stray dogs attack: ಭಿಕ್ಷುಕಿಯನ್ನು ಎಳೆದಾಡಿ ಕೊಂದ ರಕ್ಕಸ ಬೀದಿನಾಯಿಗಳ ಹಿಂಡು!

By Kannadaprabha News  |  First Published Jan 11, 2023, 2:33 AM IST

 ರಸ್ತೆ ಪಕ್ಕದಲ್ಲಿ ಮಲಗಿದ್ದ ಮಾನಸಿಕ ಅಸ್ವಸ್ಥ ಭಿಕ್ಷುಕಿಯೊಬ್ಬಳನ್ನು ಬೀದಿ ನಾಯಿಗಳ ಹಿಂಡೊಂದು ಎಲ್ಲೆಂದರಲ್ಲಿ ಕಚ್ಚಿ, ಎಳೆದಾಡಿ ಕೊಂದುಹಾಕಿರುವ ಹೃದಯ ವಿದ್ರಾವಕ ಘಟನೆ ಸಮೀಪದ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.


ಧಾರವಾಡ (ಜ.11) : ರಸ್ತೆ ಪಕ್ಕದಲ್ಲಿ ಮಲಗಿದ್ದ ಮಾನಸಿಕ ಅಸ್ವಸ್ಥ ಭಿಕ್ಷುಕಿಯೊಬ್ಬಳನ್ನು ಬೀದಿ ನಾಯಿಗಳ ಹಿಂಡೊಂದು ಎಲ್ಲೆಂದರಲ್ಲಿ ಕಚ್ಚಿ, ಎಳೆದಾಡಿ ಕೊಂದುಹಾಕಿರುವ ಹೃದಯ ವಿದ್ರಾವಕ ಘಟನೆ ಸಮೀಪದ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಘಟನೆ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬೀದಿನಾಯಿಗಳ ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ವ್ಯಕ್ತವಾಗಿದೆ.

ಶಿಬಾರಗಟ್ಟಿರಸ್ತೆ(Sibaragatti road) ಪಕ್ಕದ ಸ್ಮಶಾನದ ಬಳಿ ನಿತ್ರಾಣಗೊಂಡು ಮಲಗಿದ್ದ ಗ್ರಾಮದ ಮೆಹಬೂಬಿ ದಿಲಾವರ್‌ಸಾಬ್‌(maheboobi dilwar sab) ನದಾಫ್‌ (58) ಬೀದಿ ನಾಯಿ(street dog)ಗಳ ಕ್ರೌರ‍್ಯಕ್ಕೆ ಬಲಿಯಾದವರು. ರಸ್ತೆ ಬದಿ ಮಲಗಿದ್ದ ಮೆಹಬೂಬಿ ಅವರ ಮುಖ, ಭುಜ, ಕೈ-ಕಾಲು ಸೇರಿ ಎಲ್ಲೆಂದರಲ್ಲಿ ಬೀದಿ ನಾಯಿಗಳು ಕಚ್ಚಿ, ಎಳೆದಾಡಿದ್ದು, ಇದರಿಂದ ತೀವ್ರ ರಕ್ತಸ್ರಾವಕ್ಕೊಳಗಾಗಿರುವ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Tap to resize

Latest Videos

2 ಗಂಟೆಯಲ್ಲಿ 40ಕ್ಕೂ ಹೆಚ್ಚು ಜನರ ಮೇಲೆ ಬೀದಿನಾಯಿಯ ಮಾರಕ ದಾಳಿ

ಮೆಹಬೂಬಿ ಅವರು ಮಾನಸಿಕ ಅಸ್ವಸ್ಥೆಯಾಗಿದ್ದು, ಗ್ರಾಮದಲ್ಲೆಲ್ಲ ಓಡಾಡಿಕೊಂಡಿದ್ದರು. ಗ್ರಾಮಸ್ಥರು ನೀಡಿದ ಊಟ, ತಿಂಡಿ ಸೇವಿಸಿ ಮನ ಬಂದಲ್ಲಿ ರಾತ್ರಿ-ಹಗಲು ಮಲಗುತ್ತಿದ್ದರು. ಸೋಮವಾರ ರಾತ್ರಿ ಗ್ರಾಮದ ಸ್ಮಶಾನದ ಬಳಿ ರಸ್ತೆ ಪಕ್ಕದ ನಿರ್ಜನ ಪ್ರದೇಶದಲ್ಲಿ ಮಲಗಿದ್ದ ಅವರ ಮೇಲೆ ಬೆಳಗಿನ ಜಾವ ಬೀದಿ ನಾಯಿಗಳ ಹಿಂಡೊಂದು ಏಕಾಏಕಿ ದಾಳಿ ಇಟ್ಟಿದೆ.

ಪ್ರತಿಭಟಿಸುವ ಸಾಮರ್ಥ್ಯ ಇಲ್ಲದ ಮೆಹಬೂಬಿ ಅವರ ಮೈಮೇಲೆ ಎಲ್ಲೆಂದರಲ್ಲಿ ಕಚ್ಚಿದ್ದು, ಈ ವೇಳೆ ಅವರ ಮೈಮೇಲಿನ ಮಾಂಸ ಕಿತ್ತುಹೊರಬಂದಿದೆ. ನಿರ್ಜನ ಪ್ರದೇಶವಾಗಿದ್ದರಿಂದ ಈ ಕುರಿತು ಯಾರಿಗೂ ಸಣ್ಣ ಮಾಹಿತಿಯೂ ಇರಲಿಲ್ಲ. ಮಂಗಳವಾರ ಮುಂಜಾನೆ ಈ ರಸ್ತೆಯಲ್ಲಿ ಜನ ಓಡಾಡುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ.

 

ಕಾರವಾರದಲ್ಲಿ ಬೀದಿನಾಯಿಗಳದ್ದೇ ಕಾರುಬಾರು; ರಾತ್ರಿ ಓಡಾಡೋಕೆ ಹೆದರ್ತಾರೆ ಜನ

ಸುದ್ದಿ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಬೀದಿನಾಯಿಗಳ ಹಾವಳಿ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯಿ ಕಾಟ ತಪ್ಪಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಕುರಿತು ಗರಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!