ಏಷ್ಯಾ ಪ್ರಸಿದ್ಧಿ ಕೆರೆ ನೀರು ಇದೀಗ ಕುಡಿಯಲು ಯೋಗ್ಯವಲ್ಲ ಎಂಬ ಆತಂಕಕಾರಿ ವರದಿಯೊಂದು ಬಂದಿದೆ. ಸೂಳೆಕೆರೆಯಿಂದ ಚನ್ನಗಿರಿ ಪಟ್ಟಣಕ್ಕೆ ಪೂರೈಕೆಸುತ್ತಿರುವ ಕುಡಿಯುವ ನೀರು ಬಳಕೆಗೆ ಯೋಗ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ಪರೀಕ್ಷಾ ತಂಡ ಭೇಟಿ ನೀಡಿ ವರದಿ ನೀಡಿದೆ.
ದಾವಣಗೆರೆ (ಆ.12): ಏಷ್ಯಾ ಪ್ರಸಿದ್ಧಿ ಕೆರೆ ನೀರು ಇದೀಗ ಕುಡಿಯಲು ಯೋಗ್ಯವಲ್ಲ ಎಂಬ ಆತಂಕಕಾರಿ ವರದಿಯೊಂದು ಬಂದಿದೆ. ಸೂಳೆಕೆರೆಯಿಂದ ಚನ್ನಗಿರಿ ಪಟ್ಟಣಕ್ಕೆ ಪೂರೈಕೆಸುತ್ತಿರುವ ಕುಡಿಯುವ ನೀರು ಬಳಕೆಗೆ ಯೋಗ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ಪರೀಕ್ಷಾ ತಂಡ ಭೇಟಿ ನೀಡಿ ವರದಿ ನೀಡಿದೆ. ಕೆರೆ ಸ್ವಚ್ಛಗೊಳಿ ಸುವ ಕಾರಣ ಚನ್ನಗಿರಿ ಪಟ್ಟಣಕ್ಕೆ 3 ತಿಂಗಳವರೆಗೆ ಸೂಳೆಕೆರೆ ನೀರು ಪೂರೈಕೆ ಇಲ್ಲ ಎಂದು ಚನ್ನಗಿರಿ ನಾಗರಿಕರಲ್ಲಿ ಪುರಸಭೆ ಅಧ್ಯಕ್ಷೆ ಲಕ್ಷ್ಮಿ ದೇವಿ ಮನವಿ ಮಾಡಿದ್ದಾರೆ.
ಪುರಸಭೆ ಸಭಾಂಗಣದಲ್ಲಿ ನಡೆದ ಕುಡಿಯುವ ನೀರು ಪೂರೈಕೆ ಕುರಿತ ತುರ್ತು ಸಭೆಯಲ್ಲಿ ಮಾಹಿತಿ ನೀಡಿ ಕಳೆದ ಒಂದು ವಾರದಿಂದ ಕೆಂಪು ಮಿಶ್ರಿತ ನೀರು ಸರಬರಾಜು ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸೂಳೆಕೆರೆ ನೀರು ಪೂರೈಕೆ ಕೇಂದ್ರಕ್ಕೆ ಭೇಟಿ ನೀಡಿ ನೀರಿನ ಸ್ಯಾಂಪಲ್‌ನ್ನು ಕಳುಹಿಸಲಾಗಿತ್ತು. ಜಿಲ್ಲಾ ನೀರು ತಪಾಸಣಾ ತಂಡ ಈ ನೀರು ಬಳಕೆ ಮಾಡಲು ಯೋಗ್ಯವಿಲ್ಲ ಎಂದು ವರದಿ ನೀಡಿದೆ.
ಮದುವೆ ನಿಶ್ಚಯವಾಗಿದ್ದ ಹುಡುಗಿ ತನಗಿಂತ ದೊಡ್ಡವಳು: ಮನನೊಂದ ಯುವಕ ಆತ್ಮಹತ್ಯೆ!
ಚಿತ್ರದುರ್ಗ ಹೊಳಲ್ಕೆರೆ ಜಗಳೂರು ಪಟ್ಟಣಕ್ಕು ನೀರಿನ ತತ್ವಾರ: ಅಷ್ಟೇ ಅಲ್ಲದೆ ಸೂಳೆಕೆರೆ ನೀರು ಚಿತ್ರದುರ್ಗ ನಗರ ಹೊಳಲ್ಕೆರೆ, ಚನ್ನಗಿರಿ, ಜಗಳೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಈಗ ನೀರು ಸರಿಯಿಲ್ಲದ ಕಾರಣ ನೀರು ಪೂರೈಕೆ ಘಟಕವನ್ನು ಶುದ್ದೀಕರಣ ಮಾಡಬೇಕಿದೆ.. ಘಟಕ ಸಜ್ಜಾಗಲು ಇನ್ನು ಮೂರು ತಿಂಗಳಾದ್ರು ಬೇಕಾಗಬಹುದು.
ಉಡುಪಿ ಅಂಚೆ ಕಚೇರಿ ವತಿಯಿಂದ 'ಹರ್ ಘರ್ ತಿರಂಗಾ' ಜನಜಾಗೃತಿ ಜಾಥಾ
ಈ ಭಾಗಗಳಿಗೂ ಮೂರು ತಿಂಗಳ ಕುಡಿವ ನೀರಿನ ಸಮಸ್ಯೆ ಆಗಲಿದೆ. ಸೂಳೆಕೆರೆ ನೀರು ಪೂರೈಕೆ ಕೇಂದ್ರವನ್ನು ಸ್ವಚ್ಛ ಮಾಡಬೇಕು ಅಲ್ಲಿಯವರೆಗೆ ಹಿರೇಮಳಲಿ ಪಂಪ್‌ಹೌಸ್‌ನಿಂದ ಚನ್ನಗಿರಿ ಪಟ್ಟಣಕ್ಕೆ ನೀರು ಪೂರೈಕೆಗೆ ನಿರ್ಧಾರ ಮಾಡಲಾಗಿದೆ. ಚನ್ನಗಿರಿ ಪಟ್ಟಣದ ಇನ್ನು ಕೆಲ ಬಡಾವಣೆಗಳಲ್ಲಿ ಟ್ಯಾಂಕರ್ ಮುಖಾಂತರ ನೀರು ಪೂರೈಸಲಾಗುವುದು ಎಂದು ಪುರಸಭೆ ಅಧ್ಯಕ್ಷರು ತಿಳಿಸಿದ್ದಾರೆ.