ದೇವಸ್ಥಾನ, ಮಸೀದಿಗಳಿಗೂ ಸರ್ಕಾರದ ಅನುದಾನ ಸ್ಥಗಿತ; ಶಾಸಕ ಮಾನೆ ಆರೋಪ

By Kannadaprabha News  |  First Published Dec 10, 2022, 1:26 PM IST
  • ದೇವಸ್ಥಾನ, ಮಸೀದಿಗಳಿಗೂ ಸರ್ಕಾರದ ಅನುದಾನ ಸ್ಥಗಿತ
  • ಬಾಳಿಹಳ್ಳಿ, ಸಾವಿಕೇರಿಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕ ಮಾನೆ ಆರೋಪ

ಹಾನಗಲ್ಲ (ಡಿ.10): ದೇವಸ್ಥಾನ, ಮಸೀದಿಗಳಿಗೂ ಈ ಸರಕಾರ ಅನುದಾನ ಸ್ಥಗಿತಗೊಳಿಸಿದೆ. ಪ್ರವಾಹದ ಸಂದರ್ಭದಲ್ಲಿ ಬಿದ್ದ ಮನೆಗಳಿಗೆ ಮೊದಲ ಕಂತಿನ ಪರಿಹಾರ ಬಿಡುಗಡೆಗೊಳಿಸಿದ್ದನ್ನು ಬಿಟ್ಟರೆ ಇದುವರೆಗೂ ಸಹ ಪೂರ್ಣ ಪ್ರಮಾಣದ ಪರಿಹಾರ ಬಿಡುಗಡೆ ಮಾಡದೇ ಸಂತ್ರಸ್ತರನ್ನು ಸಂಕಷ್ಟಕ್ಕೆ ನೂಕಿದೆ. ಹಣಕಾಸಿನ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ವಿವಿಧ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನಕ್ಕೆ ವಿಳಂಬ ನೀತಿ ಅನುಸರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಆಪಾದಿಸಿದರು.

ಹಾನಗಲ್ಲ ತಾಲೂಕಿನ ಬಾಳಿಹಳ್ಳಿ, ಸಾವಿಕೇರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ, ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು, ಸಾರ್ವಜನಿಕರ ಬೇಡಿಕೆ, ಅಪೇಕ್ಷೆ ಹೆಚ್ಚಿದೆ. ಆದರೆ ಅದಕ್ಕೆ ಅನುಗುಣವಾಗಿ ಅನುದಾನ ದೊರಕಿಸುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಅನಿರೀಕ್ಷಿತವಾಗಿ ಹಾನಗಲ್ಲ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿದೆ. ಈ ಚುನಾವಣೆ ಯಾರೂ ಸಹ ನಿರೀಕ್ಷಿಸಿರಲಿಲ್ಲ. ಸಂವಿಧಾನಾತ್ಮಕವಾಗಿ ಚುನಾವಣೆ ಎದುರಿಸಿ, ಗೆದ್ದಿದ್ದೇನೆ. ಅವಧಿ ಅಲ್ಪ ಇದ್ದರೂ ಕೂಡ ಜನರ ಭಾವನೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದೇನೆ. ಮೊದಲ ಹಂತದಲ್ಲಿ ಗ್ರಾಪಂ ಕೇಂದ್ರ ಸ್ಥಾನಗಳಿಗೆ ಭೇಟಿ ನೀಡಿ, ಬಳಿಕ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಜನರೊಂದಿಗೆ ಸಂಪರ್ಕ ಸಾಧಿಸಿದ್ದೇನೆ. ನನ್ನ ಹಂತದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳಿಗೆ ಮುಕ್ತಿ ದೊರಕಿಸಿದ್ದೇನೆ ಎಂದರು.

Tap to resize

Latest Videos

undefined

ಹಾನಗಲ್ಲ ಪುರಸಭೆ ಅಧ್ಯಕ್ಷ ಅನಂತವಿಕಾಸ ನಿಂಗೋಜಿ, ಜಿಪಂ ಮಾಜಿ ಸದಸ್ಯ ಮಹದೇವಪ್ಪ ಬಾಗಸರ, ತಾಪಂ ಮಾಜಿ ಸದಸ್ಯ ಮಹದೇವಪ್ಪ ಪಾಣಿಗಟ್ಟಿ, ಮುಖಂಡರಾದ ವೀರೇಶ ಬೈಲವಾಳ, ಯಲ್ಲಪ್ಪ, ಬಸಣ್ಣ, ಪರಶುರಾಮ್‌, ಭೀಮಣ್ಣ, ಫಕ್ಕೀರೇಶ ಮೊದಲಾದವರು ಈ ಸಂದರ್ಭದಲ್ಲಿದ್ದರು.

ಹಾನಗಲ್ ಕ್ಷೇತ್ರದವರು ಎಂದರೆ ಸರ್ಕಾರಕ್ಕೆ ಮಲತಾಯಿ ಮಕ್ಕಳು ಇದ್ದ ಹಾಗೆ: ಶಾಸಕ ಶ್ರೀನಿವಾಸ್ ಮಾನೆ

ದೇವಸ್ಥಾನ, ಮಸೀದಿಗಳಿಗೂ ಈ ಸರಕಾರ ಅನುದಾನ ಸ್ಥಗಿತಗೊಳಿಸಿದೆ. ಪ್ರವಾಹದ ಸಂದರ್ಭದಲ್ಲಿ ಬಿದ್ದ ಮನೆಗಳಿಗೆ ಮೊದಲ ಕಂತಿನ ಪರಿಹಾರ ಬಿಡುಗಡೆಗೊಳಿಸಿದ್ದನ್ನು ಬಿಟ್ಟರೆ ಇದುವರೆಗೂ ಸಹ ಪೂರ್ಣ ಪ್ರಮಾಣದ ಪರಿಹಾರ ಬಿಡುಗಡೆ ಮಾಡದೇ ಸಂತ್ರಸ್ತರನ್ನು ಸಂಕಷ್ಟಕ್ಕೆ ನೂಕಿದೆ

ಶ್ರೀನಿವಾಸ ಮಾನೆ, ಹಾನಗಲ್ಲ ಶಾಸಕ

click me!