
ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ, (ಏ.29): ಶ್ವಾನಗಳಿಗೂ ಇಲ್ಲಿ ಕೂಲರ್ ವ್ಯವಸ್ಥೆ ಬೇಕೆ ಬೇಕು...ಅಷ್ಟೇ ಅಲ್ಲ ನಿತ್ಯ ನಾಲ್ಕಾರು ಬಾರಿ ಎಳನೀರು ಕುಡಿಸ್ಬೇಕು. ಅರೇ ಇದೇನಿದು ಎಂದು ಅಚ್ಚರಿಯಾದರೂ ಸತ್ಯ...
ಹೌದು...ಬಳ್ಳಾರಿಯಲ್ಲಿ ಇರೋದು ಎರಡೇ ಕಾಲ ಒಂದು ಬೇಸಿಗೆ ಕಾಲ ಇನ್ನೊಂದು ಬಿರು ಬೇಸಿಗೆ ಕಾಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಯಾಕಂದ್ರೇ ದಿನದಿಂದ ದಿನಕ್ಕೆ ಹೆಚ್ಚಾಗ್ತಿರೋ ಬಿಸಿಲಿನ ತಾಪಕ್ಕೆ ಮನುಷ್ಯರಷ್ಟೇ ಅಲ್ಲ ಇಲ್ಲಿ ಶ್ವಾನಗಳು ತತ್ತರಿಸಿ ಹೋಗ್ತಿವೆ. ಹೀಗಾಗಿ ಪೊಲೀಸ್ ಶ್ವಾನಗಳಿಗೆ ಮನೆಗಳಲ್ಲಿ ಇಟ್ಟಂತೆ ಶ್ವಾನ ಕೊಠಡಿಯಲ್ಲಿ ಕೂಲರ್ ಇಡಲಾಗಿದೆ. ಅಚ್ಚರಿಯಾದರೂ ಇದು ಸತ್ಯ ಸಂಗತಿ. ಪೊಲೀಸ್ ಇಲಾಖೆಯಲ್ಲಿ ಇರೋ ಆರಕ್ಕೂ ಹೆಚ್ಚು ಶ್ವಾನ ಕೊಠಡಿಯಲ್ಲಿ ಕೂಲರ್ ,ಫ್ಯಾನ್ , ಎಕ್ಸಿಟ್ ಫ್ಯಾನ್ ವ್ಯವಸ್ಥೆ ಮಾಡಲಾಗಿದೆ..
Summer Tips: ಎಸಿ, ಕೂಲರ್ ಇಲ್ಲದೆ ಮನೆ ಥಂಡಾ ಥಂಡಾ ಕೂಲ್ ಆಗೋದು ಹೇಗೆ?
ನಿತ್ಯ 40ರ ಗಡಿ ದಾಟುತ್ತಿರೋ ಬಿಸಿಲಿನ ತಾಪಮಾನ
ಹೌದು, ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಯಲ್ಲಿ ಈ ಬಾರಿಯ ಬಿಸಿಲು ಜನರ ತಲೆ ಸುಡೋದ್ರ ಜೊತೆಗೆ ಶ್ವಾನಗಳ ಹೊಟ್ಟೆಯಲ್ಲಿ ಅತಿ ಹೆಚ್ಚು ಝಳ ಬರುವಂತೆ ಮಾಡಿದೆ. ಅದರಲ್ಲೂ ನಿತ್ಯ 40 ರಿಂದ 41,42 ಡಿಗ್ರಿ ವರೆಗೂ ಹೆಚ್ಚಾಗುತ್ತಿರುವ ಬಿಸಿಲಿನ ತಾಪಮಾನ ಇಲ್ಲಿನ ಜನಜೀವನ ಅಸ್ತವ್ಯಸ್ತ ಮಾಡಿದೆ. ಹೀಗಾಗಿ ದಿನಕ್ಕೆ ಶ್ವಾನಗಳನ್ನು ಕೂಲಿಂಗ್ ವ್ಯವಸ್ಥೆಯಲ್ಲಿ ಇಡೋದ್ರ ಜೊತೆಗೆ ನಿತ್ಯ ನಾಲ್ಕಾರು ಬಾರಿ ಎಳೆ ನೀರು ಕುದಿಸಲಾಗುತ್ತದೆ.. ಹೀಗಾಗಿ ಬಳ್ಳಾರಿ ಎಸ್ಪಿ ಸೈದುಲ್ ಅಡಾವತ್ ಸೂಚನೆ ಮೇರೆಗೆ ಇಲ್ಲಿನ ಡಿಅರ್ ವ್ಯಾಪ್ತಿಯ ಪೊಲೀಸರಾದ ಸರ್ಧಾರ್ ಮತ್ತವರ ತಂಡದ ಪೊಲೀಸರು ತಮ್ಮ ಮಕ್ಕಳಂತೆ ಶ್ವಾನಗಳ ಪೋಷಣೆ ಮಾಡ್ತಿದ್ದಾರೆ..
ಬಿಸಿಲಿನ ಝಳಕ್ಕೆ ಶ್ವಾನಕ್ಕೂ ಖಾಯಿಲೆ ಬರುತ್ತದೆ
ಇನ್ನೂ ಮನುಷ್ಯರಿಗೆ ಬಂದಂತ ಬಿಸಿಲಿನ ತಾಪಕ್ಕೆ ಶ್ವಾನಗಳಿಗೂ ಬೇವರು ಬರುತ್ತದೆಯಂತೆ ಆ ಬೆವರನ್ನು ತಡೆಯದೇ ಇದ್ರೇ ಶ್ವಾನಗಳಿಗೆ ಚರ್ಮ ರೋಗ ಸೇರಿದಂತೆ ವಿವಿಧ ರೋಗ ಬರುತ್ತಿದೆ. ಹೀಗಾಗಿ ಶ್ವಾನಗಳಿಗೆ ಸಾಧ್ಯವಾದಷ್ಟು ತಂಪಾಗಿರಲು ವ್ಯವಸ್ಥೆ ಮಾಡಲಾಗಿದೆ..ಇದರ ಜೊತೆಗೆ ಗಂಟೆಗೊಮ್ಮೆ ಸ್ಪಂಜ್ ನಿಂದ ಮೈ ಒರೆಸೋದ್ರ ಜೊತೆಗೆ ಸ್ವಿಮ್ಮಿಂಗ್ ಫೂಲ್ ( ಕಿರು) ನಲ್ಲಿ ಈಜಾಡಿಸುತ್ತಾರೆ.. ಶ್ವಾನವಿರೋ ಪ್ರತಿಯೊಂದು ಕೊಠಡಿಯಲ್ಲಿ ಒಂದು ಕೂಲರ್, ಫ್ಯಾನ್, ಎಕ್ಸಿಟ್ ಫ್ಯಾನ್ ಜೊತೆಗೆ ಸೊಳ್ಳೆ ಪರದೇ ವ್ಯವಸ್ಥೆ ಮಾಡಲಾಗಿದೆ.
Heat Wave: ಹೆಚ್ಚುತ್ತಿರುವ ತಾಪಮಾನದ ಮಧ್ಯೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ?
ಬಂದೋಬಸ್ತ್ ಬಳ್ಳಾರಿ ಶ್ವಾನದಳ ನಂ 1
ವಿವಿಐಪಿ ಭದ್ರತೆ ಸೇರಿದಂತೆ ಕೊಲೆ ದರೋಡೆ ಸೇರಿದಂತೆ ಸೂಕ್ಷ್ಮ ಪ್ರಕರಣಗಳನ್ನು ಭೇದಿಸಲು ಬಳ್ಳಾರಿಯ ಶ್ವಾನದಳದ ಶ್ವಾನಗಳೇ ನಂಬರ್ ಒನ್ ಅಂತೆ ಕೇವಲ ಬಳ್ಳಾರಿ ವಿಜಯನಗರ ಜಿಲ್ಲೆಯಷ್ಟೇ ಅಲ್ಲದೇ ಅಕ್ಕಪಕ್ಕದ ಜಿಲ್ಲೆಗಳ ಸೂಕ್ಷ್ಮ ಪ್ರಕರಣ ಬೇದಿಸಲು ಬಳ್ಳಾರಿಯ ಶ್ವಾನದಳದ ಶ್ವಾನಗಳನ್ನು ಕರೆದುಕೊಂಡು ಹೋಗ್ತಾರೆ.. ಹೀಗಾಗಿ ಇಲ್ಲಿರೋ ನಾಲ್ಕಾರು ಥಳಿಯ ಶ್ವಾನಗಳಿಗೆ ನಿತ್ಯ ರಾಜಾತಿಥ್ಯ ನೀಡಲಾಗ್ತದೆ. ಸದ್ಯ ಬಳ್ಳಾರಿಯಲ್ಲಿ ನಿತ್ಯ 40 ರಿಂದ 41,42 ಡಿಗ್ರಿವರೆಗೂ ಬಿಸಿಲಿನ ತಾಪಕ್ಕೆ ಈ ರೀತಿಯ ಆರೈಕೆ ಮಾಡದೇ ಇದ್ರೇ ಶ್ವಾನಗಳ ತತ್ತರಿಸಿ ಹೋಗ್ತವೆ.. ಈ ಬಾರಿಯ ಬಿಸಿಲು ಹೇಗಿದೆ ಅಂದ್ರೇ ಜನಜೀವನ ಅಷ್ಟೇ ಅಲ್ಲ ಶ್ವಾನದ ಜೀವನ ಕೂಡ ಪರದಾಡಯವಂತಾಗಿದೆ..