* ಕೊಪ್ಪಳದಲ್ಲಿ ಲ್ಯಾಟ್ರಿನ್ ಟ್ಯಾಂಕ್‌ನಲ್ಲಿಯೂ ಗೋಲ್ಮಾಲ್, ಶಿವ..ಶಿವ...
* ಕೊಪ್ಪಳ ನಗರಸಭೆಯಲ್ಲಿ ಭ್ರಷ್ಟಾಚಾರ
* ಕೊಪ್ಪಳ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಅವ್ಯವಹಾರ
ವರದಿ- ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ, (ಏ.29): ಸರಕಾರಿ ಕೆಲಸ ದೇವರ ಕೆಲಸ ಎನ್ನುತ್ತಾರೆ. ಸರಕಾರಿ ಅಧಿಕಾರಿಗಳು ದೇವರ ಕೆಲಸದಂತೆ ಕರ್ತವ್ಯ ನಿರ್ವಹಿಸುವುದಿಲ್ಲ. ಇಲ್ಲಿ ಸರಕಾರಿ ಇಲಾಖೆಗೆ ಲಾಭ ಮಾಡುವದಕ್ಕಿಂತ ಖಾಸಗಿಯವರಿಗೆ ಲಾಭವಾಗುವಂತೆ ಮಾಡುತ್ತಿದ್ದಾರೆ. ಇಲ್ಲಿ ಕಮಿಷನ್ ಪಡೆಯುತ್ತಿರುವ ಆರೋಪ ಕೇಳಿ ಬಂದಿದೆ.
ಕೊಪ್ಪಳ ನಗರ ಪ್ರದೇಶದಲ್ಲಿ ಈಗ ಲ್ಯಾಟ್ರಿನ್ ಟ್ಯಾಂಕ್ ಗಳು ತುಂಬಿದ್ದರೆ ಅವುಗಳನ್ನು ತೆಗೆಯುವ ಸೆಪ್ಟಿಂಗ್ ಕ್ಲೀನರ್ ವಾಹನಗಳು ಬಂದಿವೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಕ್ಕಿಂಗ್ ಯಂತ್ರಗಳನ್ನು ಸರಕಾರ ನೀಡಿದೆ. ಆದರೆ ಅವುಗಳ ಬಳಕೆಗಿಂತ ಅಧಿಕವಾಗಿ ಖಾಸಗಿಯವರ ಸಕ್ಕಿಂಗ್ ಯಂತ್ರಗಳೇ ಬಳಕೆ ಹೆಚ್ಚಾಗುತ್ತವೆ. ಸರಕಾರದಿಂದ ನೀಡಿದ ಯಂತ್ರಗಳನ್ನು ಬಳಕೆ ಮಾಡದೆ ಲಕ್ಷಾಂತರ ರೂಪಾಯಿಯ ಯಂತ್ರಗಳು ತುಕ್ಕು ಹಿಡಿದು ಹಾಳಾಗುತ್ತಿವೆ.
ಪೋಸ್ಟ್‌ಗಳನ್ನೆಲ್ಲಾ ಮೂಟೆ ಕಟ್ಟಿ ಊರಾಚೆ ಬಿಸಾಕಿದ ಪೋಸ್ಟ್ ಮ್ಯಾನ್: ಜನರ ಹಿಡಿಶಾಪ
ಕೊಪ್ಪಳ ನಗರಸಭೆಯ ಯಂತ್ರಯು ಬಳಕೆ ಇಲ್ಲದೆ ಹಾಳಾಗಿದೆ. ಕೊಪ್ಪಳ ನಗರಸಭೆಯಿಂದ ಒಂದು, ನಗರ ಒಳಚರಂಡಿ ಮಂಡಳಿಯಿಂದ ಒಂದು ಸೆಪ್ಟಿಕ್ ಕ್ಲೀನರ್ ಯಂತ್ರಗಳಿವೆ. ಅವುಗಳಲ್ಲಿ ನಗರಸಭೆಯು ಈಗ ಕೇವಲ ಒಂದು ಯಂತ್ರವನ್ನು ಮಾತ್ರ ಬಳಕೆ ಮಾಡುತ್ತಿದೆ. ಒಳಚರಂಡಿ ಮಂಡಳಿಯಿಂದ ನಗರಸಭೆಗಾಗಿ ನೀಡಿರುವ ಯಂತ್ರವನ್ನು ಬಳಕೆಯನ್ನೆ ಮಾಡಿಲ್ಲ. ಇದರಿಂದಾಗಿ ಸರಕಾರದಿಂದ ಲಕ್ಷಾಂತರ ರೂಪಾಯಿ ಹಣವು ವ್ಯರ್ಥವಾಗಿ ಹಾಳಾಗಿದೆ.
ನಗರಸಭೆಯಲ್ಲಿರುವ ವಾಹನಗಳೆಷ್ಟು?
ಕೊಪ್ಪಳ ನಗರದಲ್ಲಿ ಖಾಸಗಿಯಾಗಿ 5 ಸೆಪ್ಟಿಕ್ ಟ್ಯಾಂಕ್ ಕ್ಲೀನರ್ ಯಂತ್ರಗಳಿವೆ. ಅವುಗಳ ಕಾರ್ಯ ನಿರ್ವಹಿಸುತ್ತವೆ. ನಗರಸಭೆಯ ಮುಂದೆ ಈ ಯಂತ್ರಗಳನ್ನು ನಿಲ್ಲಿಸಿ ನಿಮ್ಮ ಮನೆಯ ಸೆಪ್ಟಿಕ್ ಟ್ಯಾಂಕ ತುಂಬಿದ್ದರೆ ಸಂಪರ್ಕಿಸಿ ಎಂದು ವಾಹನಗಳಲ್ಲಿ ನಂಬರ್ ನೀಡಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ನಗರಸಭೆಯ ಯಂತ್ರ ಎಲ್ಲಿದೆ ಎಂಬ ಮಾಹಿತಿಯೂ ಇಲ್ಲ.
ಯಾವ ರೀತಿಯಲ್ಲಿ ಗೋಲ್ಮಾಲ್?
ಇನ್ನು ನಗರಸಭೆಯ ಅಧಿಕಾರಿಗಳು ಖಾಸಗಿಯವರೊಂದಿಗೆ ಅಕ್ರಮವಾಗಿ ಒಪ್ಪಂದ ಮಾಡಿಕೊಂಡು ನಗರಸಭೆಗೆ ಹಾನಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಗರಸಭೆಯಿಂದ ಸೆಪ್ಟಿಕ್ ಟ್ಯಾಂಕ್ ಕ್ಲೀನ್ ಮಾಡಲು 1500 ರೂಪಾಯಿ ನೀಡಬೇಕು., ಆದರೆ ಖಾಸಗಿ ಕ್ಲೀನರ್ ಗಳಿಗೆ 4000-5000 ರೂಪಾಯಿ ನೀಡಬೇಕು. ಸರಕಾರದಿಂದ ಕಡಿಮೆ ದರದಲ್ಲಿ ಸೆಪ್ಟಿಕ್ ಟ್ಯಾಂಕ್ ಕ್ಲೀನರ್ ಬಳಸುವ ಅವಕಾಶವಿದ್ದರೂ ನಗರಸಭೆಯ ಅಧಿಕಾರಿಗಳಿಂದಾಗಿ ಖಾಸಗಿಯವರ ದರ್ಬಾರ ನಡೆಯುತ್ತಿದೆ.
ಎಲ್ಲೆಲ್ಲಿ ಅವ್ಯವಹಾರ?
ಇದು ಕೇವಲ ಕೊಪ್ಪಳ ನಗರಸಭೆಯಲ್ಲಿ ಮಾತ್ರ, ಕೊಪ್ಪಳ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇದೇ ರೀತಿಯ ವ್ಯವಹಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ನಗರಸಭೆ ಪೌರಾಯುಕ್ತರನ್ನು ಕೇಳಿದರೆ ನಮ್ಮದು ಒಂದು ಟ್ಯಾಂಕ್ ಕ್ಲೀನರ್ ಇದೆ, ಅದನ್ನು ಸಾರ್ವಜನಿಕರಿಗೆ ನೀಡುತ್ತಿದ್ದೇವೆ. ಇನ್ನೊಂದು ಒಳಚರಂಡಿ ಮಂಡಳಿಯವರದು ನಮಗೆ ಅವರು ಹಸ್ತಾಂತರ ಮಾಡಿಲ್ಲ, ಹೀಗಾಗಿ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಾರೆ.
ಈ ಬಗ್ಗೆ ಇತ್ತೀಚಿಗೆ ಕೊಪ್ಪಳ ನಗರಕ್ಕೆ ಭೇಟಿ ನೀಡಿದ್ದ ಸಫಾರಿ ಕರ್ಮಚಾರಿ ಆಯೋಗ ಅಧ್ಯಕ್ಷ ಎಂ ಶಿವಣ್ಣ ಇಂಥ ಪ್ರಕರಣಗಳಿರುವುದು ಕಂಡು ಬಂದಿದೆ. ತಕ್ಷಣದಿಂದಲೇ ಅಧಿಕಾರಿಗಳು ನಗರಸಭೆಯ ವಾಹನಗಳನ್ನು ಬಳಕೆ ಮಾಡಬೇಕೆಂದು ಸೂಚಿಸಿದ್ದಾರೆ. ಆದರೆ ಅಧಿಕಾರಿಗಳು ಈ ಸೂಚನೆ ಪಾಲಿಸುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.