Bhatkal: ಕಳ್ಳತನ ಮಾಡಿದ ದನದ ಮಾಂಸವನ್ನು ಇಸ್ಲಾಂನಲ್ಲಿ ಸೇವಿಸೋದಿಲ್ಲ: ತಂಜೀಮ್‌ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ

Published : Jan 30, 2025, 08:31 PM IST
Bhatkal: ಕಳ್ಳತನ ಮಾಡಿದ ದನದ ಮಾಂಸವನ್ನು ಇಸ್ಲಾಂನಲ್ಲಿ ಸೇವಿಸೋದಿಲ್ಲ: ತಂಜೀಮ್‌ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ

ಸಾರಾಂಶ

ಭಟ್ಕಳದಲ್ಲಿ ಗರ್ಭಿಣಿ ಹಸುವಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಂಜೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ಹೆಸರಿನ ಜೊತೆ ಭಟ್ಕಳದ ಹೆಸರು ಬಳಸದಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ ಮತ್ತು ದನ ಕಳ್ಳತನ ಪ್ರಕರಣದಲ್ಲಿ ಯಾರೇ ಇದ್ದರೂ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಭಟ್ಕಳ (ಜ.30): ಗರ್ಭ ಧರಿಸಿದ್ದ ಹಸು ತಲೆ ಕಡಿದು ಮಾಂಸ ಕದ್ದೊಯ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಭಟ್ಕಳದ ತಂಜೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಕಳ್ಳತನ ಮಾಡಿದ ಮಾಂಸವನ್ನು ನಮ್ಮ ಧರ್ಮದಲ್ಲಿ ಸೇವಿಸುವಂತಿಲ್ಲ. ದನ ಕಳ್ಳತನ ಪ್ರಕರಣ ಜಾಸ್ತಿ ಆಗುತ್ತಿದೆ ಅಂತ ಮಾಧ್ಯಮಗಳಲ್ಲಿ ನೋಡಿದ್ದೇವೆ. ಆಗ ಒಂದು ತಿಂಗಳ ಕಾಲ ಭಟ್ಕಳದಲ್ಲಿ ಮಾಂಸದ ಅಂಗಡಿ ಕ್ಲೋಸ್ ಮಾಡಿದ್ದೇವೆ. ಗರ್ಭ ಧರಿಸಿದ್ದ ಹಸು ತಲೆ ಕಡಿದದ್ದನ್ನು ನಾವು ಖಂಡಿಸುತ್ತೇವೆ. ಹಸು ತಲೆ ಕಡಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಭಟ್ಕಳದ ಹೆಸರು ಹಾಕಬೇಡಿ: ಈ ಪ್ರಕರಣದಲ್ಲಿ ಆರೋಪಿಗಳ ಹೆಸರಿನ ಹಿಂದೆ ಭಟ್ಕಳ ಅಂತಾ ಇದೆ. ಆರೋಪಿಗಳ ಹೆಸರಿನ ಜೊತೆ ಭಟ್ಕಳದ ಹೆಸರು ಹಾಳಾಗುತ್ತಿದೆ. ಭಟ್ಕಳ ಮುಸ್ಲಿಮರು ದನ ಕಳ್ಳತನವನ್ನು ಯಾವುದೇ ಕಾರಣಕ್ಕೂ ಸಹಿಸೋದಿಲ್ಲ. ದನ ಕಳ್ಳತನ ಆರೋಪಿಗಳ ಜತೆ ದಯವಿಟ್ಟು ಭಟ್ಕಳ ಹೆಸರು ಹೈಲೈಟ್ ಮಾಡಬೇಡಿ. ದನ ಕಳ್ಳರು ಯಾರೇ ಆಗಿದ್ದರೂ ಅವರನ್ನು ಬಂಧಿಸುವುದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ. ಈ ಪ್ರಕರಣದಲ್ಲಿ ಯಾವುದೇ ಧರ್ಮದವರು ಇದ್ದರೂ ಬಂಧಿಸಬೇಕು. ದನ ಕಳ್ಳತನ ಪ್ರಕರಣ ನಮ್ಮ ಜಿಲ್ಲೆಯಲ್ಲಿ ಇದೇ ಮೊದಲಲ್ಲ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೂ ದನ ಕಳ್ಳತನ ಆಗಿದೆ. ಬಿಜೆಪಿ ಶಾಸಕ ದಿನಕರ ಶೆಟ್ಟಿ ಸಿಎಂ, ಮತ್ತು ಗೃಹ ಸಚಿವರ ಬಗ್ಗೆ ಲಘುವಾಗಿ ಹೇಳಿಕೆ ಕೊಡುತ್ತಿದ್ದಾರೆ. ದಿನಕರ ಶೆಟ್ಟಿಯವರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದ್ದಾರೆ.

ಗರ್ಭ ಧರಿಸಿದ್ದ ದನದ ತಲೆ, ಕಾಲು ಕಡಿದ ಪ್ರಕರಣ; ಆರೋಪಿ ಫೈಜಿಲ್‌ ಕಾಲಿಗೆ ಪೊಲೀಸ್‌ ಗುಂಡೇಟು!

ಆರೋಪಿಗಳ ಕಾಲಿಗೆ ಪೊಲೀಸರಿಂದ ಗುಂಡಿನ ದಾಳಿ ವಿಚಾರದ ಬಗ್ಗೆ ಮಾತನಾಡಿದ ಅವರು, ಇದರಲ್ಲಿ ಆರೋಪಿ ಮತ್ತು ಪೊಲೀಸರದ್ದು ಇಬ್ಬರದ್ದೂ ತಪ್ಪಿದೆ. ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಬಾರದಾಗಿತ್ತು. ಆರೋಪಿಗಳು ತಪ್ಪು ಮಾಡಿದಕ್ಕೆ ಅನಿವಾರ್ಯವಾಗಿ ಪೊಲೀಸರು ಗುಂಡು ಹಾರಿಸಬೇಕಾಯಿತು ಎಂದಿದ್ದಾರೆ.

ಗರ್ಭಿಣಿ ಹಸುವಿನ ತಲೆ, ಕಾಲು ಕಡಿದ ಕೇಸ್‌; ಸಿದ್ದರಾಮಯ್ಯ, ಜಿ.ಪರಮೇಶ್ವರ್‌ ಮಾನಸಿಕತೆ ಚೆಕ್‌ ಮಾಡಿಕೊಳ್ಳಲಿ: ಶಾಸಕನ ಆಕ್ರೋಶ!

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ