ಒಂದೊಳ್ಳೆ ರಸ್ತೆ ಮಾಡದಿದ್ರೆ ಮತದಾನ ಮಾಡಿ ಏನು ಪ್ರಯೋಜನ? ಚುನಾವಣೆ‌‌ ಬಹಿಷ್ಕಾರಕ್ಕೆ ಯಲುವಗುಳಿ ಗ್ರಾಮಸ್ಥರು!

Published : Apr 08, 2024, 07:52 PM IST
ಒಂದೊಳ್ಳೆ ರಸ್ತೆ ಮಾಡದಿದ್ರೆ ಮತದಾನ ಮಾಡಿ ಏನು ಪ್ರಯೋಜನ? ಚುನಾವಣೆ‌‌ ಬಹಿಷ್ಕಾರಕ್ಕೆ ಯಲುವಗುಳಿ ಗ್ರಾಮಸ್ಥರು!

ಸಾರಾಂಶ

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಯಲುವಗುಳಿ ಗ್ರಾಮದಲ್ಲಿ ಗ್ರಾಮಸ್ಥರು ಮೂಲಭೂತ‌ ಸೌಕರ್ಯಗಳನ್ನು ಮುಂದಿಟ್ಟುಕೊಂಡು‌ ಈ ಬಾರಿಯ ಲೋಕಸಬಾ ಚುನಾವಣೆ ಬಹಿಷ್ಕಾರಿಸಲು ಮುಂದಾಗಿದ್ದಾರೆ. 

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್,ಕೋಲಾರ.!

ಕೋಲಾರ (ಏ.8) : ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಯಲುವಗುಳಿ ಗ್ರಾಮದಲ್ಲಿ ಗ್ರಾಮಸ್ಥರು ಮೂಲಭೂತ‌ ಸೌಕರ್ಯಗಳನ್ನು ಮುಂದಿಟ್ಟುಕೊಂಡು‌ ಈ ಬಾರಿಯ ಲೋಕಸಬಾ ಚುನಾವಣೆ ಬಹಿಷ್ಕಾರಿಸಲು ಮುಂದಾಗಿದ್ದಾರೆ. 

ಗ್ರಾಮದಲ್ಲಿ ಕಳಪೆ ರಸ್ತೆ ಕಾಮಗಾರಿಯನ್ನು ಮಾಡಲಾಗಿದೆ, ಕಾಮಗಾರಿಗೆ ಕೋಟ್ಯಂತರ ರೂಪಾಯಿಗಳನ್ನು ಸರ್ಕಾರ ನೀಡಿದ್ದು, ಗುತ್ತಿಗೆದಾರರು ಕಳಪೆ ರಸ್ತೆ ನಿರ್ಮಾಣ ಮಾಡಿದ್ದಾರೆ. ಇದರ ಜೊತೆಗೆ ಟೇಕಲ್ - ಯಲುವಗುಳಿ ಕಾಮಗಾರಿ ವಿಳಂಬ ವಾಗುತ್ತಿರುವುದರಿಂದ ಈ ಭಾಗದಲ್ಲಿ ‌ಜನ್ರು ಪ್ರತಿದಿನ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ರಸ್ತೆ ಮಾಲೂರಿಗೆ ಪರ್ಯಾಯ ರಸ್ತೆಯಾಗಿರುವದರಿಂದ ಕಾಮಗಾರಿಯನ್ನು ಶೀಘ್ರ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಜಿಲ್ಲಾಡಳಿತ, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಈ ಬಗ್ಗೆ ಗಮನ‌ ಹರಿಸುತ್ತಿಲ್ಲ,ಇನ್ನು ಗುತ್ತಿಗೆದಾರರು ರಸ್ತೆ ಕಾಮಗಾರಿಯಲ್ಲೂ ಅಕ್ರಮವೆಸಗಿದ್ದಾರೆ. ರಸ್ತೆ ನಿರ್ಮಾಣಕ್ಕೆ ಬಂದ ಸರ್ಕಾರದ ಕೋಟ್ಯಂತರ ರೂಪಾಯಿ ಅನುದಾನದಿಂದ ಕಳಪೆ ರಸ್ತೆ ನಿರ್ಮಾಣ ಮಾಡಿ ಹಣ ಲೂಟಿ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದು, ಈ ಬಾರಿ ಲೋಕಸಭಾ ಚುನಾವಣೆಗೆ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಾಣಿಜ್ಯ ತೆರಿಗೆ ಅಧಿಕಾರಿಗಳ ಭರ್ಜರಿ ದಾಳಿ: ಮತದಾರರಿಗೆ ಹಂಚಲು ಅಕ್ರಮವಾಗಿ ಸಾಗಿಸುತ್ತಿದ್ದ 40,000 ಸೀರೆಗಳು ಜಪ್ತಿ!

ಇನ್ನು ಕೆ.ಜೆ ಹಳ್ಳಿ ಗ್ರಾ.ಪಂ ವ್ಯಾಪ್ತಿಯ ಯಲುವಗುಳಿ ಗ್ರಾಮದಲ್ಲಿ 900 ಮತದಾರರಿದ್ದು, ಜನಪ್ರತಿನಿಧಿಗಳು ಗ್ರಾಮವನ್ನು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಈ ಬಾರಿಯ ಲೋಕಸಭಾ‌ ಚುನಾವಣೆಲ್ಲಿ ಯಾವುದೇ ಕಾರಣಕ್ಕೂ ಮತದಾನ ಮಾಡುವುದಿಲ್ಲ, ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೆ ಜನ್ರು ತೊಂದರೆಯನ್ನು ಅನುಭವಿಸುತ್ತಿದ್ದು,ಇದರ ಬಗ್ಗೆ ಗಮನ ಹರಿಸಬೇಕಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮೌನ ವಹಿಸಿದ್ದು,ಈ‌ ಬಾರಿಯ ಲೋಕಸಭಾ ಚುನಾವಣೆಯನ್ನು ಪಕ್ಷತೀತಾವಾಗಿ ಗ್ರಾಮಸ್ಥರೆಲ್ಲ ಸೇರಿ ಬಹಿಷ್ಕಾರ ಮಾಡಲು ನಿರ್ಧಾರಿಸಲಾಗಿದ್ದು, ಅಧಿಕಾರಿಗಳು‌ ಕೂಡಲೇ ಗಮನ ಹರಿಸಿ ಗ್ರಾಮಸ್ಥರ ಸಮಸ್ಯೆಯನ್ನು ಬಗೆಹರಿಸಿದಿದ್ದರೆ ಮತದಾನ ಕೇಂದ್ರಕ್ಕೆ‌ ಈ ಬಾರಿ ಜನ್ರು ಹೋಗುವುದಿಲ್ಲವೆಂದು ತಿಳಿಸಿದರು.

ವಿಧಾನಸಭಾ ಚುನಾವಣೆ ಬಹಿಷ್ಕರಿಸಿದ್ದ ಈ ಗ್ರಾಮಸ್ಥರಿಂದ ಲೋಕಸಭಾ ಚುನಾವಣೆಗೂ ಬಹಿಷ್ಕಾರ!

ಒಟ್ಟಾರೆ ಲೋಕಸಭಾ ಚುನಾವಣೆಯ ಮತದಾನದ ದಿನಾಂಕ‌ ಹತ್ತಿರವಾಗುತ್ತಿದ್ದಂತೆ,ಕೆಲ ಗ್ರಾಮಸ್ಥರು‌‌ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದು,ಕೂಡಲೇ ಅಧಿಕಾರಿಗಳು ಪ್ರಜಾತಂತ್ರದ‌‌ ಹಬ್ಬವಾಗಿರುವ ಚುನಾವಣೆಯಲ್ಲಿ ಎಲ್ಲರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ‌ ಮಾಡಬೇಕಾಗಿದೆ.

PREV
Read more Articles on
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!