
ಬಿ. ಶೇಖರ್ ಗೋಪಿನಾಥಂ
ಮೈಸೂರು: ಬಟರ್ ಪಿಯರ್, ಅಲಿಗೇಟರ್ ಪಿಯರ್ ಅಥವಾ ಬೆಣ್ಣೆ ಹಣ್ಣು ಎಂದೂ ಕರೆಯುವ ಅವಕಾಡೊ ಮೆಕ್ಸಿಕೋದ ಕ್ಯಾರಿಬೀನ್ ತವರಿಗೆ ಸೇರಿದ ಒಂದು ಮರವಾಗಿದ್ದು, ವಿದೇಶ ಹಾಗೂ ಭಾರತದಲ್ಲೂ ಸೂಪರ್ ಫುಡ್, ದುಬಾರಿ ಹಣ್ಣಾಗಿ ಗುರುತಿಸಿಕೊಂಡಿದೆ. ಇದರಿಂದ ಅನೇಕ ಬಗೆಯ ಸ್ವಾದಿಷ್ಟ ತಿನಿಸುಗಳನ್ನು ತಯಾರಿಸಬಹುದಾಗಿದ್ದು, ಫುಡ್ಡಿಂಗ್, ಸ್ಮೂಥಿಗಳು, ಸಲಾಡ್ ಗಳಿಗೂ ಇದನ್ನು ಬಳಸಲಾಗುತ್ತದೆ.
ಬೆಣ್ಣೆ ಹಣ್ಣು ತೈಲ ಪದಾರ್ಥದ ಅತ್ಯುತ್ತಮ ಮೂಲ, ಸುಲಭವಾಗಿ ಜೀರ್ಣಗೊಳ್ಳುತ್ತದೆ. ಇದರ ಸೇವನೆಯಿಂದ ಯಾವುದೇ ದುಷ್ಪರಿಣಾಮಗಳಿರುವುದಿಲ್ಲ. ಬಾಳೆ ಹಣ್ಣಿನಲ್ಲಿ ಇರುವುದಕ್ಕಿಂತ ಎರಡು ಪಟ್ಟು ಹೆಚ್ಚು ಶಕ್ತಿ ಈ ಹಣ್ಣಿನಲ್ಲಿದೆ. ಇದನ್ನು ತಿನ್ನಿತ್ತಿದ್ದಲ್ಲಿ ರಕ್ತವೃದ್ಧಿ ಹೆಚ್ಚುತ್ತದೆ. ಇದು ಅಧಿಕ ಶಕ್ತಿಯನ್ನು ಒದಗಿಸಬಲ್ಲದು, ಮಧುಮೇಹ ರೋಗಿಗಳಿಗೆ ಈ ಹಣ್ಣನ್ನು ಸೇವಿಸಲು ನಿರ್ದೇಶಿಸುತ್ತಾರೆ. ತಿರಳು ಕೊಬ್ಬಿನಾಂಶವನ್ನು ಹೇರಳವಾಗಿ ಹೊಂದಿದ್ದು, ತಿನ್ನಲು ಮೃದುವಾಗಿರುತ್ತದೆ. ಇದನ್ನು ಹೆಚ್ಚಾಗಿ ಸಕ್ಕರೆ, ಜೇನುತುಪ್ಪ ಅಥವಾ ಉಪ್ಪನ್ನು ಸೇರಿಸಿ ಬಳಸಲಾಗತ್ತದೆ.
ಬೆಣ್ಣು ಹಣ್ಣು ಜೂನ್ - ಜುಲೈ ತಿಂಗಳು ನಾಟಿಗೆ ಸೂಕ್ತ ಕಾಲ. ನೀರು ಬಸಿಯುವ ಗೋಡು ಮಣ್ಣು ಅತ್ಯುತ್ತಮ. ಫಲವತ್ತಾದ ಹಾಗೂ ಆಳವಿರುವ, ಹೆಚ್ಚು ತೇವ ಹಿಡಿಯುವ ಕಪ್ಪು ಮಣ್ಣಿನ ಭೂಮಿ, ಜಿಗುಟು ಮಣ್ಣು ಅತೀ ಸೂಕ್ತವಾಗಿರುತ್ತದೆ. ಮಣ್ಣಿನ ಆಳ ಕನಿಷ್ಠ 1 ಮೀಟರ್ ಇರಬೇಕು.
ಹ್ಯಾಸ್, ಪ್ಲೋರಿಡಾ ಗೋಲ್ಡ, ಪಿನ್ಕೆರ್ಟಾನ್, ಅಕಾ ಸುಪ್ರೀಮಮ್, ಗ್ರೀನ್ ಗೋಲ್ಡ, ಬೆಂಗಳೂರು ಗ್ರ್ಯಾಂಡ, ಎಸ್ ಪಿಆರ್ ಪ್ರೊಲಿಫರ್, ಬಿಜಿಎಸ್ ಗೋಲ್ಡ, ಕಾವೇರಿ ಗ್ರ್ಯಾಂಡ ಮುಂತಾದ ತಳಿಗಳನ್ನು ಹವಾಮಾನಕ್ಕೆ ಅನುಗುಣವಾಗಿ ರಾಜ್ಯದ ವಿವಿಧ ಪ್ರದೇಶದಲ್ಲಿ ಬೆಳೆಯುತ್ತಾರೆ.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್ಆರ್) ಅರ್ಕಾ ಕೂರ್ಗ್ ರವಿ ತಳಿಯು ಪ್ರತಿ ವರ್ಷವೂ ನಿಯಮಿತವಾಗಿ ಹಣ್ಣು ನೀಡುವುದು, ಹೆಚ್ಚಿನ ಇಳುವರಿ ಮತ್ತು ಪ್ರತಿ ಹಣ್ಣಿನ ತೂಕ 400 ರಿಂದ 600 ಗ್ರಾಂ ಇರುತ್ತದೆ. ಶೇ.80 ತಿರುಳಿನ ಅಂಶವಿರುತ್ತದೆ. ಪ್ರತಿ ಗಿಡಕ್ಕೆ 185 ಕೆ.ಜಿ. ಹಣ್ಣುಗಳನ್ನು ನೀಡುತ್ತದೆ. ಇದು ದುಂಡಾಗಿದ್ದು, ಶೇ.14- 16 ತೈಲಾಂಶವನ್ನು ಹೊಂದಿರುತ್ತದೆ.
ಹಾಗೆಯೇ, ಅರ್ಕಾ ಸುಪ್ರೀಂ ತಳಿಯ ಹಣ್ಣುಗಳು ಉದ್ದವಾಗಿದ್ದು, ಶೇ.70 ರಷ್ಟು ತಿರುಳನ್ನು ಹೊಂದಿರುತ್ತದೆ. ಈ ಹಣ್ಣು ಶೇ.16- 18 ರಷ್ಟು ತೈಲಾಂಶವನ್ನು ಹೊಂದಿರುತ್ತದೆ. ಎರಡೂ ತಳಿಗಳು ನಾಟಿ ಮಾಡಿದ ಎರಡು ವರ್ಷಕ್ಕೆ ಹಣ್ಣು ಬಿಡಲು ಆರಂಭವಾದರೂ ಐದು ವರ್ಷಗಳ ನಂತರ ಪ್ರತಿ ಸಸಿಯು 200 ರಿಂ0 250 ಕೆ.ಜಿ. ಫಸಲು ನೀಡುತ್ತದೆ.
ಬೆಣ್ಣೆ ಹಣ್ಣನ್ನು ಬೀಜ ಮತ್ತು ಕಸಿ ಮೂಲಕ ಸಸಿಗಳನ್ನು ಉತ್ಪಾದಿಸಬಹುದು. ಬೀಜಗಳು 2 ರಿಂದ 3 ವಾರದವರೆಗೆ ಬದುಕ ಬಲ್ಲವು. ಬೀಜಗಳನ್ನು 50 ಸೆ. ಮರಳಿನಲ್ಲಿ ಶೇಖರಿಸುವುದರಿಂದ ಬೀಜಗಳ ಜೀವಿತಾವಧಿಯನ್ನು 4 ವಾರಗಳ ತನಕ ಹೆಚ್ಚಿನಬಹುದು. ಬೀಜದ ಹೊರಪದರಗಳನ್ನು ತೆಗೆದು ಪಾಲಿಬ್ಯಾಗ್ ಗೆ ಹಾಕಿದ 6 ರಿಂದ 8 ತಿಂಗಳಲ್ಲಿ ಸಸಿಗಳು ನಾಟಿಗೆ ಸಿದ್ದವಾಗುತ್ತದೆ. ಈ ರೀತಿ ಬೀಜದಿಂದ ಬೆಳೆದ ಗಿಡಗಳು ಸುಮಾರು 4 ರಿಂದ 5 ವರ್ಷದ ನಂತರ ಇಳುವರಿ ಕೊಡಲು ಪ್ರಾರಂಭಿಸುತ್ತದೆ
ತಾಯಿ ಮರದ ಎಲ್ಲಾ ಗುಣಲಕ್ಷಣಗಳು ಕಸಿ ಮಾಡಿದ ಗಿಡಕ್ಕೆ ಬರುತ್ತವೆ. ಪೆನ್ಸಿಲ್ ಗಾತ್ರದ ಆರೋಗ್ಯವಂತ ಪಾಲಿಬ್ಯಾಗ್ ನಲ್ಲಿ ಗಿಡಗಳು ಮೇಲೆ ಒಂದು ವರ್ಷದ ಹಳೆಯ 2 ಕಣ್ಣುಗಳಿರುವ ತುದಿಕಡ್ಡಿಯನ್ನು ಕಸಿ ಮಾಡಬೇಕು. ಹಸಿರು ಮನೆಯಲ್ಲಿ ಕಸಿ ಮಾಡಿದರೆ ಗಿಡಗಳ ಮೊಳಕೆ ಹೊಡೆಯುವಿಕೆಯ ಯಶಸ್ವಿನ ಪ್ರಮಾಣ ಹೆಚ್ಚು. ಈ ರೀತಿ ಕಸಿ ಮಾಡಿದ ಗಿಡಗಳು ಸುಮಾರು 2 ರಿಂದ 3 ವರ್ಷಗಳ ನಂತರ ಇಳುವರಿ ಕೊಡಲು ಪ್ರಾರಂಭಿಸುತ್ತದೆ.
ಬೀಜದ ಸಸಿ ಅಥವಾ ಕಸಿಗಿಡ ಅಥವಾ ಕಣ್ಣು ಕಸಿಗಿಡಗಳು ಅಥವಾ ಗೂಟಿ ಸಸಿಗಳನ್ನು 6 ಮೀ x 6 ಮೀ ಅಂತರದಲ್ಲಿ ಹೆಕ್ಟರ್ ಗೆ 277 ಗಿಡಗಳನ್ನು ನೆಡಬಹುದಾಗಿದೆ.
ನೆಲಮಟ್ಟದಿಂದ 60- 90 ಸೆಂ.ಮೀ. ಎತ್ತರದವರೆಗೆ ಕಾಂಡ ಹಸನಾಗಿರಬೇಕು. ಅನಂತರ ಸುಳಿಯನ್ನು ಚಿವುಟಿ 3- 4 ಪಕ್ಕ ರೆಂಬೆಗಳು ಬೆಳೆಯಲು ಪ್ರೋತ್ಸಾಹಿಸಬೇಕು. ನಂತರದ ದಿನಗಳಲ್ಲಿ ಕೇವಲ ಹೆಚ್ಚು ನೆರಳಿನಿಂದ ಕೂಡಿದ, ಅಡ್ಡಾದಿಡ್ಡಿಯಾಗಿ ಬೆಳೆದ ಹಾಗೂ ಮುರಿದ ರಂಬೆಗಳನ್ನು ಸವರಬೇಕು.
ಮೊದಲನೆ ವರ್ಷದಲ್ಲಿ ಪ್ರತೀ ಗಿಡಕ್ಕೆ 25 ಕೆ.ಜಿ. ಕೊಟ್ಟಿಗೆ ಗೊಬ್ಬರ ಹಾಗೂ 50:20:50 ಗ್ರಾಂ ಸಾರಜನಕ, ರಂಜಕ, ಪೋಟೈಸಿಯಮ್ ನಂತರದ ದಿನಗಳಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಗೊಬ್ಬರದ ಅಳತೆಯನ್ನು ದ್ವಿಗುಣಗೊಳಿಸಬೇಕು. ಹತ್ತು ವರ್ಷಗಳ ನಂತರ 25 ಕೆ.ಜಿ. ಕೊಟ್ಟಿಗೆ ಗೊಬ್ಬರ ಹಾಗೂ 200:75:200 ಗ್ರಾಂ ಸಾರಜನಕ, ರಂಜಕ, ಪೋಟೈಸಿಯಮ್ ಅನ್ನು ನೀಡಬೇಕು.
ಮಣ್ಣು ಸದಾ ಹಸಿಯಾಗಿರಬೇಕು, ಮಳೆಯಿಲ್ಲದ ದಿನಗಳಲ್ಲಿ ಕ್ರಮವರಿತು 2- 3 ವಾರಗಳಿಗೊಮ್ಮೆ ನೀರು ಹಾಯಿಸಬೇಕು. ಗಿಡಗಳನ್ನು ನೆಟ್ಟ 4- 5 ವರ್ಷದವರೆಗೆ ಸಾಲುಗಳ ಮಧ್ಯೆ ದ್ವಿದಳ ಧಾನ್ಯ, ತರಕಾರಿಗಳು, ಸೊಪ್ಪು ಇತ್ಯಾದಿಗಳನ್ನು ಬೆಳೆಯಹುದು.
ಮಾರ್ಚ್- ಏಪ್ರಿಲ್ ನಲ್ಲಿ ಬಿಟ್ಟ ಹೂವು ಕಾಯಿ ಕಚ್ಚಿ ಆಗಸ್ಟ್- ಸೆಪ್ಟೆಂಬರ್ ಹೊತ್ತಿಗೆ ಹಾಗೂ ನವೆಂಬರ್- ಡಿಸೆಂಬರ್ ನಲ್ಲಿ ಬಿಟ್ಟ ಹೂವು ಕಾಯಿ ಕಚ್ಚಿ ಮೇ- ಜೂನ್ ಹೊತ್ತಿಗೆ ಕೊಯ್ಲಿಗೆ ಬರುತ್ತವೆ. 10- 15 ವರ್ಷದ ಗಿಡಗಳು ಪ್ರತೀ ಹೇಕ್ಟರ್ ಗೆ 15000 ದಿಂದ 30000 ಹಣ್ಣುಗಳು (8 ರಿಂ0 10 ಟನ್) ದೊರೆಯುತ್ತವೆ.
ಹಣ್ಣಿನ ಮೇಲೆ ಕಂದು ಬಣ್ಣದ ಚುಕ್ಕೆಗಳು ವೃತ್ತಾಕಾರದಲ್ಲಿ ಕಾಣಬಹುದು. ನೀರು ಸೋಕಿದ ಕಲೆಗಳು ಕಾಯಿಗಳ ಮೇಲೆ ಕಾಣಬಹುದು. ಇದನ್ನು ಸಿಎಎಸ್ ಸಂಗ್ರಹಣಾ ವಿಧಾನವನ್ನು ಬಳಸಿ 7.2 ಡಿಗ್ರಿ ಸೆಲ್ಸಿಯಸ್ ನಲ್ಲಿ 4 ವಾರಗಳ ಕಾಲ ನಿಯಂತ್ರಿಸಬಹುದು.
ಬಹಳ ಹಾನಿಕಾರದ ರೋಗವಾಗಿದೆ. ನೀರು ನಿಲ್ಲುವ ಪ್ರದೇಶದಲ್ಲಿ ಹೆಚ್ಚಾಗಿರುತ್ತವೆ. ಮೆಟಲಾಕ್ಸಿಲನ್ನು 1 ಗ್ರಾಂ/ ಲೀಟರ್ ನೀರಿನಲ್ಲಿ ಬೆರಸಿ ಬುಡಕ್ಕೆ ಸುರಿಯಬೇಕು.
ಎಲೆಗಳ ತಳಭಾಗದಲ್ಲಿ ಇದ್ದು ಹಸಿರು ಭಾಗವನ್ನೆಲ್ಲಾ ಕೆರೆದು ತಿನ್ನುತ್ತವೆ. ಅವು ಅಧಿಕ ಸಂಖ್ಯೆಯಲ್ಲಿದ್ದಾಗ ಎಲೆಗಳು ಬಿಳಿಚಿಕೊಳ್ಳುತ್ತವೆ. 10 ಲೀ. ನೀರಿಗೆ 25 ಮಿ.ಲೀ ಡೈಕೋಫಾಲ್ ಇಲ್ಲವೇ 20 ಗ್ರಾಂ. ನೀರಿನಲ್ಲಿ ಕರಗುವ ಗಂಧಕ ಬೆರಸಿ ಸಿಂಪಡಿಸಬೇಕು.
ಹೂವು, ಹೀಚು, ಎಲೆ ಮುಂತಾದವುಗಳಿಗೆ ಹಾನಿಯನ್ನು ಉಂಟು ಮಾಡುತ್ತವೆ. ಹಸಿರು ಭಾಗವನ್ನು ಕರೆದು ತಿನ್ನುತ್ತವೆ. ಹೀಗಾಗಿ, ಅಂತಹ ಭಾಗಗಳು ವಿಕಾರಗೊಂಡು ಛಿದ್ರಗೊಳ್ಳುವುವು. 10 ಲೀ. ನೀರಿಗೆ 25 ಮಿ.ಲೀ ಡೈಕೋಫಾಲ್ ಇಲ್ಲವೇ 20 ಗ್ರಾಂ ನೀರಲ್ಲಿ ಕರಗುವ ಗಂಧಕ ಬೆರಸಿ ಸಿಂಪಡಿಸಬೇಕು.
ಎಳೆಯ ಮರಿಗಳು ತಿರುಳನ್ನು ತಿಂದು ಹಣ್ಣು ಕೊಳೆಯುವಂತೆ ಮಾಡುವವು. ಅಂತಹ ಹಣ್ಣು ಉದುರಿ ಬೀಳುತ್ತವೆ. ಅವುಗಳನ್ನು ಸಂಗ್ರಹಿಸಿ ಸುಡಬೇಕು ಹಾಗೂ 10 ಲೀ. ನೀರಿಗೆ 20 ಮಿ.ಲೀ ಮೆಲಾಥಿಯಾನ್ ಮತ್ತು 20 ಗ್ರಾಂ ಸಕ್ಕರೆ ಸೇರಿಸಿ ಸಿಂಪಡಿಸಬೇಕು ಎಂದು ಮೈಸೂರು ತಾಲೂಕಿನ ನಾಗನಹಳ್ಳಿಯ ವಿಸ್ತರಣಾ ಶಿಕ್ಷಣಾ ಘಟಕ, ಸಾವಯವ ಕೃಷಿ ಸಂಶೋಧನಾ ಕೆಂದ್ರದ ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ಸಲಹೆ ನೀಡಿದ್ದಾರೆ.
ರೈತರು ಹೆಚ್ಚಿನ ಮಾಹಿತಿಗಾಗಿ ಮೊ. 96328 59590 ಸಂಪರ್ಕಿಸಬಹುದು.