ಅಪ್ಪು ಮಾತಾಡುವಾಗ ರಾಯರ ಮುಕ್ಕೂಟ ಅಲ್ಲಾಟ : ಸ್ಪಷ್ಟನೆ ನೀಡಿದ ಶ್ರೀ ಸುಬುಧೇಂದ್ರ ತೀರ್ಥರು

Suvarna News   | Asianet News
Published : Oct 31, 2021, 02:10 PM ISTUpdated : Oct 31, 2021, 04:52 PM IST
ಅಪ್ಪು ಮಾತಾಡುವಾಗ ರಾಯರ ಮುಕ್ಕೂಟ ಅಲ್ಲಾಟ   : ಸ್ಪಷ್ಟನೆ ನೀಡಿದ  ಶ್ರೀ ಸುಬುಧೇಂದ್ರ ತೀರ್ಥರು

ಸಾರಾಂಶ

ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ  ರಾಯರ ಮುಕ್ಕೂಟ ಅಲ್ಲಾಟ ವಿಚಾರ  ವೈರಲ್ ಏಷ್ಯಾ ನೆಟ್ ಸುವರ್ಣ ನ್ಯೂಸ್ ಗೆ ಇಂದು ಶ್ರೀ ಸುಬುಧೇಂದ್ರ ತೀರ್ಥರು ಸ್ಪಷ್ಟನೆ

ರಾಯಚೂರು (ಅ.31): ಸ್ಯಾಂಡಲ್‌ವುಡ್ (sandalwood) ಪವರ್ ಸ್ಟಾರ್ (Power star) ಪುನೀತ್ ರಾಜ್‌ಕುಮಾರ್ (Puneeth Rajkumar) ನಿಧನದ ಬಳಿಕ  ರಾಯರ ಮುಕ್ಕೂಟ ಅಲ್ಲಾಟ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ (social Media) ಸಾಕಷ್ಟು ಸುದ್ದಿಯಾಗುತ್ತಿದ್ದು ಈ ಬಗ್ಗೆ ಮಂತ್ರಾಲಯ (Mantralaya) ಮಠದ ಪೀಠಾಧಿಪತಿಗಳು ಸ್ಪಷ್ಟನೆ ನೀಡಿದ್ದಾರೆ. 

"

ಏಷ್ಯಾ ನೆಟ್ ಸುವರ್ಣ ನ್ಯೂಸ್ ಗೆ (Suvarna News) ಇಂದು ಶ್ರೀ ಸುಬುಧೇಂದ್ರ ತೀರ್ಥರು (Shri Subudendra Swamiji) ಸ್ಪಷ್ಟನೆ ನೀಡಿದ್ದು, ರಾಜಕುಮಾರ್ (Rajkumar) ‌ಕುಟುಂಬಸ್ಥರು (Family) ರಾಘವೇಂದ್ರ ಸ್ವಾಮೀಜಿಗಳ (Raghavendra swami) ಅಂತರಂಗದ ಭಕ್ತರು ಆಗಿದ್ದಾರೆ.  ರಾಜ್ ಕುಮಾರ್ ‌ಕುಟುಂಬಸ್ಥರು ರಾಯರ ಅರ್ಪಣೆಯಂತೆ ಶುಭ ಕಾರ್ಯಗಳು ಮಾಡುತ್ತಿದ್ದರು. ಅದರಂತೆ ರಾಯರ ಜನ್ಮ ದಿನದ ವೇಳೆ ಪುನೀತ್ ಮಠಕ್ಕೆ ಆಗಮಿಸಿದ್ದರು. ಈ ವೇಳೇ ಆಕಸ್ಮಿಕವಾಗಿ ಮುಕ್ಕೂಟ ಅಲ್ಲಾಡಿತ್ತು ಎಂದಿದ್ದಾರೆ. 

"

ರಾಯರ ಮಠದಿಂದ ‌ಪುನೀತ್ ಅವರಿಗೆ ಶ್ರೀಮಠದಿಂದ ಅಂದು ಸನ್ಮಾನಿಸಿ ಕಳುಹಿಸಲಾಗಿತ್ತು. ಪುನೀತ್ ‌ರಾಜ್ ಕುಮಾರ್ ‌ಮಾತನಾಡುವ ವೇಳೆ ಆಕಸ್ಮಿಕವಾಗಿ ‌ಮುಕ್ಕೂಟ ಮತ್ತು ವೀಣೆ ‌ಅಲುಗಾಡಿದೆ.  ಊಯ್ಯಾಲೆ ‌ಮೇಲೆ ವೀಣೆ ಇಟ್ಟು ತೂಗುವಾಗ ವೀಣೆ ಜಾರಿದೆ.  ಪುನೀತ್ ಅವರ ನಿಧನಕ್ಕೂ ರಾಯರ ಮುಕ್ಕೂಟ ಅಲೂಗಾಟಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. 

ಅಮೆರಿಕಾದಿಂದ ಬಂದು ಅಪ್ಪನ ​​ ತಲೆ ಸವರಿ ಅಂತಿಮ ದರ್ಶನ ಪಡೆದ ಪುತ್ರಿ ಧೃತಿ

ಪುನೀತ್ ಸೇರಿ ಎಲ್ಲರೂ ರಾಯರ ಪೂರ್ಣ ಅನುಗ್ರಹ ಪಡೆದ ಕುಟುಂಬ ಅದಾಗಿತ್ತು. ರಾಯರ ಆರಾಧನಾ ವೇಳೆ ಭಕ್ತಿ ಸಂಗೀತ (Devotional Music program) ಕಾರ್ಯಕ್ರಮ ‌ನಡೆಸಲು ನಾವು ಸೂಚನೆ ನೀಡಿದ್ದೆವು. ಅಂದು ಪುನೀತ್ ಸೇರಿ ಎಲ್ಲರೂ ಕೂಡ ಕಾರ್ಯಕ್ರಮ ನಡೆಸಲು ಒಪ್ಪಿಕೊಂಡಿದ್ದರು. ಪುನೀತ್ ‌ಅವರ ಮರಣ (Death) ಅಕಾಲಿಕ ಮರಣವೇ ಇದು ಯಾವುದೇ ‌ಪೂರ್ವ ಸೂಚಿತವಲ್ಲ ಎಂದರು. 

ಪುನೀತ್ ‌ಪಂಚಭೂತ ದೇಹದಿಂದ ನಮ್ಮನ್ನು ಅಗಲಿದರೂ ಕೂಡ ಪುನೀತ್ ಅವರ ಕೀರ್ತಿ, ಅಭಿಮಾನಿಗಳ ಹೃದಯದಲ್ಲಿ ರಾಯರ ಪಾದದಲ್ಲಿ ಇರುತ್ತಾರೆ. ಆ ವಿಡಿಯೋ (Vide) ಕುರಿತು ಭಯಭೀತರಾಗುವುದು, ಚರ್ಚೆ ಮಾಡುವುದು ಯಾರು ಮಾಡಬಾರದು ಶ್ರೀ ಸುಬುಧೇಂದ್ರ ತೀರ್ಥರು ಮನವಿ ಮಾಡಿದರು. 

ವೀಣೆ ರಾಯರನ್ನಿಟ್ಟಿದ್ದ ಉಯ್ಯಾಲೆ ಗಿಂತಲೂ ದೊಡ್ಡದು, ಭಾರವಾದದ್ದು. ಜನಸಂದಣಿ ವೇಳೆ ಉಯ್ಯಾಲೆ ‌ತೂಗೂವಾಗ ಜಾರಿದೆ. ಇದರಿಂದ ಇದರಲ್ಲಿ ಇನ್ನ್ಯಾವುದೇ ಕಾಕತಾಳೀಯವಿಲ್ಲ ಎಂದು  ಶ್ರೀಗಳು ಸ್ಪಷ್ಟಪಡಿಸಿದ್ದಾರೆ. 

ಮಂತ್ರಾಲಯದ ಘಟನೆ

 

  ಪುನೀತ್ ರಾಜ್‍ಕುಮಾರ್ ನಿಧನಕ್ಕೆ ಮುಂಚಿಯೇ ಸಿಕ್ಕಿತ್ತಾ ಸೂಚನೆ? ಎನ್ನುವ ಪ್ರಶ್ನೆ ಈ ವಿಡಿಯೋ ನೋಡಿದಾಗ ಕಾಡುತ್ತದೆ. ರಾಯರ ಸನ್ನಿಧಾನದಲ್ಲಿ ನಡೆದ ಪವಾಡ ಈಗ ವೈರಲ್ ಆಗುತ್ತಿದೆ ಎಂದು ಎಲ್ಲೆಡೆ ವಿಡಿಯೋ ಹರಿದಾಡಿತ್ತು. 

ಅಪ್ಪುಗೆ ಚಿಕ್ಕ ವಯಸ್ಸು, ಚಿಕ್ಕ ಮಕ್ಕಳು ಅಳೋದು ನೋಡಿ ಬೇಸರವಾಯ್ತು: ಶಿವರಾಜ್‌ಕುಮಾರ್

ಸುಭುದೇಂದ್ರ ತೀರ್ಥರ ಸಮಕ್ಷಮದಲ್ಲಿ ನಡೆದ  ಘಟನೆ ಇದು. ಕಳೆದ ಬಾರಿ ಮಂತ್ರಾಲಯಕ್ಕೆ (Mantralaya) ಭೇಟಿ ನೀಡಿದ್ದ ಪುನೀತ್ ರಾಜ್‍ಕುಮಾರ್ ಮಾತನಾಡಿದ್ದರು. ಕಳೆದ ತಿಂಗಳಷ್ಟೇ ಮಂತ್ರಾಲಯದ ರಾಯರ ಸನ್ನಿಧಾನಕ್ಕೆ ಭೇಟಿ ನೀಡಿದ್ದ ಪುನೀತ್ ರಾಜ್‍ಕುಮಾರ್ ಭಾಗ್ಯವಂತ ಸಿನಿಮಾ ಬಗ್ಗೆ ವಿವರವಾಗಿ ಮಾತನಾಡಿದ್ದರು.

ಮುಂದಿನ ಬಾರಿ ರಾಯರ ಆರಾಧನೆ ಬರುತ್ತೇನೆ ಎಂದು ಪುನೀತ್ ಹೇಳುತ್ತಿದ್ದಾಗಲೆ  ರಾಯರ ಮುಖವಾಡ ಅಲುಗಾಡಿತ್ತು. ವೀಣೆ ಸೆಹ ಕೆಳಕ್ಕೆ ಬಿಳುವ ಸಾಧ್ಯತೆ ಇದ್ದು ಸರಿ ಮಾಡಲಾಗಿತ್ತು. ಇದೊಂದು ಕೆಟ್ಟ ಸೂಚನೆ ಸಿಕ್ಕಿತ್ತಾ  ಎಂದು ಈಗ ಸದ್ದಾಗುತ್ತಿದೆ. 

PREV
Read more Articles on
click me!

Recommended Stories

ಸ್ಕೂಲ್ ಬಸ್ ಹರಿದು 8 ವರ್ಷದ ಬಾಲಕಿ ಸಾವು; ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿ
ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!