ಕೊಡವರ ಹೆಸರಿನಲ್ಲಿ ಕೊಡವರಲ್ಲದವರ ಅಧ್ಯಯನ: ಸಿಎನ್‌ಸಿ ಅಧ್ಯಕ್ಷ ನಾಚಪ್ಪ ಗಂಭೀರ ಆರೋಪ

By Kannadaprabha News  |  First Published Mar 2, 2023, 1:41 PM IST

ಕುಲಶಾಸ್ತ್ರ ಅಧ್ಯಯನದ ಹೆಸರಿನಲ್ಲಿ ನೈಜ ಕೊಡವರನ್ನು ವಂಚಿಸಿ ಕೊಡವರ ಹೆಸರಿನಲ್ಲಿ ಕೊಡವರಲ್ಲದವರ ಅಧ್ಯಯನಕ್ಕೆ ಸರ್ಕಾರ ಮುಂದಾಗಿದೆ ಎಂದು ಕೊಡವ ನ್ಯಾಷನಲ್‌ ಕೌನ್ಸಿಲ್‌ ಅಧ್ಯಕ್ಷ ಎನ್‌.ಯು. ನಾಚಪ್ಪ ಗಂಭೀರ ಆರೋಪ ಮಾಡಿದ್ದಾರೆ.


ಮಡಿಕೇರಿ (ಮಾ.2) : ಕುಲಶಾಸ್ತ್ರ ಅಧ್ಯಯನದ ಹೆಸರಿನಲ್ಲಿ ನೈಜ ಕೊಡವರನ್ನು ವಂಚಿಸಿ ಕೊಡವರ ಹೆಸರಿನಲ್ಲಿ ಕೊಡವರಲ್ಲದವರ ಅಧ್ಯಯನಕ್ಕೆ ಸರ್ಕಾರ ಮುಂದಾಗಿದೆ ಎಂದು ಕೊಡವ ನ್ಯಾಷನಲ್‌ ಕೌನ್ಸಿಲ್‌ ಅಧ್ಯಕ್ಷ ಎನ್‌.ಯು. ನಾಚಪ್ಪ(N.U.Nachappa) ಗಂಭೀರ ಆರೋಪ ಮಾಡಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರ್ಕಾರದ ನಡೆ ಸಂವಿಧಾನಿಕ ನೈತಿಕತೆಯ ಉಲ್ಲಂಘನೆಯಾಗಿದೆ. ಹುಲಿಯ ಅಧ್ಯಯನ ಹುಲಿಯ ಹೆಸರಿನಲ್ಲೇ ನಡೆಯಲಿ, ಹುಲಿ ಚಿತ್ರ ತೋರಿಸಿ ಕಾಡುಬೆಕ್ಕು ಅಧ್ಯಯನವನ್ನು ಮಾಡಬೇಡಿ. ಮುಖ್ಯಮಂತ್ರಿಗಳು ಕೊಡವ ವಿರೋಧಿ(Anti-Kodava) ಎಂಬ ಕಳಂಕ ಹೊತ್ತುಕೊಳ್ಳಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tap to resize

Latest Videos

undefined

ಮರು ವ್ಯಾಖ್ಯಾನಿಸಿದ ಮಾನದಂಡದಡಿ ಕೊಡವರನ್ನು ಎಸ್ಟಿ ಪಟ್ಟಿಗೆ ಸೇರಿಸಿ: ಸಿಎನ್‌ಸಿ ಒತ್ತಾಯ

‘ಕೊಡವರ ಕುಲ ಶಾಸ್ತ್ರ’ ಅಧ್ಯಯನ(Kodava genealogy study)ಕ್ಕೆ ಸಂಬಂಧಿಸಿದ ಕಡತ ಕಳೆದ ಆಗಸ್ಟ್‌ ತಿಂಗಳಿನಿಂದ ಮುಖ್ಯಮಂತ್ರಿ(CM Basavaraj bommai)ಗಳ ಬಳಿಯೇ ಉಳಿದಿದೆ. ನೈಜ ಕೊಡವರ ಅಧ್ಯಯನಕ್ಕೆ ತಕ್ಷಣ ಚಾಲನೆ ನೀಡುವ ಮೂಲಕ ಈ ಕಡತಕ್ಕೆ ಜೀವ ತುಂಬಬೇಕು ಎಂದು ಒತ್ತಾಯಿಸಿದ್ದಾರೆ. ಭಾಷಿಕರ ಪ್ರತ್ಯೇಕ ವ್ಯಕ್ತಿತ್ವದ ಹೆಸರಿನಲ್ಲಿ ಕುಲಶಾಸ್ತ್ರದ ಅಧ್ಯಯನ ನಡೆಸಲಿ, ಆದರೆ ಅವರ ಅಸಲಿಯತ್ತನ್ನು ಮರೆಮಾಚಿ ಕೊಡವ ಮುಖವಾಡ ತೊಡಿಸುವ ಮೂಲಕ ಸಾಂಸ್ಕೃತಿಕ ವಂಚನೆಯನ್ನು ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಕೊಡವರು ಒಂದು ಪ್ರತ್ಯೇಕ ರೇಸ್‌. ಕೊಡಗಲ್ಲದೇ ಕೊಡಗಿನ ಹೊರಗೆ ಕೊಡವರಿಗೆ ಎಲ್ಲೂ ತಾಯಿಬೇರು ಇಲ್ಲ. ಕೊಡವರು ತಮ್ಮದೇ ಆದ ಸೂಕ್ಷ್ಮ ಸಾಂಸ್ಕೃತಿಕ ಒಳಕೋಶಗಳನ್ನು ಹೊಂದಿರುತ್ತಾರೆ. ಕೊಡವರಲ್ಲಿ ಚತುರ್ವಣ ಪದ್ಧತಿಯ ಜಾತಿ ಉಪಜಾತಿಗಳಿಲ್ಲ. ಯಾವುದೇ ವೈದಿಕ ಪರಂಪರೆ ಕೊಡವರದಲ್ಲ. ಕೊಡವರು 8 ಪುರಾತನ ಋುಷಿವರ್ಯರ ಹೆಸರಿನ ಗೋತ್ರಗಳ ಅಡಿಯಲ್ಲಿ ಬರುವುದಿಲ್ಲ, ಈ ಕುರಿತು ಬ್ರಿಟಿಷರ ಅವಧಿಯಲ್ಲಿ ನೆಡೆಸಲಾದ ಮಾನವ ಶಾಸ್ತ್ರ ಅಧ್ಯಯನ (ಆಂಥ್ರೋಪಾಲಿಜಿಕಲ್‌ ಸರ್ವೆ ಆಫ್‌ ಇಂಡಿಯಾ) ಎಫಿಗ್ರಾಫಿ ಆಫ್‌ ಇಂಡಿಯಾದಲ್ಲಿ ಸ್ಪಷ್ಟವಾಗಿ ದಾಖಲೀಕರಣಗೊಂಡಿದೆ. ಮತ್ತು 1881 ರಿಂದ 1931 ರ ತನಕ ನೆಡೆಸಿದ ಜನಗಣತಿಯಲ್ಲೂ ಇದನ್ನೇ ಪುನರುಚ್ಚರಿಸಲಾಗಿದೆ. (ಪ್ರತ್ಯೇಕ ಬುಡಕಟ್ಟು ರೇಸ್‌ ಎಂಬುದಾಗಿ ಗುರುತಿಸಲಾಗಿದೆ).

ಮುಖ್ಯಮಂತ್ರಿಗಳಿಗೆ ಕೊಡವರ ಬಗ್ಗೆ ನೈಜ ಕಾಳಜಿ ಇದ್ದಲ್ಲಿ ತಕ್ಷಣ ಕಡತವನ್ನು ವಿಲೇವಾರಿ ಮಾಡಿ ಕೊಡವರ ಕುಲಶಾಸ್ತ್ರ ಮರು ಅಧ್ಯಯನಕ್ಕೆ ಆದೇಶಿಸಬೇಕು. ಇಲ್ಲದಿದ್ದರೆ ಕೊಡವರು ಕಲ್ಯಾಣ ರಾಜ್ಯ ವ್ಯಾಪ್ತಿಯಲ್ಲಿ ಬರುವುದಿಲ್ಲ, ಆದ್ದರಿಂದ ಕೊಡವರ ಸಬಲೀಕರಣ ಅಸಾಧ್ಯವೆಂದು ನೇರವಾಗಿ ನುಡಿಯಲಿ ಎಂದು ನಾಚಪ್ಪ ಒತ್ತಾಯಿಸಿದ್ದಾರೆ.

 

ಕುಲಶಾಸ್ತ್ರ ಅಧ್ಯಯನಕ್ಕೆ 25 ಲಕ್ಷ ರು.: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಈ ಕುರಿತು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ಸಮಾಜ ಕಲ್ಯಾಣ ಇಲಾಖೆ(, Department of Social Welfare) ಮತ್ತು ಬುಡಕಟ್ಟು ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಣಿವಣ್ಣನ್‌(Manivannan IAS) ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರಿಗೆ ಪತ್ರ ಬರೆದು ಒತ್ತಾಯಿಸಿರುವುದಾಗಿ ನಾಚಪ್ಪ ತಿಳಿಸಿದ್ದಾರೆ.

click me!