ತಾರತಮ್ಯ ನಿಲ್ಲಿಸಿ ಪೌರ ಕಾರ್ಮಿಕರನ್ನು ಸಮನಾಗಿ ಕಾಣಿ

By Kannadaprabha News  |  First Published Oct 11, 2023, 6:52 AM IST

ನಗರ ಸ್ಥಳೀಯ, ಮಹಾನಗರ ಪಾಲಿಕೆಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿರನ್ನು ವಿಭಜಿಸಿ ವೇತನ ಮತ್ತು ಇತರೆ ಸೌಲಭ್ಯಗಳಲ್ಲಿ ತಾರತಮ್ಯ ಮಾಡುತ್ತಿರುವ ಸರ್ಕಾರಗಳ ನಡೆ ಬದಲಿಸುವಂತೆ ಮುನಿಸಿಪಲ್ ಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಒತ್ತಾಯಿಸಿದರು. ತುಮಕೂರು ಪೌರ ಕಾರ್ಮಿಕರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.


  ತುಮಕೂರು :  ನಗರ ಸ್ಥಳೀಯ, ಮಹಾನಗರ ಪಾಲಿಕೆಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿರನ್ನು ವಿಭಜಿಸಿ ವೇತನ ಮತ್ತು ಇತರೆ ಸೌಲಭ್ಯಗಳಲ್ಲಿ ತಾರತಮ್ಯ ಮಾಡುತ್ತಿರುವ ಸರ್ಕಾರಗಳ ನಡೆ ಬದಲಿಸುವಂತೆ ಮುನಿಸಿಪಲ್ ಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಒತ್ತಾಯಿಸಿದರು. ತುಮಕೂರು ಪೌರ ಕಾರ್ಮಿಕರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ಒಂದೆ ಕೆಲಸಕ್ಕೆ-ಒಂದೆ ಸ್ವರೂಪದ ವೇತನ ನೀಡಬೇಕಾದ್ದು. ಆದರೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಉಲ್ಲಂಘಿಸಲಾಗುತ್ತಿದೆ. ಹಲವು ವರ್ಷಗಳ ನಿರಂತರ ಚಳುವಳಿ ನಂತರವೂ ಎಲ್ಲಾ ಪೌರ ಕಾರ್ಮಿಕರಿಗೆ ನ್ಯಾಯ ಸಿಕ್ಕಿಲ್ಲ, ಉದ್ಯಾನವನ, ಕಸದ ಆಟೋ ಸಹಾಯಕ, ಲೋಡರ್ ಹೀಗೆ ವಿವಿಧ ಹೆಸರು ನೀಡಿ ಪೌರ ಕಾರ್ಮಿಕರನ್ನು ದುಡಿಸಿ ಶೋಷಿಸಲಾಗುತ್ತಿದೆ ಎಂದು ಕಿಡಿಕಾರಿದರು.

Latest Videos

undefined

ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಕೆ. ಸುಬ್ರಮಣ್ಯ, ಗುತ್ತಿಗೆಯಿಂದ ನೇರ ಪಾವತಿಗೆ ತರಲಾಗಿದೆ. ಸಮಾನ ವೇತನ ನೀಡದ ಕನಿಷ್ಠ ವೇತನವನ್ನು ಮಾತ್ರವೆ ನೀಡಿ ದುಡಿಸುವುದು ನ್ಯಾಯ ಸಮ್ಮತ ಅಲ್ಲ, ಸೂಕ್ತ ರಕ್ಷಣೆ ಸಲಕರಣೆ, ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿದರು.

ಖಾಯಂ ನೌಕರಿಗೆ ಮಾತ್ರ ನೀಡಿರುವ 7 ಸಾವಿರ ರು. ಇತರೆ ಎಲ್ಲಾ ಪೌರ ಕಾರ್ಮಿಕರಿಗ ನೀಡಬೇಕು. ಸುರಕ್ಷತಾ ಸಲಕರಣೆಗಳಾದ ಕೈ ಕವಚ, ಗುಣಮಟ್ಟದ ಗಮ್ ಬೂಟ್, ಸಮವಸ್ತ್ರ, ಅಗತ್ಯ ಸಲಕರಣೆ ನೀಡಬೇಕು ಎಂದು ಆಗ್ರಹಿಸಿದರು.

ಲಕ್ಷಂತರ ರು. ವೆಚ್ಚವಾದರು ಬೆಳಗಿದ ಉಪಹಾರ ತಿನ್ನಲು ಯೋಗ್ಯವಾಗಿಲ್ಲ, ಉತ್ತಮ ಗುಣಮಟ್ಟ- ಶುಚಿಯಾದ ಆಹಾರವನ್ನು ನೀಡಲು ಕ್ರಮವಹಿಸಿ ಒಂದು ಕ್ಯಾಂಟೀನ್‌ ಸಮಿತಿಯನ್ನು ರಚಿಸಬೇಕು ಎಂದಿದ್ದಾರೆ.

ಪೌರಕಾರ್ಮಿಕರಿಗೆ ಸಫಾಯಿ ಕರ್ಮಚಾರಿ ಪತ್ರ ನೀಡಿ ಸಫಾಯಿ ಕರ್ಮಚಾರಿಗಳ ನಿಗಮದಿಂದ ಸೌಲಭ್ಯ ಪಡೆಯಲು ಸಹಕರಿಸಬೇಕು. ಮನೆ ಇಲ್ಲದ ಎಲ್ಲಾ ಪೌರ ಕಾರ್ಮಿಕರಿಗೆ ಮನೆ-ನಿವೇಶನ ನೀಡಬೇಕು ಎಂದಿದ್ದಾರೆ.

ಕೆಲಸದ ಅವಧಿಯಲ್ಲೆ ನಿಧನರಾದ ಪೌರ ಕಾರ್ಮಿಕರ ಕುಟುಂಬ ಬೀದಿ ಪಾಲು ಆಗದಂತೆ ತಡೆಯಲು ಅವಲಂಬಿತರಿಗೆ ಕೆಲಸ ಮತ್ತು ಕಾಯಿದೆಯಂತೆ ಉಪಧನ ನೀಡಬೇಕು ಎಂದರು.

ನೂತನ ಪದಾಧಿಕಾರಿಗಳ ಆಯ್ಕೆಯು ಸರ್ವಾನುಮತದಿಂದ ನಡೆದಿದ್ದು, ಅಧ್ಯಕ್ಷರಾಗಿ ಸೈಯದ್ ಮುಜೀಬ್, ಉಪಾಧ್ಯಕ್ಷರಾಗಿ ರಾಮಣ್ಣ, ನಟರಾಜು, ಕೃಷ್ಣ ಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಕೆ.ಸುಬ್ರಮಣ್ಯ. ಕಾರ್ಯದರ್ಶಿಗಳಾಗಿ ಕುಮಾರ್, ಗಂಗ ರಾಜು, ಕೆಂಪಣ್ಣ, ಶಿವಕುಮಾರ್, ರಾಜೇಶ್, ಸಂಘಟನಾ ಕಾರ್ಯದರ್ಶಿಯಾಗಿ ಮಂಜುನಾಥ್, ಖಜಾಂತಿಯಾಗಿ ಮಂಜಣ್ಣ, ಎಂ.ಸಿ. ಕಾರ್ಯಕಾರಿ ಸದಸ್ಯರಾಗಿ , ನರಸಿಂಹಮೂರ್ತಿ, ಮಹದೇವ, ಗಂಗಹನುಮಯ್ಯ, ನವೀನಕುಮಾರ್, ಆನಂದ ಸೇರಿದಂತೆ 35 ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಮಂಜುನಾಥ್ ಸ್ವಾಗತಿಸಿದರು ಕೃಷ್ಣಮೂರ್ತಿ ವಂದಿಸಿದರು.

click me!