ಗೋಕಾಕ: ಅತೀ ಶೀಘ್ರದಲ್ಲೇ ಜನರಿಗೆ ಪುನರ್ವಸತಿ, ರಮೇಶ ಜಾರಕಿಹೊಳಿ

By Kannadaprabha News  |  First Published Mar 2, 2023, 1:22 PM IST

ಜಲಾಶಯದಿಂದ ಮುಳುಗಡೆಯಾಗುವ ಯೋಗಿಕೊಳ್ಳ ಗ್ರಾಮದ ಮನೆಗಳ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅತೀ ಶೀಘ್ರದಲ್ಲೆ ಈ ಭಾಗದ ಜನರಿಗೆ ಪುನರ್ವಸತಿ ಕಲ್ಪಿಸಲಾಗುವುದು. ಈ ಜಲಾಶಯದಿಂದ ಕುಡಿಯುವ ನೀರು ಜತೆಗೆ ಗೋಕಾಕ ಮತಕ್ಷೇತ್ರ ಸಂಪೂರ್ಣವಾಗಿ ನೀರಾವರಿ ಕ್ಷೇತ್ರವಾಗಲಿದೆ: ರಮೇಶ ಜಾರಕಿಹೊಳಿ 


ಗೋಕಾಕ(ಮಾ.02): ಇಂದು ಗೋಕಾಕ ಜನತೆಗೆ ಶುಭ ದಿನವಾಗಿದೆ. ಮಹತ್ವಾಕಾಂಕ್ಷಿ ಯೋಜನೆಗೆ ಅಡಿಗಲ್ಲು ಪೂಜೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಗೋಕಾಕ ತಾಲೂಕು ಸೇರಿದಂತೆ ಇತರ ತಾಲೂಕಿನ ಜನತೆಗೂ ಈ ಯೋಜನೆಯಿಂದ ದೊಡ್ಡ ಪ್ರಮಾಣದಲ್ಲಿ ಅನುಕೂಲವಾಗಲಿದೆ. ಈ ಭಾಗ ಮುಂದಿನ ದಿನಗಳಲ್ಲಿ ನೀರಾವರಿಯಿಂದ ಸಮೃದ್ಧಿ ಪಡೆಯಲಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

969 ಕೋಟಿ ವೆಚ್ಚದಲ್ಲಿ ಈ ಭಾಗದ ಮಹತ್ವಕಾಂಕ್ಷಿಯ ಘಟ್ಟಿ ಬಸವಣ್ಣ ಅಣೆಕಟ್ಟು ನಿರ್ಮಾಣ ಕಾಮಗಾರಿ ಚಾಲನೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಈ ಜಲಾಶಯದಿಂದ ಮುಳುಗಡೆಯಾಗುವ ಯೋಗಿಕೊಳ್ಳ ಗ್ರಾಮದ ಮನೆಗಳ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅತೀ ಶೀಘ್ರದಲ್ಲೆ ಈ ಭಾಗದ ಜನರಿಗೆ ಪುನರ್ವಸತಿ ಕಲ್ಪಿಸಲಾಗುವುದು. ಈ ಜಲಾಶಯದಿಂದ ಕುಡಿಯುವ ನೀರು ಜತೆಗೆ ಗೋಕಾಕ ಮತಕ್ಷೇತ್ರ ಸಂಪೂರ್ಣವಾಗಿ ನೀರಾವರಿ ಕ್ಷೇತ್ರವಾಗಲಿದೆ. ಜಲಾಶಯ ನಿರ್ಮಾಣ ಕಾಮಗಾರಿಯೂ ಸಹ ಅತೀ ಶೀಘ್ರವೇ ಪ್ರಾರಂಭಗೊಳ್ಳಲಿದ್ದು ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಿದರು.

Tap to resize

Latest Videos

ರಸ್ತೆ ಅಪಘಾತ: ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಲಕ್ಷ್ಮಣ ಸವದಿ

ಗೋಕಾಕ ಮತಕ್ಷೇತ್ರದಲ್ಲಿ ನೀರಾವರಿಗೆ ಸಂಬಂಧಪಟ್ಟಬ್ರೀಡ್ಜ್‌ ಕಂ ಬ್ಯಾರೇಜ್‌ ಕಾಮಗಾರಿ, ನಗರದ ಮತ್ತು ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಗೋಕಾಕ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುತ್ತಿರುವುದಾಗಿ ಭರವಸೆ ನೀಡಿದರು.

ಕಾರ್ಮಿಕ ಮುಖಂಡ ಅಂಬಿರಾವ್‌ ಪಾಟೀಲ, ಕೆಎಂಎಫ್‌ ನಿರ್ದೇಶಕ ಅಮರನಾಥ ಜಾರಕಿಹೊಳಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಸ್ಥಾಯಿ ಸಮಿತಿ ಚೇರಮನ ಸಿದ್ದಪ್ಪ ಹುಚ್ಚರಾಮಗೋಳ, ಜಿಪಂ ಮಾಜಿ ಸದಸ್ಯ ಟಿ.ಆರ್‌.ಕಾಗಲ, ಭೀಮಗೌಡರ ಪೊಲೀಸ್‌ಗೌಡರ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರಸಭೆ ಸದಸ್ಯರುಗಳಾದ ಕುತ್ಬುದ್ದಿನ ಗೋಕಾಕ, ಅಬ್ಬಾಸ್‌ ದೇಸಾಯಿ, ಶಿವಪ್ಪ ಗುಡ್ಡಾಕಾಯು, ಮುಖಂಡರುಗಳಾದ ಹನಮಂತ ದುರ್ಗನ್ನವರ, ಕಾಂತು ಎತ್ತಿನಮನಿ, ರಾಮಣ್ಣ ಹುಕ್ಕೇರಿ, ಪುಂಡಲೀಕ ವಣ್ಣೂರ, ನೀರಾವರಿ ಇಲಾಖೆಯ ಎಕ್ಸ್ಯೂಟಿವ್‌ ಇಂಜನಿಯರ್‌ ವೆಂಕಪ್ಪ ಶೇಗುಣಸಿ, ಎಇಇ ಕಣ್ಣೂರಕರ, ಎಇ ಕೊಟಬಾಗಿ, ಅರಣ್ಯ ಇಲಾಖೆ ಡಿಎಫ್‌ಒ ಆಂಥೋಣಿ ಮರಿಯಪ್ಪ, ಎಸಿಎಫ್‌ ರಾಜೇಶ್ವರಿ ಈರನಟ್ಟಿ, ಉಪಸ್ಥಿತರಿದ್ದರು.

ಜನಸಾಮಾನ್ಯ ವ್ಯಕ್ತಿ ಕಡೆಯಿಂದ ಚಾಲನೆ ಕೊಡಿಸಿದ ರಮೇಶ!

969 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಭಾಗದ ಮಹತ್ವಾಕಾಂಕ್ಷಿಯ ಘಟ್ಟಿಬಸವಣ್ಣ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಬುಧವಾರ ಜನಸಾಮಾನ್ಯ ವ್ಯಕ್ತಿಯಿಂದ ಚಾಲನೆ ಕೊಡಿಸಿದರು. ಸ್ವತಃ ತಾವೇ ಚಾಲನೆ ನೀಡುವ ಬದಲು ಅವರು ಹಾಲುಮತ ಸಮಾಜದ ಸಾಮಾನ್ಯ ಪ್ರಜೆ ದೇವಪ್ಪ ಗುಡಗುಡಿ ಅವರಿಂದ ಚಾಲನೆ ಕೊಡಿಸಿ ಸೇರಿದ್ದ ಜನತೆಯನ್ನು ಅಚ್ಚರಿಗೊಳಿಸುವಂತೆ ಮಾಡಿದರು.

ಬೆಳಗಾವಿಯಲ್ಲಿ ಕಾಂಗ್ರೆಸ್‌, ಬಿಜೆಪಿ ನಡುವೆ ಶಿವಾಜಿ ಪ್ರತಿಮೆ ಜಟಾಪಟಿ

ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಘಟ್ಟಿಬಸವಣ್ಣ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಶಾಸಕರು ವಿಶೇಷ ಮಹತ್ವ ನೀಡಿದ್ದರು. ಬುಧವಾರ ಬೆಳಗ್ಗೆ ಏಳು ಗಂಟೆಗೆ ವಿಶೇಷ ಹೋಮ-ಹವನ ಪೂಜೆಗಳೊಂದಿಗೆ ಅಡಿಗಲ್ಲು ಸಮಾರಂಭ ನೆರವೇರಿಸಲಾಯಿತು.

ಶಾಶ್ವತ ಕುಡಿಯುವ ನೀರು, ಜಲ ವಿದ್ಯುತ್‌ ಉತ್ಪಾದನೆ, ಅಂತರ್ಜಲ ಮಟ್ಟಹೆಚ್ಚಳ, ಅರಣ್ಯ ಪ್ರದೇಶ ಅಭಿವೃದ್ಧಿ, ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಘಟ್ಟಿಬಸವಣ್ಣ ಜಲಾಶಯ ಪೂರಕವಾಗಲಿದೆ. ಈ ಭಾಗದ ಜನತೆಯ ಬಹುದಿನಗಳ ಕನಸು ಇಂದು ನನಸಾಗಿದೆ ಅಂತ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. 

click me!