ಸಿ.ಎಂ. ಇಬ್ರಾಹಿಂ BJP ಬಗ್ಗೆ ಯೋಚಿಸೋದು ಬಿಡಲಿ: ನಳಿನ್

By Kannadaprabha News  |  First Published Feb 25, 2020, 10:00 AM IST

ಸಿ.ಎಂ. ಇಬ್ರಾಹಿಂ ಅಂದ್ರೆ ಯಾರ್ರೀ ಅವರು, ಯಾವ ಪಕ್ಷದಲ್ಲಿದ್ದಾರೆ ಅವರು. ಕಾಂಗ್ರೆಸ್‌ ಪಕ್ಷದಲ್ಲಿದ್ದರೆ ಆ ಪಕ್ಷದ ಬಗ್ಗೆ ಸ್ವಲ್ಪ ಯೋಚಿಸಲಿ. ಬಿಜೆಪಿಯ ಬಗ್ಗೆ ಯೋಚಿಸುವುದನ್ನು ಬಿಟ್ಟು ಬಿಡಲಿ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಕಟುವಾಗಿ ಹೇಳಿದ್ದಾರೆ.


ಉಡುಪಿ(ಫೆ.25): ಸಿ.ಎಂ. ಇಬ್ರಾಹಿಂ ಅಂದ್ರೆ ಯಾರ್ರೀ ಅವರು, ಯಾವ ಪಕ್ಷದಲ್ಲಿದ್ದಾರೆ ಅವರು. ಕಾಂಗ್ರೆಸ್‌ ಪಕ್ಷದಲ್ಲಿದ್ದರೆ ಆ ಪಕ್ಷದ ಬಗ್ಗೆ ಸ್ವಲ್ಪ ಯೋಚಿಸಲಿ. ಬಿಜೆಪಿಯ ಬಗ್ಗೆ ಯೋಚಿಸುವುದನ್ನು ಬಿಟ್ಟು ಬಿಡಲಿ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಕಟುವಾಗಿ ಹೇಳಿದ್ದಾರೆ.

ಸೋಮವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಭಿನ್ನಮತ ಇದೆ ಎಂಬ ಇಬ್ರಾಹಿಂ ಅವರಿಗೆ ಟಾಂಗ್‌ ಕೊಟ್ಟರು. ಇಬ್ರಾಹಿಂ ಕಾಂಗ್ರೆಸ್‌ ಪಕ್ಷವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ. ಅವರಿಗೆ ಪಕ್ಷಕ್ಕೆ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಿಕ್ಕಾಗಿಲ್ಲ. ವಿಪಕ್ಷ ನಾಯಕರನ್ನು ಆಯ್ಕೆ ಮಾಡಲಿಕ್ಕಾಗಿಲ್ಲ. ಅವರ ರಾಷ್ಟಾಧ್ಯಕ್ಷೆ ಸೋನಿಯಾ ಅವರೇ ಹಂಗಾಮಿ ಹುದ್ದೆಯಲ್ಲಿದ್ದಾರೆ. ಏನು ಗತಿಗೇಡು ಬಂದಿದೆ ಇಷ್ಟುದೊಡ್ಡ ರಾಷ್ಟ್ರೀಯ ಪಕ್ಷಕ್ಕೆ ಎಂದು ನಳಿನ್‌ ಹರಿಹಾಯ್ದರು.

Latest Videos

undefined

ಮಂಗಳೂರಿಗೆ ಮೆರುಗು ತುಂಬಿದ್ದ ಕಲಶ ಮರುಸ್ಥಾಪನೆ

ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ, ಅಸಮಾಧಾನವೂ ಇಲ್ಲ. ಮೂಲ ಬಿಜೆಪಿಯವರು, ಹೊರಗಿನವರು, ಬಂದವರು ಎನ್ನುವ ವ್ಯತ್ಯಾಸ ಇಲ್ಲ. ಪಕ್ಷ ಸೇರಿದ ಮೇಲೆ ಎಲ್ಲರೂ ನಮ್ಮವರು ಎಂದರು.

ಟ್ರಂಪ್‌ ಅವರನ್ನು ಭಾರತಕ್ಕೆ ಕರೆತರುವ ಮೂಲಕ ಇಡೀ ಜಗತ್ತೇ ಈಗ ಭಾರತದತ್ತ ತಿರುಗಿ ನೋಡುತ್ತಿದೆ. ಈ ಮೂಲಕ ಮೋದಿ ಅವರು ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿದ್ದಾರೆ. ಭಾರತ ಮತ್ತು ಅಮೆರಿಕಾದ ಸಂಬಂಧ ಗಟ್ಟಿಯಾಗುತ್ತಿದೆ, ಇದರಿಂದ ಭಾರತಕ್ಕೆ ಲಾಭವಾಗುತ್ತಿದೆ ಎಂದು ನಳಿನ್‌ ಹೇಳಿದರು.

ಒಬಾಮನನ್ನು ಯಾಕೆ ಸ್ವಾಗತಿಸಿದ್ರು

ಕಾಂಗ್ರೆಸ್‌ನವರಿಗೆ ಅವರಿಗೆ ರಾಷ್ಟ್ರ ಎಂದರೇನು ರಾಷ್ಟ್ರಗಳ ನಡುವೆ ಸಂಬಂಧಗಳೆಂದರೇನು ಎಂಬ ಯಾವ ಪರಿಕಲ್ಪನೆಯೂ ಇಲ್ಲ. ಟ್ರಂಪ್‌ ಅವರನ್ನು ಕರೆದದ್ದು ದುಂದುವೆಚ್ಚ ಎಂದು ಹೇಳುತ್ತಿದ್ದಾರೆ. ಅವರು ವಿಪಕ್ಷದಲ್ಲಿರುವುದರಿಂದ ಎಲ್ಲವನ್ನೂ ವಿರೋಧಿಸುತ್ತಿದ್ದಾರೆ. ಇದು ಅವರ ಹವ್ಯಾಸ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ಒಬಾಮ ಭಾರತಕ್ಕೆ ಬಂದಿದ್ದರು. ಲೋಕಸಭೆಯಲ್ಲಿ ಭಾಷಣ ಮಾಡಿದ್ದರು. ಅದಕ್ಕೂ ಅದ್ದೂರಿಯಾದ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಆಗ ಯಾಕೆ ಕಾಂಗ್ರೆಸಿನವರು ಕಣ್ಣುಮುಚ್ಚಿ ಕುಳಿತಿದ್ರು? ಯಾಕೆ ವಿರೋಧ ಮಾಡಲಿಲ್ಲ? ಯಾಕೆ ಸ್ವಾಗತ ಮಾಡಿದ್ರು? ಎಂದು ಪ್ರಶ್ನಿಸಿದರು.

click me!