ಬಳ್ಳಾರಿ: ಮೂರ್ತಿ ಸ್ಥಾಪನೆ ವೇಳೆ ಗುಂಪು ಘರ್ಷಣೆ, ಕಲ್ಲು ತೂರಾಟ

ಗ್ರಾಮದಲ್ಲಿ ಎರ್ರಿತಾತಾ ದೇವಸ್ಥಾನದ ಆವರಣದಲ್ಲಿ ಹೊಸದಾಗಿ ದೇವಸ್ಥಾನ ನಿರ್ಮಾಣ ಹಾಗೂ ಎರ್ರಿತಾತಾ ಮೂರ್ತಿ ಪ್ರತಿಷ್ಠಾಪನೆ ಮಾಡದಂತೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅಲ್ಲದೆ ಏ.5ರಂದು ಕೋರ್ಟ್ ಆದೇಶದ ಮೇರೆಗೆ ಮೂರ್ತಿ ಪ್ರತಿಷ್ಠಾಪನೆ ಮಾಡಿದವರಿಂದಲೇ ಅದನ್ನು ತೆರವುಗೊಳಿಸಲಾಗಿತ್ತು. ಆ ಬಳಿಕ ಗ್ರಾಮದಲ್ಲಿ ದ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು.

ಬಳ್ಳಾರಿ(ಏ.09):  ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಎರ್ರಿತಾತಾ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿ ಎರಡು ಗುಂಪುಗಳ ಮಧ್ಯೆ ಭಾನುವಾರ ರಾತ್ರಿ ಸಂಭವಿಸಿದ ಘರ್ಷಣೆ, ಕಲ್ಲು ತೂರಾಟ ವೇಳೆ ಮೂವರು ಪೊಲೀಸ್ ಅಧಿಕಾರಿಗಳು ಸೇರಿ ಐವರಿಗೆ ಗಾಯಗಳಾಗಿವೆ.

ಗ್ರಾಮದಲ್ಲಿ ಮೂರ್ತಿ ಪ್ರತಿಷ್ಠಾಪನೆ, ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿ ಗ್ರಾಮದ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಹೀಗಾಗಿ ಬಂದೋಬಸ್ತ್‌ಗಾಗಿ ಸ್ಥಳಕ್ಕೆ ತೆರಳಿದ ಪೊಲೀಸರು ಎರಡೂ ಗುಂಪುಗಳನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಆಗ ಎರಡೂ ಗುಂಪಿನವರು ಪಿಎಸ್‌ಐ ಸಂತೋಷ್ ಡಬ್ಬಿನ್ ಮೇಲೆ ಹಲ್ಲೆ ನಡೆಸಿದ್ದಾರೆ. ಜತೆಗೆ, ಕರ್ತವ್ಯದಲ್ಲಿದ್ದ ಇನ್ನುಳಿದ ಪೊಲೀಸರನ್ನು ತಡೆದು ಕಲ್ಲು ತೂರಿದ್ದಾರೆ. ಇದರಿಂದ ಸಿಪಿಐ ಸತೀಶ್, ಎಸ್‌ಐ ಕರಿವೀರಪ್ಪ, ಸಿಬ್ಬಂದಿ ಮುಸ್ತಾಫ್ ಎಂಬವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Latest Videos

ಬಳ್ಳಾರಿ ಮನೆಯಲ್ಲಿ 5 ಕೋಟಿ ರೂ. ಕ್ಯಾಷ್, 3 ಕೆಜಿ ಬಂಗಾರ, 103 ಕೆಜಿ ಬೆಳ್ಳಿ ಪತ್ತೆ: ಯಾವುದಕ್ಕೂ ದಾಖಲೆಗಳಿಲ್ಲ!

ಈ ಸಂಬಂಧ 24 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!