ಬಸ್‌ನಲ್ಲೇ ಎದೆನೋವು: ಮಾನವೀಯತೆ ಮೆರೆದ ಚಾಲಕ, ನಿರ್ವಾಹಕ

By Kannadaprabha News  |  First Published Feb 25, 2020, 9:37 AM IST

ಸಿಟಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಸ್‌ ಚಾಲಕ ಹಾಗೂ ನಿರ್ವಾಹಕ ಎಲ್ಲಿಯೂ ಬಸ್ಸನ್ನು ನಿಲ್ಲಿಸದೆ ನೇರವಾಗಿ ಆಸ್ಪತ್ರೆ ಕರೆದೊಯ್ದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮರೆದಿರುವ ಘಟನೆ ಕಿನ್ಯಾ ಗ್ರಾಮದ ಕೆ.ಸಿ.ರೋಡು ಎಂಬಲ್ಲಿ ಸೋಮವಾರ ನಡೆದಿದೆ.


ಮಂಗಳೂರು(ಫೆ.25): ಸಿಟಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಸ್‌ ಚಾಲಕ ಹಾಗೂ ನಿರ್ವಾಹಕ ಎಲ್ಲಿಯೂ ಬಸ್ಸನ್ನು ನಿಲ್ಲಿಸದೆ ನೇರವಾಗಿ ಆಸ್ಪತ್ರೆ ಕರೆದೊಯ್ದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮರೆದಿರುವ ಘಟನೆ ಕಿನ್ಯಾ ಗ್ರಾಮದ ಕೆ.ಸಿ.ರೋಡು ಎಂಬಲ್ಲಿ ಸೋಮವಾರ ನಡೆದಿದೆ.

ತಲಪಾಡಿ-ಕಿನ್ಯಾ ಆಗಿ ಮಂಗಳೂರು ತೆರಳುವ 43ಎ ನಂಬರ್‌ನ ಮಹೇಶ್‌ ಟ್ರಾವೆಲ್ಸ್‌ ಬಸ್‌ ಚಾಲಕ ಹೊಸಂಗಡಿ ಸುಳ್ಯಮೆಯ ಪ್ರಮೋದ್‌ ಹಾಗೂ ನಿರ್ವಾಹಕ ಕಿನ್ಯಾ ನಿವಾಸಿ ಅಶ್ವಿತ್‌ ಮಾನವೀಯತೆ ಮೆರೆದ ಸಿಬ್ಬಂದಿ.

Latest Videos

undefined

ಘಟನೆ ವಿವರ:

ಬೆಳಗ್ಗೆ 10.30ಕ್ಕೆ ಕಿನ್ಯಾದಿಂದ ತೆರಳುವ ಬಸ್‌ನಲ್ಲಿ ಮೀನಾದಿ ನಿವಾಸಿ ಭಾಗ್ಯಾ(50) ಎಂಬುವರು ಇನ್ನೋರ್ವ ಮಹಿಳೆ ಜತೆಗೆ ಬಸ್‌ ಏರಿದರು. ಸೀಟಿನಲ್ಲಿ ಕುಳಿತಿದ್ದ ಭಾಗ್ಯ ಅವರು ಬಸ್‌ ಕೆ.ಸಿ.ರೋಡು ತಲುಪುತ್ತಿದ್ದಂತೆ ಎದೆನೋವು ಎಂದು ಬೊಬ್ಬೆ ಹಾಕಲು ಆರಂಭಿಸಿದರು. ಇದನ್ನು ಗಮನಿಸಿದ ಸಿಬ್ಬಂದಿ ಬಸ್ಸಿನಲ್ಲಿ ಪ್ರಯಾಣಿಕರಿದ್ದರೂ, ಎಲ್ಲಿಯೂ ನಿಲ್ಲಿಸದೆ ಸುಮಾರು 3 ಕಿ.ಮೀ. ದೂರ ಬಸ್‌ ಚಲಾಯಿಸಿ ಕೋಟೆಕಾರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಂಗಳೂರಿಗೆ ಮೆರುಗು ತುಂಬಿದ್ದ ಕಲಶ ಮರುಸ್ಥಾಪನೆ

ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಭಾಗ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಹೊರರೋಗಿಯಾಗಿ ಮಹಿಳೆ, ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವುದಾಗಿ ಮಹೇಶ್‌ ಬಸ್‌ ಕಂಪನಿ ಪ್ರಬಂಧಕ ರಂಜಿತ್‌ ತಿಳಿಸಿದ್ದಾರೆ. ಶ್ರಮಿಕ ಸಂಘ ಸದಸ್ಯರಾಗಿರುವ ಚಾಲಕ ಹಾಗೂ ನಿರ್ವಾಹಕರ ಸಮಯಪ್ರಜ್ಞೆ ಹಾಗೂ ಮಾನವೀಯತೆಯ ಗುಣಗಳನ್ನು ಸಂಘ ಹಾಗೂ ಬಸ್‌ ಮಾಲೀಕ ಪ್ರಕಾಶ್‌ ಶೇಖ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

click me!