ಸಚಿವ ಬಿ.ಸಿ. ಪಾಟೀಲ್‌ಗೆ ಕೊರೋನಾ ದೃಢ: ಆತಂಕದಲ್ಲಿ ಕೊಪ್ಪಳದ ಜನತೆ..!

By Suvarna News  |  First Published Aug 1, 2020, 2:20 PM IST

ಆತಂಕದಲ್ಲಿ ಕೊಪ್ಪಳದ ನೂರಾರು ಜನರು| ಸಚಿವ ಬಿ. ಸಿ. ಪಾಟೀಲ್‌ಗೂ ಒಕ್ಕರಿಸಿದ ಕೊರೋನಾ ವೈರಸ್| ಜುಲೈ 27 ರಂದು ಕೊಪ್ಪಳಕ್ಕೆ ಬಂದು ಹೋಗಿದ್ದ ಸಚಿವ ಬಿ. ಸಿ. ಪಾಟೀಲ್‌|


ಕೊಪ್ಪಳ(ಆ.01): ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌ಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ನೂರಾರು ಜನರು ಆತಂಕದಲ್ಲಿದ್ದಾರೆ. ಹೌದು, ಸಚಿವ ಬಿ.ಸಿ. ಪಾಟೀಲ್‌ ಅವರು ಜುಲೈ 27 ರಂದು ಕೊಪ್ಪಳಕ್ಕೆ ಬಂದು ಹೋಗಿದ್ದರು. ಹೀಗಾಗಿ ಅವರ ಸಂಪರ್ಕದಲ್ಲಿರುವ ನೂರಾರು ಮಂದಿಗೆ ಕೋವಿಡ್‌ ಭಯ ಕಾಡುತ್ತಿದೆ. 

ಬಿ.ಎಸ್. ಯಡಿಯೂರಪ್ಪ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಬಿ.ಸಿ. ಪಾಟೀಲ್‌ ಭಾಗಿಯಾಗಿದ್ದರು. ಅಂದು ನಗರದ ಡಿಸಿ ಕಚೇರಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಂಸದ ಸಂಗಣ್ಣ ಕರಡಿ, ಜಿಲ್ಲೆಯ ಎಲ್ಲ ಶಾಸಕರು, ಜಿಲ್ಲಾಧಿಕಾರಿ, ಜಿಪಂ ಸಿಇಓ, ಎಸ್ಪಿ ಸೇರಿದಂತೆ ಜನಪ್ರತಿನಿಧಿಗಳು ಭಾಗಿಯಾಗಿದ್ದರು. 

Tap to resize

Latest Videos

 ಸಚಿವರ ಕುಟುಂಬಕ್ಕೆ ಕೊರೋನಾ ಕಾಟ: ಕೌರವನಿಗೆ ಮತ್ತೆ ಸೋಂಕಿನ ಭೀತಿ..!

ಬಳಿಕ ಬಿಜೆಪಿ ಕಾರ್ಯಾಲಯ ಸಚಿವ ಪಾಟೀಲ್ ಉದ್ಘಾಟಿಸಿದ್ದರು. ಈ ವೇಳೆ ಸಂಸದ ಕರಡಿ ಸಂಗಣ್ಣ, ಶಾಸಕರಾದ ಹಾಲಪ್ಪ ಆಚಾರ್, ಬಸವರಾಜ ದಡೇಸೂಗುರ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು. ಇದೀಗ ಸಚಿವ ಬಿ.ಸಿ.ಪಾಟೀಕ್‌ಗೆ ಕೊರೋನಾ ತಗುಲಿದ ಹಿನ್ನಲೆಯಲ್ಲಿ ಎಲ್ಲರಲ್ಲೂ ಆತಂಕ ಶುರುವಾಗಿದೆ. 

ತಮಗೆ ಕೊರೋನಾ ಸೋಂಕು ಇದೆ ಎಂದು ದೃಢಪಡುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಸಚಿವ ಬಿ.ಸಿ. ಪಾಟೀಲ್‌ ಅವರು, ಕೊಪ್ಪಳದಲ್ಲಿ ನನ್ನನ್ನು ಭೇಟಿಯಾದವರಲ್ಲಿ ಕೋವಿಡ್ ಲಕ್ಷಣ ಕಂಡುಬಂದರೆ ಪರೀಕ್ಷೆಗೆ ಒಳಗಾಗಿ ಎಂದಿಉ ಮನವಿ ಮಾಡಿಕೊಂಡಿದ್ದಾರೆ. 
 

click me!