ಉಪಚುನಾವಣೆ ದಿನಾಂಕ ನಿಗದಿಯಾಗಿದ್ದು, ನಾಮಪಪತ್ರ ಸಲ್ಲಿಕೆಯ ಕೊನೆಯ ದಿನವೂ ನಿನ್ನೆ ಕಳೆದಿದ್ದು, ಸಂಸದೆ ಸುಮಲತಾ ಯಾರನ್ನು ಬೆಂಬಲಿಸುತ್ತಾರೆ ಎನ್ನುವ ವಿಚಾರ ಮಾತ್ರ ಇನ್ನೂ ಬಹಿರಂಗವಾಗಿಲ್ಲ. ತಮ್ಮನ್ನು ಬೆಂಬಲಿಸಿದ್ದ ಪಕ್ಷಗಳಲ್ಲಿ ಯಾರ ಜೊತೆ ಸುಮಲತಾ ನಿಲ್ಲಲಿದ್ದಾರೆ ಎಂಬುದು ಸದ್ಯದ ಕುತೂಹ.
ಮಂಡ್ಯ(ನ.19): ಉಪಚುನಾವಣೆ ದಿನಾಂಕ ನಿಗದಿಯಾಗಿದ್ದು, ನಾಮಪಪತ್ರ ಸಲ್ಲಿಕೆಯ ಕೊನೆಯ ದಿನವೂ ನಿನ್ನೆ ಕಳೆದಿದ್ದು, ಸಂಸದೆ ಸುಮಲತಾ ಯಾರನ್ನು ಬೆಂಬಲಿಸುತ್ತಾರೆ ಎನ್ನುವ ವಿಚಾರ ಮಾತ್ರ ಇನ್ನೂ ಬಹಿರಂಗವಾಗಿಲ್ಲ. ತಮ್ಮನ್ನು ಬೆಂಬಲಿಸಿದ್ದ ಪಕ್ಷಗಳಲ್ಲಿ ಯಾರ ಜೊತೆ ಸುಮಲತಾ ನಿಲ್ಲಲಿದ್ದಾರೆ ಎಂಬುದು ಸದ್ಯದ ಕುತೂಹ.
ಕೆ.ಆರ್.ಪೇಟೆ ಉಪ ಚುನಾವಣೆ ಅಖಾಡ ರಂಗೇರಿದ್ದು, ಸಂಸದೆ ಸುಮಲತಾ ಬೆಂಬಲ ಕಾಂಗ್ರೆಸ್‌ಗೊ, ಬಿಜೆಪಿಗೊ ಎಂಬ ಗೊಂದಲ ಇನ್ನೂ ಉಳಿದಿದೆ. ಸುಮಲತಾ ಬೆಂಬಲ ವಿಚಾರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಸುಮಲತಾ ಅವರು ಯಾವ ಪಕ್ಷದ ಋಣ ತೀರಿಸುತ್ತಾರೆ ಎನ್ನುವ ಪ್ರಶ್ನೆ ಜಿಲ್ಲೆಯ ಜನರಲ್ಲಿ ಮೂಡಿದೆ.
undefined
ಕೆ. ಆರ್. ಪೇಟೆ: ಪಕ್ಷೇತರ ಅಭ್ಯರ್ಥಿಯಾಗಿ ಸರ್ವೇ ದೇವೇಗೌಡ ನಾಮಪತ್ರ ಸಲ್ಲಿಕೆ
ಎರಡೂ ರಾಷ್ಟ್ರೀಯ ಪಕ್ಷಗಳು ಸುಮಲತಾ ಬೆಂಬಲ ನಿರೀಕ್ಷೆಯಲ್ಲಿದ್ದು, ಸುಮಲತಾ ಯಾರೋದರೂ ಒಬ್ಬ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರಾ..? ಅಥವಾ ತಟಸ್ಥರಾಗಿ ಉಳಿಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
ರಾಜಕೀಯ ವಲಯದಲ್ಲಿ ಸುಮಲತಾ ಬೆಂಬಲ ವಿಚಾರ ಚರ್ಚೆಗೆ ಕಾರಣವಾಗಿದೆ. ನಾಮಪತ್ರ ಸಲ್ಲಿಕೆ ಪಕ್ರಿಯೆ ಮುಗಿದರೂ ಸಂಸದೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಉಪ ಚುನಾವಣೆಯಲ್ಲಿ ಯಾರ ಪರವನ್ನೂ, ವಿರೋಧವನ್ನೂ ಕಟ್ಟಿಕೊಳ್ಳದೆ ತಟಸ್ಥರಾಗಿ ಉಳಿಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
JDS, BJP ಪ್ರಚಾರ ಸ್ಟಾರ್ಟ್, ಕಾಂಗ್ರೆಸ್‌ಗೆ ಅಭ್ಯರ್ಥಿ ಆಯ್ಕೆಯಲ್ಲೇ ಗೊಂದಲ
ಸಂಸತ್ ಅಧಿವೇಶನದ ನೆಪದಲ್ಲಿ ಚುನಾವಣಾ ಪ್ರಚಾರದಿಂದ ಸುಮಲತಾ ದೂರ ಉಳಿಯುವ ಸಾಧ್ಯತೆಯೂ ಇದೆ. ತಟಸ್ಥವಾಗಿ ಉಳಿಯಲು ಅಧಿವೇಶನ ಒಂದು ನೆಪವಾಗಲಿದೆಯಾ ಎನ್ನುವ ಸಂದೇಹ ಆರಂಭವಾಗಿದೆ. ನಿನ್ನೆಯಿಂದ ಲೋಕಸಭಾ ಅಧಿವೇಶನ ಆರಂಭವಾಗಿದ್ದು, ಪ್ರಚಾರದಿಂದ ದೂರ ಉಳಿಯಲು ಸುಮಲತಾಗೆ ಇದು ವರವಾಲಿದೆ ಎನ್ನುವ ಮಾತುಗಳೂ ಕೆಳಿ ಬರುತ್ತಿದೆ.
ಎರಡೂ ಪಕ್ಷದ ಕಾರ್ಯಕರ್ತರ ಪ್ರೀತಿ ಉಳಿಸಿಕೊಳ್ಳುವ ಸವಾಲು ಸುಮಲತಾ ಮುಂದೆ ಇದ್ದು, ಜನಾಭಿಪ್ರಾಯ ಕೇಳಿ ಯಾರಿಗೆ ಬೆಂಬಲ ಕೊಡುವುದು ಎಂಬುದನ್ನು ನಿರ್ಧಾರ ಮಾಡುವುದಾಗಿ ಸಂಸದೆ ಈ ಹಿಂದೆ ತಿಳಿಸಿದ್ದರು. ಈ ಬಗ್ಗೆ ಕೆಲವು ದಿನಗಳ ಹಿಂದಷ್ಟೇ ಸುಮಲತಾ ಹೇಳಿಕೆ ಕೊಟ್ಟಿದ್ದರು. ಆದರೆ ಇದುವರೆಗೂ ಸುಮಲತಾ ಜನಾಭಿಪ್ರಾಯ ಕೇಳಿಲ್ಲ.
BJP ಪರ ಬ್ಯಾಟ್ ಬೀಸೋಕೆ ರೆಡಿಯಾದ JDS-ಕಾಂಗ್ರೆಸ್ ಸ್ಟಾರ್ ಬ್ಯಾಟ್ಸ್‌ಮನ್‌ಗಳು
ಮಂಡ್ಯದ ಕೆ. ಆರ್. ಪೇಟೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕೆ. ಸಿ. ನಾರಾಯಣ ಗೌಡ ಕಣಕ್ಕಿಳಿದಿದ್ದು, ಕಾಂಗ್ರೆಸ್‌ನಿಂದ ಕೆ. ಬಿ ಚಂದ್ರಶೇಖರ್, ಜೆಡಿಎಸ್‌ನಿಂದ ಬಿ. ಎಲ್. ದೇವರಾಜು ಅವರು ಸ್ಪರ್ಧಿಸುತ್ತಿದ್ದಾರೆ. ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.