ಗರ್ಭ ಧರಿಸಿದ್ದ ದನದ ತಲೆ, ಕಾಲು ಕಡಿದ ಪ್ರಕರಣ; ಆರೋಪಿ ಫೈಜಿಲ್ ಕಾಲಿಗೆ ಪೊಲೀಸ್ ಗುಂಡೇಟು!
ಹೊನ್ನಾವರದಲ್ಲಿ ಗರ್ಭಿಣಿ ಹಸುವಿನ ಹತ್ಯೆ ಪ್ರಕರಣದಲ್ಲಿ ಪೊಲೀಸರು ಆರೋಪಿ ಫೈಝಿಲ್‌ನನ್ನು ಬಂಧಿಸುವ ವೇಳೆ ಆತನ ಕಾಲಿಗೆ ಗುಂಡೇಟು ಹಾಕಿದ್ದಾರೆ. ಹಸುವಿನ ಕಾಲು, ತಲೆ ಕಡಿದು, ಕರುವನ್ನು ಎಸೆದು ಮಾಂಸವನ್ನು ಮದುವೆಗೆ ಪೂರೈಸಲಾಗಿತ್ತು.

ಹೊನ್ನಾವರ (ಜ.25): ಉತ್ತರ ಕನ್ನಡದ ಹೊನ್ನಾವರದಲ್ಲಿ ಗರ್ಭ ಧರಿಸಿದ್ದ ದನದ ಕಾಲು, ತಲೆ ಕಡಿದು ಅದರ ಹೊಟ್ಟೆಯಲ್ಲಿದ್ದ ಕರುವನ್ನು ಎಸೆದು ದೇಹದ ಮಾಂಸ ಮಾತ್ರವೇ ಕದ್ದೊಯ್ದಿದ್ದ ದಾರುಣ ಪ್ರಕರಣದಲ್ಲಿ ಪೊಲೀಸರು ದೊಡ್ಡ ಯಶಸ್ಸು ಸಂಪಾದಿಸಿದ್ದಾರೆ. ಅತ್ಯಂತ ವಿಕೃತವಾಗಿ ಗೋಹತ್ಯೆ ಮಾಡಿದ್ದ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ಹಾಕಿದ್ದಾರ. ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಫೈಝಿಲ್ ಕಾಲಿಗೆ ಗುಂಡೇಟು ಬಿದ್ದಿದೆ. ಹೊನ್ನಾವರದ ಕಾಸರಕೋಡಿನ ಸಮೀಪದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಆರೋಪಿಯನ್ನು ಹೊನ್ನಾವರದ ಸರಕಾರಿ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಸಾಲ್ಕೋಡುವಿನ ಕೊಂಡಕುಳಿ ಗ್ರಾಮದಲ್ಲಿ ಗರ್ಭಧರಿಸಿದ್ದ ಹಸುವನ್ನು ಆರೋಪಿಗಳು ಅತ್ಯಂತ ದಾರುಣವಾಗಿ ಹತ್ಯೆ ಮಾಡಿದ್ದರು. ಹಸುವನ್ನು ಹತ್ಯೆ ಮಾಡಿದ ಬಳಿಕ ಮಾಂಸವನ್ನು ಮದುವೆ ಕಾರ್ಯಕ್ರಮಕ್ಕೆ ದುರ್ಷರ್ಮಿಗಳು ಪೂರೈಸಿದ್ದರು. ಪ್ರಕರಣ ಸಂಬಂಧಿಸಿ ನಿನ್ನೆ ಆರೋಪಿ ಹೊನ್ನಾವರ ವಲ್ಕಿಯ 41 ವರ್ಷದ ತೌಫೀಕ್‌ನನ್ನು ಪೊಲೀಸರು ಬಂಧಿಸಿದ್ದರು. ಇಂದು ಇನ್ನೋರ್ವ ಆರೋಪಿ ಫೈಝಿಲ್ ಬಂಧನದ ವೇಳೆ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಈ ವೇಳೆ ಆತನ ಕಾಲಿಗೆ ಗುಂಡು ಹಾಕಲಾಗಿದೆ.
ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದ್ದರಿಂದ ಪೊಲೀಸರಿಂದ ಭಾರೀ ತನಿಖೆ ನಡೆದಿತ್ತು. ಗೃಹ ಸಚಿವರು, ಐಜಿ, ಐಜಿಪಿ ಉತ್ತರಕನ್ನಡ ಜಿಲ್ಲಾ ಎಸ್ಪಿ ಎಂ. ನಾರಾಯಣ್‌ಗೆ ಸರ್ಕಾರ ಸ್ಪಷ್ಟ ಸೂಚನೆಯನ್ನೂ ನೀಡಿತ್ತು. ಇದರಿಂದಾಗಿ ಪೊಲೀಸರು ದೊಡ್ಡ ಮಟ್ಟದಲ್ಲಿ ಹೊನ್ನಾವರದ ಕಾಡಿನಲ್ಲಿ ಕೂಂಬಿಂಗ್ ನಡೆಸಿದ್ದರಿಂದ ಕೆಲುವು ಕುರುಹು ಪತ್ತೆಯಾಗಿತ್ತು.
ಗರ್ಭ ಧರಿಸಿದ್ದ ಹಸುವಿನ ಮಾಂಸ ಮದುವೆ ಮನೆಗೆ ಪೂರೈಕೆಯಾಗಿದ್ದು ಈ ವೇಳೆ ಗೊತ್ತಾಗಿತ್ತು. ಮದುವೆಗೆ ಮಾಂಸ ಸಪ್ಲೈ ಮಾಡಿದವರ ಮೂಲಕವೇ ಆರೋಪಿಗಳ ಮಾಹಿತಿಯನ್ನು ಪಡೆದುಕೊಳ್ಳಲಾಗಿತ್ತು. ಭಟ್ಕಳ, ಉಡುಪಿ ಮೂಲದ ಆರೋಪಿಗಳು ದುಷ್ಕೃತ್ಯ ಎಸಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿತ್ತು. ಈ ಬಗ್ಗೆ ಮಾತನಾಡಿದ್ದ ಉತ್ತರ ಕನ್ನಡ ಎಸ್‌ಪಿ,' 5 ವರ್ಷದಲ್ಲಿ 866 ಗೋವುಗಳನ್ನು ರಕ್ಷಣೆ ಮಾಡಿದ್ದು, 425 ಆರೋಪಿಗಳನ್ನು ಬಂಧಿಸಲಾಗಿದೆ. 43 ಪ್ರಕರಣಗಳನ್ನು ದಾಖಲಿಸಿ, ಗೋವುಗಳ ರಕ್ಷಣೆ ಮಾಡಿದ್ದೇವೆ' ಎಂದಿದ್ದರು.
ಶುಕ್ರವಾರ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ಜನರನ್ನು ಪೊಲೀಸರು ಬಂದಿದ್ದರು. ಆರೋಪಿಗಳನ್ನು ಹೊನ್ನಾವರ ತಾಲ್ಲೂಕು ಹೆರಂಗಡಿ ಗ್ರಾಮದ ಅಪ್ಖಾರ್ ಕಾಲೋನಿ ನಿವಾಸಿ, ವೃತ್ತಿಯಲ್ಲಿ ಚಾಲಕನಾದ ಅಲ್ತಾಫ್ ಕಟಪುರುಸು, ಹೊನ್ನಾವರ ತಾಲ್ಲೂಕು ಹೆರಂಗಡಿ ಗ್ರಾಮದ ಅಪ್ಖಾರ್ ಕಾಲೋನಿ ನಿವಾಸಿ ಕೂಲಿ ಕೆಲಸ ಮಾಡುತ್ತಿದ್ದ ಮಥಿನ್ ಕಟಪುರುಸು, ಹೊನ್ನಾವರ ತಾಲ್ಲೂಕು ಹೆರಂಗಡಿ ಖುರ್ವಾ ಗ್ರಾಮದ ಅಡುಗೆಯವ ಮೊಹಮ್ಮದ್ ಹುಸೇನ್ ಖುರ್ವೆ ಎಂದು ಗುರುತಿಸಲಾಗಿದೆ. ಹೊನ್ನಾವರ ಪೊಲೀಸರು ಇವರ ಮೇಲೆ ದನ ಕಳ್ಳತನದ ಆರೋಪದ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಗರ್ಭ ಧರಿಸಿದ ಹಸುವನ್ನು ಕಡಿದ ದುರುಳರು; ಕರು, ಕತ್ತು, ಕಾಲು ಬಿಟ್ಟು ದೇಹ ಕದ್ದರು!