ರಾಮ ಮಂದಿರ ನಿರ್ಮಾಣಕ್ಕೆ ತನು, ಮನ ಧನದಿಂದ ಸಹಾಯ ಮಾಡಿ: ಮಂತ್ರಾಲಯದ ಸುಬುಧೇಂದ್ರ ಶ್ರೀ

Suvarna News   | Asianet News
Published : Aug 01, 2020, 02:39 PM ISTUpdated : Aug 01, 2020, 02:43 PM IST
ರಾಮ ಮಂದಿರ ನಿರ್ಮಾಣಕ್ಕೆ ತನು, ಮನ ಧನದಿಂದ ಸಹಾಯ ಮಾಡಿ: ಮಂತ್ರಾಲಯದ ಸುಬುಧೇಂದ್ರ ಶ್ರೀ

ಸಾರಾಂಶ

ಆ. 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ| ರಾಮಮಂದಿರ ನಿರ್ಮಾಣಕ್ಕೆ ಎಲ್ಲರೂ ಸಹಕಾರ ಮಾಡಬೇಕು|ಭೂಮಿ ಪೂಜೆಯಲ್ಲಿ ಎಲ್ಲರೂ ಭಾಗವಹಿಸಲು ಆಗುವುದಿಲ್ಲ|  ಎಲ್ಲರೂ ಮನೆಯಲ್ಲಿ ಇದ್ದು ರಾಮ ಮಂತ್ರ ಜಪಿಸಿ. ಅಯೋಧ್ಯೆಯ ಮಂದಿರ ನಿರ್ಮಾಣಕ್ಕೆ ಬೆಂಬಲಿಸಿ ಎಂದ ಮಂತ್ರಾಲಯ ಶ್ರೀಗಳು| 

ರಾಯಚೂರು(ಆ.01): ರಾಮಮಂದಿರ ನಿರ್ಮಾಣಕ್ಕೆ ಎಲ್ಲರೂ ತನು, ಮನ ಧನದಿಂದ ಸಹಾಯ ಮಾಡಿ. ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ರಾಮ ಎಂಬ ಎರಡು ಅಕ್ಷರದಲ್ಲಿ ಮೂರು ಮಂತ್ರಗಳಿವೆ. ರಾಮ ನಾಮ ಜಪ ಮಾಡಿದರೆ ಕಷ್ಟಗಳು ನಿರ್ವಹಣೆ ಮಾಡುವ ಶಕ್ತಿ ಇದೆ. ಸಾಧನೆ ಮಾಡಲು ಸಹ ರಾಮ ಮಂತ್ರ ಸಹಾಯವಾಗಲಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ. 

ಆ. 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ಹಿನ್ನೆಲೆಯಲ್ಲಿ ಇಂದು ಮಂತ್ರಾಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ರಾಮಮಂದಿರ ನಿರ್ಮಾಣಕ್ಕೆ ಎಲ್ಲರೂ ಸಹಕಾರ ಮಾಡಬೇಕು ಎಂದು ಕರೆ ನೀಡಿದ್ದಾರೆ.

ಮೂಲ ವಿನ್ಯಾಸಕ್ಕಿಂತ 2 ಪಟ್ಟು ದೊಡ್ಡದಾದ ರಾಮ ಮಂದಿರ ನಿರ್ಮಾಣ

ಭೂಮಿ ಪೂಜೆಯಲ್ಲಿ ಎಲ್ಲರೂ ಭಾಗವಹಿಸಲು ಆಗುವುದಿಲ್ಲ. ಮಹಾಮಾರಿ ಕೊರೋನಾ ಸೋಂಕು ಹೆಚ್ಚಾಗಿರುವುದರಿಂದ ದೈಹಿಕವಾಗಿ ಭಾಗವಹಿಸಲು ಆಗಲ್ಲ. ಎಲ್ಲರೂ ಮನೆಯಲ್ಲಿ ಇದ್ದು ರಾಮ ಮಂತ್ರ ಜಪಿಸಿ. ಅಯೋಧ್ಯೆಯ ಮಂದಿರ ನಿರ್ಮಾಣಕ್ಕೆ ಬೆಂಬಲಿಸಿ ಎಂದ ಮಂತ್ರಾಲಯ ಶ್ರೀಗಳು ಕರೆ ನೀಡಿದ್ದಾರೆ. 
 

PREV
click me!

Recommended Stories

ಬೆಂಗಳೂರಿನ 2ನೇ ಏರ್‌ಪೋರ್ಟ್‌, ಗುರುತಿಸಿರೋ ಈ 3 ಸ್ಥಳಗಳಲ್ಲಿ ಯಾವುದು ಬೆಸ್ಟ್? ಅಧ್ಯಯನಕ್ಕೆ ಟೆಂಡರ್ ಕರೆದ ಸರ್ಕಾರ!
ನವೋದಯ ಪರೀಕ್ಷೆಯಲ್ಲಿ ಅಕ್ರಮ ಆರೋಪ; ಬೀದರ್‌ನಲ್ಲಿ ಬಿಇಓಗೆ ವಿದ್ಯಾರ್ಥಿ ಪೋಷಕರಿಂದ ತರಾಟೆ