ವಿದ್ಯಾರ್ಥಿಯೋರ್ವ ಪರೀಕ್ಷಾ ಕೊಠಡಿಯಿಂದ ಉತ್ತರ ಪತ್ರಿಕೆಯೊಂದಿಗೆ ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಆದ್ರೆ ಇದಕ್ಕೆ ಕಾರಣ ಏನು ?
ಬೆಂಗಳೂರು [ಡಿ.17]: ಪದವಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯೊಬ್ಬ ಮೇಲ್ವಿಚಾರಕರ ಕಣ್ತಪ್ಪಿಸಿ ‘ಉತ್ತರ ಪತ್ರಿಕೆ’ ಸಮೇತ ಪರೀಕ್ಷಾ ಕೊಠಡಿಯಿಂದ ಕಾಲ್ಕಿತ್ತಿರುವ ವಿಚಿತ್ರ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.
ಯಡಿಯೂರು ನಿವಾಸಿ ಧೀರಜ್ (22) (ಹೆಸರು ಬದಲಾಯಿಸಲಾಗಿದೆ) ಉತ್ತರ ಪತ್ರಿಕೆ ಸಮೇತ ಪರಾರಿಯಾದ ವಿದ್ಯಾರ್ಥಿ. ಜಯನಗರ ನಾಲ್ಕನೇ ಹಂತದಲ್ಲಿರುವ ಬಿಇಎಸ್ ಕಾಲೇಜು ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಡಲಿದ್ದು, ಪದವಿ ಪರೀಕ್ಷೆಗಳು ಆರಂಭವಾಗಿವೆ. ಡಿ.14ರಂದು ‘ಐಎಫ್‌ಆರ್‌ಎಸ್’ ವಿಷಯದ ಪರೀಕ್ಷೆ ನಡೆಯುತ್ತಿತ್ತು.
undefined
ಅದೇ ಕಾಲೇಜಿನ 2014ರ ಸಾಲಿನ ವಿದ್ಯಾರ್ಥಿಯಾಗಿದ್ದ ಧೀರಜ್ ಕೆಲ ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದ. ಪರೀಕ್ಷಾ ಸಮಯ ಪೂರ್ಣಗೊಳ್ಳುವ ಸುಮಾರು 10 ನಿಮಿಷಗಳ ಮೊದಲು ಧೀರಜ್ ಉತ್ತರ ಪತ್ರಿಕೆಯನ್ನು ಹೊರಗೆ ತೆಗೆದುಕೊಂಡು ಹೋಗಿದ್ದಾನೆ.
ಸ್ವಂತ ಅಪಾರ್ಟ್‌ಮೆಂಟ್, ಖಾತೆಯಲ್ಲಿ ಲಕ್ಷ ಲಕ್ಷ ಹಣ : ವಿದ್ಯಾರ್ಥಿಗೆ ಇದೆಲ್ಲಾ ಬಂದಿದ್ದೆಲ್ಲಿಂದ?
ತಪ್ಪೇನಿದೆ ಹೇಳಿ?!: ‘ಚೆನ್ನಾಗಿ ಪರೀಕ್ಷೆ ಬರೆದಿರಲಿಲ್ಲ, ಮತ್ತೆ ಅನುತ್ತೀರ್ಣಗೊಳ್ಳುತ್ತಿದ್ದೆ. ಹೀಗಾಗಿ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ತೆಗೆದುಕೊಂಡು ಹೋದೆ. ಇದರಲ್ಲಿ ತಪ್ಪೇನಿದೆ’ ಎಂದು ಪೊಲೀಸರನ್ನೇ ಧೀರಜ್ ಪ್ರಶ್ನೆ ಮಾಡಿದ್ದಾನೆ. ವಿದ್ಯಾರ್ಥಿಯನ್ನು ಬಂಧಿಸಿ, ಮನೆಯಲ್ಲಿದ್ದ ಉತ್ತರ ಪತ್ರಿಕೆಯನ್ನು ಜಪ್ತಿ ಮಾಡಲಾಗಿದೆ.