ಚಾಮರಾಜನಗರ: ಮಾಡಹಳ್ಳಿ ಗುಡ್ಡದಲ್ಲಿ ಪಟ್ಟಾ ಜಮೀನು ಹೆಸರಲ್ಲಿ ಕಲ್ಲು ಗಣಿಗಾರಿಕೆ?

By Kannadaprabha NewsFirst Published Dec 16, 2023, 1:00 AM IST
Highlights

ಮಡಹಳ್ಳಿ ಸುತ್ತಮುತ್ತ ನಡೆವ ಅಕ್ರಮ ಗಣಿಗಾರಿಕೆಯಿಂದ ಜಾನುವಾರು ಮೇಯಿಸುವುದಕ್ಕೆ ತೊಂದರೆಯಾಗುತ್ತಿದೆ. ಜತೆಗೆ ಕ್ವಾರಿ ನಡೆಸುವವರು ಗಲಾಟೆ ಮಾಡಿ ಹಲ್ಲೆಗೆ ಬರುತ್ತಾರೆ. ಸಂಜೆ ವೇಳೆ ಸ್ಫೋಟಿಸುವುದನ್ನು ಅಕ್ಕಪಕ್ಕದ ಜಮೀನಿನ ರೈತರಿಗೆ ತಿಳಿಸುತ್ತಿಲ್ಲ ಎಂಬ ದೂರು 

ಗುಂಡ್ಲುಪೇಟೆ(ಡಿ.16):  ತಾಲೂಕಿನ ಮಡಹಳ್ಳಿ ಪಟ್ಟಾ ಜಮೀನು ಸ.ನಂ.೩೬೭ ರ ಬದಲಿಗೆ ಸರ್ಕಾರಿ ಸ.ನಂ.೧೯೨ ರ ನಿರ್ಬಂಧಿತ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಅಲ್ಲದೆ ಗಣಿಗಾರಿಕೆಯಿಂದ ಜಾನುವಾರು ಮೇಯಿಸಲು ಹಾಗೂ ಸ್ಪೋಟಕ ಬಳಕೆ ಮಾಡುವಾಗ ರೈತರಿಗೆ ತಿಳಿಸುತ್ತಿಲ್ಲ ಎಂದು ಮಡಹಳ್ಳಿ ಗ್ರಾಮಸ್ಥರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ಮಡಹಳ್ಳಿ ಸರ್ಕಾರಿ ಸ.ನಂ.೧೯೨ ರಲ್ಲಿ ನಡೆಯುತ್ತಿದ್ದಾಗ ಕ್ವಾರಿಯಲ್ಲಿದ್ದ ಗುಡ್ಡ ಕುಸಿದು ಮೂವರು ಕಾರ್ಮಿಕರು ಕಳೆದ ಮಾ.೪ ರಂದು ಸಾವನ್ನಪ್ಪಿದ್ದ ಕಾರಣ ಸ.ನಂ.೧೯೨ ರಲ್ಲಿ ಗಣಿಗಾರಿಕೆ ನಿಷೇಧಗೊಂಡಿತ್ತು.

ಸರ್ಕಾರಿ ಸ.ನಂ.೧೯೨ ಅಥವಾ ಪಟ್ಟಾ ಜಮೀನು ಸ.ನಂ.೩೬೭ ರಲ್ಲಿ ಗಣಿಗಾರಿಕೆ ನಡೆಯುತ್ತಿದೆಯೇ ಎಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮಡಹಳ್ಳಿ ಗ್ರಾಮದ ಅಭಿ ಸೇರಿದಂತೆ ಹಲವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮನವರಿಕೆ ಮಾಡಿ ಕೊಟ್ಟಿದ್ದಾರೆ.

Latest Videos

ಚಾಮರಾಜನಗರ: ರೈತ ಸಂಪರ್ಕ ಕೇಂದ್ರದಲ್ಲಿ ಟಾರ್ಪಾಲ್ ಗೋಲ್‌ಮಾಲ್, ರೈತರಿಂದ ಹೆಚ್ಚುವರಿ ಹಣ ಪಡೆದು ವಂಚನೆ

ಸರ್ಕಾರಿ ಸ.ನಂ.೧೯೨ ರಲ್ಲಿ ಗಣಿಗಾರಿಕೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಸ.ನಂ.೧೯೨ ಹಾಗು ಸ.ನಂ.೩೬೭ ರಲ್ಲಿ ಎಷ್ಟು ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಡಹಳ್ಳಿ ಸುತ್ತಮುತ್ತ ನಡೆವ ಅಕ್ರಮ ಗಣಿಗಾರಿಕೆಯಿಂದ ಜಾನುವಾರು ಮೇಯಿಸುವುದಕ್ಕೆ ತೊಂದರೆಯಾಗುತ್ತಿದೆ. ಜತೆಗೆ ಕ್ವಾರಿ ನಡೆಸುವವರು ಗಲಾಟೆ ಮಾಡಿ ಹಲ್ಲೆಗೆ ಬರುತ್ತಾರೆ. ಸಂಜೆ ವೇಳೆ ಸ್ಫೋಟಿಸುವುದನ್ನು ಅಕ್ಕಪಕ್ಕದ ಜಮೀನಿನ ರೈತರಿಗೆ ತಿಳಿಸುತ್ತಿಲ್ಲ ಎಂದು ದೂರಿದ್ದಾರೆ.

ಕ್ವಾರಿ ನಡೆಸುವವರು ಇಷ್ಟ ಬಂದಂತೆ ಬ್ಲಾಸ್ಟಿಂಗ್‌ ಮಾಡುತ್ತಾರೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಸ.ನಂ.೧೯೨ ರಲ್ಲಿ ಗಣಿಗಾರಿಕೆ ಮಾಡಿರುವ ಜಾಗ ಎಷ್ಟು ಪ್ರಶ್ನಿಸಿದ್ದಾರೆ.

click me!