ಕೋಲಾರ: ಜೀವ ಬೆದರಿಕೆ, ತಿಂಗಳಲ್ಲಿ ಎರಡನೇ ಬಾರಿ ಬಿಜೆಪಿ ಸಂಸದ ಮುನಿಸ್ವಾಮಿ ವಿರುದ್ಧ ಎಫ್‌ಐಆರ್‌

By Girish GoudarFirst Published Sep 30, 2023, 7:43 AM IST
Highlights

ಜಿಲ್ಲಾ ಉಸ್ತುವಾರಿ ಭೈರತಿ ಸುರೇಶ್ ಮಧ್ಯ ಪ್ರವೇಶಿಸಿ ಸಂಸದರಿಂದ ಅಗಬಹುದಾದಂತಹ ಮಾರಣಾಂತಿಕ ಹಲ್ಲೆಯನ್ನು ತಪ್ಪಿಸಿದ್ದರು. ಸಂಸದ ಮುನಿಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ದೂರು ನೀಡಿದ್ದಾರೆ. 

ಕೋಲಾರ(ಸೆ.30): ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ ಅವರ ವಿರುದ್ಧ FIR ದಾಖಲಾಗಿದೆ. ಜಿಲ್ಲೆಯ ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ದೂರಿನ ಅನ್ವಯ ಸಂಸದ ಮುನಿಸ್ವಾಮಿ ದೂರು ದಾಖಲಾಗಿದೆ. 

ಸೆ. 25 ರಂದು ಸಂಸದ ಮುನಿಸ್ವಾಮಿ ಹಾಗೂ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅವರ ಗಲಾಟೆ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಬಳಿಕ ಎಸ್ಪಿ ನಾರಾಯಣ್ ಮಧ್ಯ ಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂದಿತ್ತು. ನಗರದ ರಂಗಮಂದಿರದಲ್ಲಿ ಜನತಾ ದರ್ಶನ ಕಾರ್ಯಕ್ರಮದಲ್ಲಿ ಗಲಾಟೆ ನಡೆದಿತ್ತು. 

ಸಂಸದ ಮುನಿಸ್ವಾಮಿ ಒಬ್ಬ ಸೈಕೋ: ಶಾಸಕ ನಾರಾಯಣಸ್ವಾಮಿ

ಜಿಲ್ಲಾ ಉಸ್ತುವಾರಿ ಭೈರತಿ ಸುರೇಶ್ ಮಧ್ಯ ಪ್ರವೇಶಿಸಿ ಸಂಸದರಿಂದ ಅಗಬಹುದಾದಂತಹ ಮಾರಣಾಂತಿಕ ಹಲ್ಲೆಯನ್ನು ತಪ್ಪಿಸಿದ್ದರು. ಸಂಸದ ಮುನಿಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ದೂರು ನೀಡಿದ್ದಾರೆ. 

ದೂರಿನ ಅನ್ವಯ ಸಂಸದ ಮುನಿಸ್ವಾಮಿ ವಿರುದ್ಧ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಒಂದೇ ತಿಂಗಳಲ್ಲಿ ಎರಡನೇ ಬಾರಿ ಸಂಸದ ಮುನಿಸ್ವಾಮಿ FIR ಹಾಕಿಸಿಕೊಂಡಿದ್ದಾರೆ.  ಈ ಹಿಂದೆ ಅರಣ್ಯ ಇಲಾಖೆ ತೆರವು ಕಾರ್ಯಾಚರಣೆ ವಿಚಾರದಲ್ಲಿ ಮುನಿಸ್ವಾಮಿ ವಿರುದ್ಧ FIR ದಾಖಲಾಗಿತ್ತು. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ A1 ಆರೋಪಿಯಾಗಿ FIR ಆಗಿತ್ತು. ಇದೀಗ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಸಂಸದ ಮುನಿಸ್ವಾಮಿ ವಿರುದ್ಧ FIR ದಾಖಲಾಗಿದೆ. 

ಈಗಾಗಲೇ ಎಸ್.ಎನ್ ನಾರಾಯಣಸ್ವಾಮಿ ಹಾಗೂ ಎಸ್ಪಿ ನಾರಾಯಣ್ ವಿರುದ್ಧ ರಾಜ್ಯಪಾಲರಿಗೆ ಮುನಿಸ್ವಾಮಿ ದೂರು ನೀಡಿದ್ದಾರೆ. ಸೆ.27ರಂದು ರಾಜ್ಯಪಾಲರನ್ನು ಭೇಟಿ ಮಾಡಿ ಸಂಸದ ಮುನಿಸ್ವಾಮಿ ದೂರು ನೀಡಿದ್ದಾರೆ.ಇದರ ಬೆನ್ನಲ್ಲೇ ಸಂಸದ ಮುನಿಸ್ವಾಮಿ ವಿರುದ್ಧ FIR ದಾಖಲಾಗಿದೆ. 

click me!