ಬೆಂಗಳೂರು: ಬಾಲಕಿಯನ್ನು ಕಚ್ಚಿ ಎಳೆದೊಯ್ದ ಬೀದಿ ನಾಯಿಗಳು!

By Kannadaprabha News  |  First Published Oct 15, 2024, 6:56 AM IST

ಈ ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾಯಿ ಕಚ್ಚಿ ಎಳೆದಾಡಲು ಶುರು ಮಾಡಿದ ಬೆನ್ನಲ್ಲಿಯೇ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಬಾಲಕಿ ಕಿರುಚಾಟ ನಡೆಸಿದ್ದಾಳೆ. ಸ್ಥಳೀಯರ ಸಹಾಯದಿಂದ ಬಾಲಕಿಯನ್ನು ರಕ್ಷಣೆ ಮಾಡಲಾಗಿದ್ದು ಪ್ರಾಣಾಪಾಯ ಸಂಭವಿಸಿಲ್ಲ. 


ಬೆಂಗಳೂರು ದಕ್ಷಿಣ(ಅ.15): ಇಬ್ಬರು ಮಕ್ಕಳ ಮೇಲೆ ಬೀದಿನಾಯಿಗಳ ಗುಂಪು ದಾಳಿ ಮಾಡಿ ಓರ್ವ ಬಾಲಕಿ ಯನ್ನು 10 ಮೀ.ನಷ್ಟು ದೂರ ಕಚ್ಚಿ ಎಳೆದೊಯ್ದು ಗಾಯಗೊಳಿಸಿದ ಘಟನೆ ಜಾಲಹಳ್ಳಿ ಏರ್ಪೋರ್ಸ್‌ ಕ್ಯಾಂಪಸ್‌ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾಯಿ ಕಚ್ಚಿ ಎಳೆದಾಡಲು ಶುರು ಮಾಡಿದ ಬೆನ್ನಲ್ಲಿಯೇ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಬಾಲಕಿ ಕಿರುಚಾಟ ನಡೆಸಿದ್ದಾಳೆ. ಸ್ಥಳೀಯರ ಸಹಾಯದಿಂದ ಬಾಲಕಿಯನ್ನು ರಕ್ಷಣೆ ಮಾಡಲಾಗಿದ್ದು ಪ್ರಾಣಾಪಾಯ ಸಂಭವಿಸಿಲ್ಲ. ಸೆ.28ರಂದು ಏರ್ಪೋರ್ಸ್‌ ಕ್ಯಾಂಪಸ್‌ ಆವರಣದಲ್ಲಿ ಇಬ್ಬರು ಮಕ್ಕಳು ನಡೆದು ಕೊಂಡು ಹೋಗುತ್ತಿರುವ ವೇಳೆ ಏಕಾಏಕಿ ದಾಳಿ ನಡೆಸಿದ ನಾಯಿಗಳು ಒಬ್ಬ ಹುಡುಗಿಯ ಕಾಲು ಕಚ್ಚಿ ಸುಮಾರು ದೂರ ಆಕೆಯನ್ನ ಎಳೆದೊಯ್ದಿದೆ. 

Tap to resize

Latest Videos

Bengaluru:ನಗರದಲ್ಲಿ ನಿಲ್ಲದ ಬೀದಿ ನಾಯಿ ದಾಳಿ, ಬಾಲಕಿಯನ್ನು 10 ಮೀಟರ್‌ ಎಳೆದೊಯ್ದ ಡಾಗ್‌ ಸ್ಕ್ವಾಡ್‌!

ಭಯದಿಂದ ಆಕೆಯ ಜೊತೆಗಿದ್ದ ಬಾಲಕ ಓಡಿ ರಕ್ಷಣೆಗಾಗಿ ಕೂಗಾಟ ನಡೆಸುತ್ತಾನೆ. ತಕ್ಷಣ ಅಕ್ಕಪಕ್ಕದಲ್ಲಿದ್ದ ಸ್ಥಳೀಯರು ಓಡಿ ಬಂದು ನಾಯಿಗಳನ್ನು ಹೊಡೆದೊಡಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ನಾಯಿಗಳಿಗೆ ಆಹಾರ ನೀಡಲು ಚಿಂತನೆ ನಡೆಸುತ್ತಿರುವ ಬಿಬಿ ಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾಯಿ ಹಾವಳಿಗೆ ಕಡಿವಾಣ ಹಾಕುವ ನಿಯಂತ್ರಣಕ್ಕೆ ಮುಂದಾಗಿಲ್ಲ ಎಂದು ದೂರುತ್ತಿದ್ದಾರೆ.

ಬೀದಿನಾಯಿಗಳಿಂದ ಪಾರಾಗಲು ದೊಣ್ಣೆ ಹಿಡಿದುಕೊಂಡು ಓಡಾಡಿ'

ಬೆಂಗಳೂರು ಬೀದಿನಾಯಿಗಳು ದಾಳಿ ಮಾಡಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ಬೀದಿ ನಾಯಿ ಸಮಸ್ಯೆಗೆ ಪರಿಹಾರ ನೀಡ ಬೇಕಾದಬಿಬಿಎಂಪಿ ಅಧಿಕಾರಿಗಳು, ನಾಯಿ ಯಿಂದ ಸಂರಕ್ಷಿಸಿಕೊಳ್ಳಲು ಕೋಲುಗಳನ್ನು ಹಿಡಿದುಕೊಂಡು ಓಡಾಡುವಂತೆ ಸಾರ್ವಜನಿಕರಿಗೆ ಸಲಹೆ ನೀಡುತ್ತಿದ್ದಾರೆ. 

ಜಾಲಹಳ್ಳಿ ವ್ಯಾಪ್ತಿಯ ಐಎಎಫ್ ಸೇರಿದಂತೆಮತ್ತಿತರಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಕಳೆದ ಕೆಲ ತಿಂಗಳಿನಿಂದ ಪಾದಚಾರಿಗಳ ಮೇಲೆ ಬೀದಿ ನಾಯಿಗಳುದಾಳಿಮಾಡುತ್ತಿದ್ದು, ಅದರಿಂದ ಹಲವರು ಗಾಯಗೊಂಡಿದ್ದಾರೆ. ಅಲ್ಲದೆ, ಸೆ.28ರಂದು ಇಬ್ಬರು ಬಾಲಕಿಯರ ಮೇಲೆ ಈ ವಿಷಯ ತಿಳಿಯುತ್ತಿದ್ದಂತೆ ಐಎಎಫ್ ಬಡಾವಣೆಗೆ ಭೇಟಿ ನೀಡಿದ್ದ ಬಿಬಿಎಂಪಿ ಅಧಿಕಾರಿಗಳು, ಬೀದಿ ನಾಯಿಗಳಿಂದ ಸಂರಕ್ಷಿಸಿಕೊಳ್ಳಲು ನಾಯಿಗಳು ಬಡಾವಣೆಯೊಳಗೆ ಪ್ರವೇಶಿಸಲು ಇರುವ ಸ್ಥಳಗಳನ್ನು ಮುಚ್ಚುವಂತೆ ಸಲಹೆ ನೀಡಿದ್ದಾರೆ. ಜತೆಗೆ ಪಾದಚಾರಿಗಳು ಸದಾ ತಮ್ಮೊಂದಿಗೆ ಕೋಲು ಅಥವಾ ದೊಣ್ಣೆಯನ್ನು ಹಿಡಿದುಕೊಂಡು ಓಡಾಡುವಂತೆ ಸಲಹೆ ನೀಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

click me!