SDA ಪರೀಕ್ಷೆ: ಮೈಕ್ರೋ ಫೊನ್ ಬಳಸಿ ಕಾಪಿ ಹೊಡೆದ ವಿದ್ಯಾರ್ಥಿನಿ ಅರೆಸ್ಟ್

By Web Desk  |  First Published Jun 16, 2019, 9:13 PM IST

ಕೆಪಿಎಸ್ಸಿ ನಡೆಸಿದ ಎಸ್ ಡಿಎ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ವಿದ್ಯಾರ್ಥಿನಿ ಆರೆಸ್ಟ್| ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಆರ್ಟಿಎಸ್ ಕಾಲೇಜಿನಲ್ಲಿ ಘಟನೆ| ಅಶ್ವಿನಿ ಬಸವರಾಜ್ ಕೊಂಡಜ್ಜಿ ಕಾಪಿ ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿನಿ.


ಹಾವೇರಿ, [ಜೂ.16]:  ಇಂದು [ಭಾನುವಾರ] ಕೆಪಿಎಸ್ಸಿ ನಡೆಸಿದ ಎಸ್ ಡಿಎ ಪರೀಕ್ಷೆಯಲ್ಲಿ ಕಾಪಿ ಹೊಡೆಯುತ್ತಿದ್ದ ವಿದ್ಯಾರ್ಥಿನಿ ಸಿಕ್ಕಿಬಿದ್ದಿದ್ದಾರೆ.
 
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಆರ್ಟಿಎಸ್ ಕಾಲೇಜಿನಲ್ಲಿ ನಡೆದ ಪರೀಕ್ಷೆಯಲ್ಲಿ  ಅಶ್ವಿನಿ ಬಸವರಾಜ್ ಕೊಂಡಜ್ಜಿ ಮೈಕ್ರೋ ಫೋನ್ ಬಳಸಿ ನಕಲು ಹೊಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾಳೆ. 

ಅಶ್ವಿನಿ ಬಸವರಾಜ್ ಕೊಂಡಜ್ಜಿ, ಪರೀಕ್ಷಾ ಕೇಂದ್ರದ ಹೊರಗಡೆ ಕುಳಿತ ಮತ್ತೊಬ್ಬ ವ್ಯಕ್ತಿಯಿಂದ ಮೈಕ್ರೊಫೋನ್ ಮೂಲಕ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತಿದ್ದಳು. ಆದ್ರೆ ಸಹಾಯ ಮಾಡುತ್ತಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ.

Tap to resize

Latest Videos

 ಶಿಕ್ಷಣ ಇಲಾಖೆ ಅಧಿಕಾರಿಗಳು ನಕಲು ಮಾಡಿದ ವಿದ್ಯಾರ್ಥಿನಿ ಅಶ್ವಿನಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

click me!