ಹಿಂದೂ ಧರ್ಮ ಗಟ್ಟಿಯಾದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸುತ್ತೆ: ಸುಬುಧೇಂದ್ರ ತೀರ್ಥರು

By Girish Goudar  |  First Published Sep 30, 2023, 8:00 AM IST

ಈಗ ಹಿಂದೂ ಧರ್ಮದ ಸಿದ್ದಾಂತವನ್ನ ಎಲ್ಲರಿಗೂ ತಿಳಿಸುವುದು ಅನಿವಾರ್ಯ ಮತ್ತು ಅವಶ್ಯಕತೆ ಇದೆ. ವಿಶ್ವದಾದ್ಯಂತ ಅಶಾಂತಿ ತಾಂಡವ ಆಡುತ್ತಿದೆ. ವಸುದೇವಕ ಕುಟುಂಬಕಂ ಎಂಬ ಸಂದೇಶ ಇಡೀ ಜಗತ್ತಿಗೆ ತಿಳಿಸಬೇಕು. ಹಿಂದೂ ಧರ್ಮವೂ ಗಟ್ಟಿಯಾಗಿದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸುತ್ತೆ: ಶ್ರೀ ಸುಬುಧೇಂದ್ರ ತೀರ್ಥರು 


ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು

ರಾಯಚೂರು(ಸೆ.30): ಇತ್ತೀಚಿನ ದಿನಗಳಲ್ಲಿ ಕೆಲವರು ಸನಾತನ ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ ನಡೆಸಿದ್ದಾರೆ. ಇಂತಹ ಅಪಪ್ರಚಾರಕ್ಕೆ ಯಾರು ಕಿವಿಕೊಡಬಾರದು. ಸನಾತನ ಹಿಂದೂ ಧರ್ಮಕ್ಕೆ ಪ್ರರ್ಯಾಯವಾದ ಬೇರೆ ಯಾವುದೇ ಧರ್ಮವಿಲ್ಲ. ಆದ್ರೂ ಅಪಪ್ರಚಾರ ನಡೆದಿದೆ. ಅಂತವರು ಹೇಳುವ ತಪ್ಪುಗಳನ್ನ ಸರಿಪಡಿಸುವುದರೊಂದಿಗೆ ಧರ್ಮದ ಗಟ್ಟಿತನವನ್ನ ಸುಭದ್ರಪಡಿಸಬೇಕಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ. 

Tap to resize

Latest Videos

ಶುಕ್ರವಾರ ಮಂತ್ರಾಲಯದಲ್ಲಿ 11ನೇ ಚಾರ್ತುಮಾಸದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀ ಸುಬುಧೇಂದ್ರ ತೀರ್ಥರು, ಈಗ ಹಿಂದೂ ಧರ್ಮದ ಸಿದ್ದಾಂತವನ್ನ ಎಲ್ಲರಿಗೂ ತಿಳಿಸುವುದು ಅನಿವಾರ್ಯ ಮತ್ತು ಅವಶ್ಯಕತೆ ಇದೆ. ವಿಶ್ವದಾದ್ಯಂತ ಅಶಾಂತಿ ತಾಂಡವ ಆಡುತ್ತಿದೆ. ವಸುದೇವಕ ಕುಟುಂಬಕಂ ಎಂಬ ಸಂದೇಶ ಇಡೀ ಜಗತ್ತಿಗೆ ತಿಳಿಸಬೇಕು. ಹಿಂದೂ ಧರ್ಮವೂ ಗಟ್ಟಿಯಾದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸುತ್ತೆ, ಜನರಲ್ಲಿ ಮಾನವೀಯ ಮೌಲ್ಯಗಳ ಮರೆಯಾಗುತ್ತಿವೆ. ಇಂತಹ ಮಾನವೀಯ ಮೌಲ್ಯಗಳನ್ನು ಉಳಿಸಿ ಸದೃಢ ಸಮಾಜ ನಿರ್ಮಾಣಕ್ಕೆ ‌ಎಲ್ಲರೂ ಕೈ ಜೋಡಿಸೋಣ. ರಾಘವೇಂದ್ರ ಸ್ವಾಮಿಗಳು ಎಲ್ಲಾ ಸಮುದಾಯಗಳ ಗುರುಗಳಾಗಿದ್ದಾರೆ. ಅವರ ಸಂದೇಶಗಳನ್ನು ‌ನಾವು ಎಲ್ಲರೂ ಪಾಲಿಸೋಣ ಭಕ್ತರಿಗೆ ಸಂದೇಶ ‌ನೀಡಿದ್ರು.

ಮಂತ್ರಾಲಯದಲ್ಲಿ ರಾಯರ ಆಶೀರ್ವಾದ ಪಡೆದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಪೋಷಕರು, ಸಾಥ್‌ ನೀಡಿದ ಸುಧಾಮೂರ್ತಿ!

ಹೊಸದಾಗಿ ಬದಲಾಗುತ್ತಿದೆ ಮಂತ್ರಾಲಯ ಮಠ : 

ಗುರುರಾಯರನ್ನು ನೆನೆದಾಗ ಮೊದಲು ನೆನಪಾಗುವುದೇ ರಾಯರ ಸನ್ನಿಧಿ ಮಂತ್ರಾಲಯ. ಯಾವುದೇ ಕಷ್ಟವಿದ್ದರು ರಾಯರನ್ನು ನೆನೆದರೆ, ರಾಯರ ದರ್ಶನ ಮಾಡಿದರೆ ಕಷ್ಟಗಳೆಲ್ಲಾ ನಿವಾರಣೆ ಆಗುತ್ತೆ ಎಂಬ ನಂಬಿಕೆ. ಅಷ್ಟೇ ಅಲ್ಲದೇಕಷ್ಟ ಅಂತ ಬಂದ ಭಕ್ತರನ್ನು ವರ ನೀಡಿ ಕರುಣಿಸುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನ ನಂಬಿ ಮಂತ್ರಾಲಯಕ್ಕೆ ‌ಭಕ್ತರ ದಂಡೆ ಹರಿದು ಬರುತ್ತೆ. ಶ್ರೀಮಠಕ್ಕೆ ಬಂದ ಭಕ್ತರಿಗೆ ಅನುಕೂಲವಾಗಿ ಎಂದು ಮಂತ್ರಾಲಯ ಮಠದಿಂದ ‌ಭಕ್ತರಿಗಾಗಿ ಹತ್ತಾರು ರೀತಿಯ ಸೌಲಭ್ಯಗಳ ವ್ಯವಸ್ಥೆ ‌ಮಾಡಲಾಗಿದೆ. ಅದರಲ್ಲೂ ಕೋವಿಡ್ ‌ನಂತರ ಇಡೀ ಮಂತ್ರಾಲಯದ ಚಿತ್ರಣವೇ ಬದಲಾಗಿದೆ ಎಂದು ತಿಳಿಸಿದ್ದಾರೆ. 

ಶ್ರೀಮಠದ ಹೊರಭಾಗದಲ್ಲಿ ವಿಶಾಲವಾದ ಪ್ರಾಂಗಣ, ರಾಯರ ದರ್ಶನಕ್ಕೆ ಬರುವ ಭಕ್ತರಿಗೆ ಉಳಿದುಕೊಳ್ಳಲು ವಸತಿ ಗೃಹಗಳು, ಪ್ರಸಾದ್ ಸೇವೆ ಮತ್ತು ಕುಡಿಯುವ ‌ನೀರು, ಆಸನದ ವ್ಯವಸ್ಥೆ ಹೀಗೆ ನಾನಾ ಸೌಲಭ್ಯ ‌ಶ್ರೀಮಠದಲ್ಲಿ ಕಾಣಬಹುದಾಗಿದೆ. ಅಷ್ಟೇ ಅಲ್ಲದೇ ‌ಶ್ರೀಮಠವೂ ವಿಪ್ರ ಸಮಾಜದ ಸಂಘಟನೆ ಜೊತೆಗೆ ತ್ರಿಮತಸ್ಥ ವಿದ್ಯಾರ್ಥಿಗಳಿಗೆ ಬೆಂಗಳೂರು, ರಾಯಚೂರು, ಬಳ್ಳಾರಿ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ‌ಬಂದ ವಿದ್ಯಾರ್ಥಿಗಳಿಗೆ ವಸತಿ ‌ನಿಲಯ, ಆಸ್ಪತ್ರೆ ಸೇರಿದಂತೆ ಇತರೆ ಸೌಲಭ್ಯಗಳನ್ನು ‌ನೀಡಲು ಮಂತ್ರಾಲಯ ಮಠವೂ ಕಾರ್ಯ ಯೋಜನೆ ‌ಹಾಕಿಕೊಂಡಿದೆ.ಅದರಂತೆ ಹತ್ತಾರು ಕಾಮಗಾರಿಗಳು ಸಹ ಮಂತ್ರಾಲಯದಲ್ಲಿ ‌ನಡೆದಿವೆ ಎಂದು ಹೇಳಿದ್ದಾರೆ. 

click me!