿಬಾಬು ಅಮಾನತು ಮಾಡಿದ್ದಾರೆ. ಈ ಪ್ರಕರಣದಲ್ಲಿ ಈ ಮೂವರ ವಿರುದ್ಧ ಇಲಾಖೆ ವಿಚಾರಣೆಗೂ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣವೊಂದರ ನಿರ್ವಹಣೆಯಲ್ಲಿ ಕರ್ತವ್ಯಲೋಪವೆಸಗಿರುವುದು ಕಂಡುಬಂದ ಹಿನ್ನೆಲೆ ಹೊಸಪೇಟೆಯ ಪಟ್ಟಣ ಠಾಣೆಯ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಅಂತ ವಿಜಯನಗರ ಎಸ್ಪಿ ಶ್ರೀಹರಿಬಾಬು ತಿಳಿಸಿದ್ದಾರೆ.