ಬೀದರ್‌ನಲ್ಲಿ ಅನ್ನಭಾಗ್ಯಕ್ಕೆ ಕನ್ನ, ಮಹಾರಾಷ್ಟ್ರ, ಗುಜರಾತ್‌ಗೆ ಸಪ್ಲೈ, ಅಧಿಕಾರಿಗಳು ಗಪ್‌ಚುಪ್

By Suvarna NewsFirst Published Apr 29, 2022, 4:31 PM IST
Highlights

* ಗಡಿ ಜಿಲ್ಲೆ ಬೀದರ್‌ನಲ್ಲಿ ಅನ್ನಭಾಗ್ಯಕ್ಕೆ ಕನ್ನ
* ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಪಡಿತರ ಅಕ್ಕಿ ಸರಬರಾಜು
* ರಾಜ್ಯದ ಪಡಿತರ ಅಕ್ಕಿ ಮಹಾರಾಷ್ಟ್ರ, ಗುಜರಾತ್ ರಾಜ್ಯಕ್ಕೆ ಸಪ್ಲೈ,.
* ಬಡವರ ಹೊಟ್ಟೆ ಸೇರಬೇಕಾದ ಪಡಿತರ ಅಕ್ಕಿ ಖದೀಮರ ಪಾಲು

ವರದಿ-ಲಿಂಗೇಶ್ ಮರಕಲೆ ಏಷ್ಯಾನೆಟ್ ಸುವರ್ಣ ನ್ಯೂಸ್ ಬೀದರ್

ಬೀದರ್, (ಏ.29):
ಗಡಿ ಜಿಲ್ಲೆ ಬೀದರ್‌ನಲ್ಲಿ ಅನ್ನಭಾಗ್ಯಕ್ಕೆ ಖದೀಮರು ಕನ್ನ ಹಾಕುತ್ತಿದ್ದಾರೆ,. ಸರ್ಕಾರದಿಂದ ಉಚಿತವಾಗಿ ಬಡವರಿಗೆ ನೀಡುವ ಅಕ್ಕಿ ಅಕ್ರಮವಾಗಿ ಸಂಗ್ರಹ ಮಾಡಿಕೊಂಡು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ.  ಹೆಚ್ಚಿನ ದರದಲ್ಲಿ ಅಕ್ಕಿ ಮಾರಾಟ ಮಾಡಿಕೊಳ್ಳುವ ಮೂಲಕ ಅನ್ನಭಾಗ್ಯ ಯೋಜನೆಗಳು ಕನ್ನ ಹಾಕುತ್ತಿರುವ ಅಕ್ರಮ ಬಯಲಾಗಿದೆ.

 ಬಡವರ ಹೊಟ್ಟೆ ಸೇರಬೇಕಾದ ಪಡಿತರ ಅಕ್ಕಿ ದೊಡ್ಡ ಕುಳಗಳ ವರವಾಗಿ ಪರಣಿಮಿಸಿದೆ,. ಈ ಅಕ್ರಮ ದಂಧೆಯಲ್ಲಿ ದೊಡ್ಡ ದೊಡ್ಡ ಕುಳಗಳೆ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ,.. ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದ ಗೊಡೌನ್ಯೊಂದರಲ್ಲಿ ಅಕ್ರಮ ಪಡಿತರ ಅಕ್ಕಿ ಸಂಗ್ರಹ ಮಾಡಿ ಇಡಲಾಗಿದ್ದು,. ಇಲ್ಲಿ ಸಂಗ್ರಹ ಮಾಡಿ ಇಡಲಾಗಿರುವ ಅಕ್ಕಿ ಹುಮನಾಬಾದ್ ತಾಲೂಕಿನ ರಹೀಂ ಖಾನ್ ಎಂಬ ವ್ಯಕ್ತಿಗೆ ಸೇರಿದ್ದು ಎಂದು ಮಾಹಿತಿ ತಿಳಿದು ಬಂದಿದೆ.

ಅಕ್ರಮ ಪಡಿತರ ಅಕ್ಕಿ ದಾಸ್ತಾನು ಮಾಡಲು ಜಿಲ್ಲೆಯ ಹಲವೆಡೆ ಅಡ್ಡೆಗಳು ಮಾಡಿಕೊಳ್ಳಲಾಗಿದೆ,. ಬೀದರ್, ಚಿಟಗುಪ್ಪಾ, ಬಸವಕಲ್ಯಾಣ, ಹುಮನಾಬಾದ್, ಖಟಕಚಿಂಚೋಳಿಯಲ್ಲಿವೆ ಅಕ್ರಮ ಅಡ್ಡೆಗಳಲ್ಲಿ ಬಡವರಿಗೆ ಸೇರಬೇಕಾದ ಪಡಿತರ ಅಕ್ಕಿ ಸಂಗ್ರಹ ಮಾಡಿ ಬೇರೆ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ,,. ಪೊಲೀಸರು, ಫುಡ್ ಅಧಿಕಾರಿಗಳ ಸಪೋರ್ಟ್ ನೊಂದಿಗೆ ಈ ಅಕ್ರಮ ದಂಧೆ ನಡೆಸಲಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ,,.. ಜಿಲ್ಲೆಯಲ್ಲಿ ಎಗ್ಗಿಲ್ಲದೇ ಅಕ್ರಮ ಪಡಿತರ ಅಕ್ಕಿ ದಂಧೆ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕಂಡ ಕಾಣದಂತೆ ಜಾಣ ನಿದ್ರೆಯಲ್ಲಿದ್ದಾರೆ.

ಪಡಿತರ ಕಾರ್ಡ್ ಹೊಂದಿರುವ 80 ಪ್ರತಿಶತ ಜನ ಅಕ್ಕಿ ತಗೋಳೋದೇ ಇಲ್ಲ
ಜಿಲ್ಲೆಯಾದ್ಯಂತ ಬಿಪಿಎಲ್ ಕಾರ್ಡ್ ಹೊಂದಿರುವ ಸುಮಾರು 80 ಪ್ರತಿಶತ ಜನ ಸರ್ಕಾರ ನೀಡುವ ಅಕ್ಕಿ ತೆಗೆದುಕೊಳ್ಳುವುದೇ ಇಲ್ಲ,. ಹೀಗೆ ಅಕ್ಕಿ ತೆಗೆದುಕೊಳ್ಳದವರಿಗೆ ಱಷೇನ್ ನೀಡುವ ಡಿಲರ್ಗಳು ಫಿಂಗರ್ ಪ್ರಿಂಟ್ ತೆಗೆದುಕೊಂಡು 1 ಕೆ.ಜಿ ಇಂತಿಷ್ಟು ಎಂಬಂತೆ ಹಣ ನೀಡುತ್ತಾರೆ,. ಹೀಗೆ ಪ್ರತಿಯೊಂದು ಡಿಲರ್ಗಳಲ್ಲಿ ಜಮಾವಣೆಯಾದ ಅಕ್ಕಿಗಳು ಹೊಬಳಿ ಮಟ್ಟದಲ್ಲಿರುವ ಗೊಡೌನ್ನಲ್ಲಿ ಸಂಗ್ರಹ ಮಾಡಲಾಗುತ್ತದೆ,. ಬಳಿಕ ಹೊಬಳಿಯಿಂದ ತಾಲೂಕು ಮಟ್ಟದಲ್ಲಿರುವ ದೊಡ್ಡ ಗೊಡೌನ್ಗೆ ಕಳುಹಿಸುತ್ತಾರೆ,. ಅಲ್ಲಿಂದ ಲಾರಿಗಳಲ್ಲಿ ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಿಗೆ ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ,. ಈ ಅಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಫುಡ್ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಶಾಮಿಲಾಗಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದ ಪಡಿತರ ಅಕ್ಕಿಗೆ ಹೊರರಾಜ್ಯಗಳಲ್ಲಿ ಭಾರಿ ಡಿಮ್ಯಾಂಡ್.
ರಾಜ್ಯ ಸರ್ಕಾರ ಬಡವರಿಗೆ ಉಚಿತವಾಗಿ ನೀಡುವ ಪಡಿತರ ಅಕ್ಕಿಗೆ ಹೊರರಾಜ್ಯಗಳಲ್ಲಿ ಭಾರಿ ಡಿಮ್ಯಾಂಡ್ ಇದೆ ಎನ್ನಲಾಗುತ್ತಿದೆ,. ಇಲ್ಲಿ ಪ್ರತಿ ಕಾರ್ಡ್ ಹೊಲ್ಡರ್ಗಳಿಗೆ ಪ್ರತಿ ಕೆ.ಜಿಗೆ 10 ರಿಂದ 12 ರೂ.ಕೊಟ್ಟು ಡಿಲರ್ಗಳೇ ಖರೀದಿ ಮಾಡಿಕೊಂಡು ಬಿಡುತ್ತಾರೆ,. ಈ ಡಿಲರ್ಗಳು ಹೀಗೆ ಅಕ್ರಮವಾಗಿ ಸರಬರಾಜು ಮಾಡುವವರಿಗೆ 14ರಿಂದ 16 ರೂ. ಮಾರಾಟ ಮಾಡಿಕೊಳ್ಳುತ್ತಾರೆ,. ಹೊರರಾಜ್ಯಗಳಲ್ಲಿ ಸುಮಾರು 25 ರಿಂದ 28 ರೂ.ವರೆಗೂ ಅಕ್ಕಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.
 
ಒಟ್ಟಿನಲ್ಲಿ ಅಕ್ರಮವಾಗಿ ಫಿಂಗರ್ ಪ್ರಿಂಟ್ ನಿಂದ ಹಿಡಿದು ಹಳ್ಳಿಯಿಂದ ಹೊಬಳಿ, ಹೊಬಳಿಯಿಂದ ತಾಲೂಕು ಮಟ್ಟದವರೆಗೂ ತಾಲೂಕುಗಳಿಂದ ಹೊರರಾಜ್ಯದವೆಗೂ ಸರ್ಕಾರ ನೀಡುವ ಉಚಿತ ಅಕ್ಕಿ ಅಕ್ರಮವಾಗಿ ಸರಬರಾಜು ಮಾಡುತ್ತಾರೆ ಅಂದ್ರೆ ಸಾಮಾನ್ಯವಾಗಿ ಅಧಿಕಾರಿಗಳು ಸಪೋರ್ಟ್ ಇಲ್ಲದೇ ಇದು ಅಸಾಧ್ಯವಾದ ಮಾತು ಅಂದ್ರೂ ತಪ್ಪಾಗಲಾರದು,. ಈಗಲಾದರೂ ಭ್ರಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿ ತೇಲಾಡುತ್ತಿರುವ ಅಧಿಕಾರಿಗಳು ಈ ಅಕ್ರಮ ಬ್ರೇಕ್ ಹಾಕಲು ಮುಂದಾಗುತ್ತಾ ಕಾದು ನೋಡಬೇಕಾಗಿದೆ.

click me!