ತಾಲೂಕಿನ ಗಂಗಾ ಕ್ಷೇತ್ರವಾಗಿರುವ ಮಲ್ಲಾಘಟ್ಟವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ಕಾನೂನು ಸಚಿವರಾದ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ತುರುವೇಕೆರೆ (ನ.09): ತಾಲೂಕಿನ ಗಂಗಾ ಕ್ಷೇತ್ರವಾಗಿರುವ ಮಲ್ಲಾಘಟ್ಟವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ಕಾನೂನು ಸಚಿವರಾದ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ತಾಲೂಕಿನ ಆನೇಕೆರೆ ಗಂಗಾಧರೇಶ್ವರ ಸ್ವಾಮಿ ದ (Temple) ನೂತನ ಕಳಸ ಪ್ರತಿಷ್ಠಾಪನೆ ಹಾಗೂ ಸಮುದಾಯ ಭವನದ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಜಿಲ್ಲೆಯ ಅತಿದೊಡ್ಡ ಕೆರೆಯಾಗಿರುವ ಮಲ್ಲಾಘಟ್ಟಕೆರೆಯ (Lake) ಬಳಿವ್ಯವಸ್ಥೆ ಮಾಡಲು ಮಲ್ಲಾಘಟ್ಟಕೆರೆಯ ಆಳ, ಪ್ರವಾಸಿಗರ ಸುರಕ್ಷತೆ ಸೇರಿದಂತೆ ಇನ್ನಿತರ ಅಂಶಗಳನ್ನು ಕಲೆ ಹಾಕಿ ಪರಿಣಿತರಿಂದ ಸಲಹೆ ಪಡೆಯಲಾಗುವುದು. ಪ್ರವಾಸಿಗರು ತಂಗಲು ವಿಶ್ರಾಂತಿ ಗೃಹ ಸೇರಿದಂತೆ ಸಕಲ ವ್ಯವಸ್ಥೆಗಳನ್ನು ಮಾಡುವ ಚಿಂತನೆ ಇದೆ ಎಂದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಪ್ರಸಕ್ತ ಸಾಲಿನ ಆರಂಭದಲ್ಲಿ ಕ್ವಿಂಟಾಲ್ ಕೊಬ್ಬರಿಗೆ 18 ಸಾವಿರವಿತ್ತು, ಇದೀಗ 12 ಸಾವಿರಕ್ಕೆ ಕುಸಿದಿರುವುದು ತೆಂಗು ಬೆಳೆಗಾರರು ಆತಂಕಪಡುವಂತಾಗಿದೆ. ನಬಾರ್ಡ್ ಯೋಜನೆಯಲ್ಲಿ ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 15 ಸಾವಿರ ನಿಗದಿಪಡಿಸಲು ಉಭಯ ಸರ್ಕಾರಗಳು ಮುಂದಾಗಬೇಕು. ಗುಟ್ಕಾ ಲಾಬಿಗೆ ಮಣಿದ ಸರ್ಕಾರ ಭೂತಾನ್‌ನಿಂದ ಅಡಕೆ ಆಮದು ಮಾಡಿಕೊಳ್ಳುವ ಕ್ರಮ ಸರಿಯಲ್ಲ, ನಾಡಿನ ಅಡಕೆ ಬೆಳಗಾರರ ಹಿತ ಕಾಯುವ ನಿಟ್ಟಿನಲ್ಲಿ ಸರ್ಕಾರಗಳು ಚಿಂತಿಸಬೇಕಿದೆ ಎಂದರು.
ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮೀಜಿ ಆಶೀರ್ವಚನ ನೀಡಿ, ದೇವರ ಮೇಲೆ ಇಟ್ಟಿರುವ ಭಕ್ತಿ ನಂಬಿಕೆ, ಶ್ರದ್ಧೆಯನ್ನು ಮನುಷ್ಯನು ತನ್ನ ಜೀವನದಲ್ಲಿ ಶಾಶ್ವತವಾಗಿ ಇಟ್ಟುಕೊಳ್ಳಬೇಕು. ಸಂತೋಷವನ್ನು ಉಂಟು ಮಾಡುವ ಕಾರ್ಯವೇ ದೇವರ ಪೂಜೆ, ತಮ್ಮ ಆತ್ಮದ ಒಳಗಡೆ ಎಲ್ಲರೂ ದೇವರನ್ನು ಕಾಣಬಹುದಾಗಿದೆ ಎಂಬ ಭಾವನೆಯಲ್ಲಿ ದೇವರನ್ನು ನೋಡುತ್ತಿದ್ದೇವೆ. ಭಗವಂತನ ದಯೆಯಿಂದ ಈ ಬಾರಿ ಉತ್ತಮ ಮಳೆಯಾಗಿದೆ. ಮಲ್ಲಾಘಟ್ಟಕೆರೆ ಉತ್ತಮ ಪರಿಸರ ಹೊಂದಿದ್ದು ಗಂಗಾಧರೇಶ್ವರ ದೇವಾಲಯದಿಂದ ಪುಣ್ಯ ಕ್ಷೇತ್ರವಾಗಿದೆ ಎಂದರು.
ಗೋಪುರ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜ್, ತುಮುಲ್ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟಚಂದ್ರೇಶ್, ಗ್ರಾಪಂ ಅಧ್ಯಕ್ಷ ರಾಮಕೃಷ್ಣ, ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಕುಮಾರಸ್ವಾಮಿ, ತಿಪಟೂರಿನ ಡಾ.ಶ್ರೀಧರ್, ಗುಡ್ಡೇನಹಳ್ಳಿಯ ಮಂಜುನಾಥ್, ದೇಗುಲ ಸಮಿತಿಯ ಮುಖಂಡ ಲೋಕಮ್ಮನಹಳ್ಳಿ ಕಾಂತರಾಜ್, ಆನೇಕೆರೆ ರಾಜಶೇಖರ್ ಸೇರಿದಂತೆ ಅನೇಕರು ಇದ್ದರು.
ಮಲ್ಲಾಘಟ್ಟ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 5 ಕೋಟಿ ರು.ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆನೇಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು 5 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ತಾಲೂಕಿನಾದ್ಯಂತ ಕೆರೆಕಟ್ಟೆಗಳು ತುಂಬಿ ಹರಿಯುತ್ತಿದ್ದು ರೈತರು ಭತ್ತ ಬೆಳೆಯುವತ್ತ ಚಿತ್ತ ಹರಿಸಿ ಸ್ವಾವಲಂಬಿಗಳಾಗಿ.
ಮಸಾಲ ಜಯರಾಮ್ ಶಾಸಕ
ಪ್ರವಾಸಿ ತಾಣ ಪ್ರಚಾರಕ್ಕೆ ಬ್ಲಾಗರ್ಸ್ ಮೀಟ್
ಉಡುಪಿ : ಉಡುಪಿ ಜಿಲ್ಲೆ ಪ್ರವಾಸಿ ತಾಣಗಳಿಗೆ ಪ್ರಸಿದ್ದಿ, ಇಲ್ಲಿನ ಬೀಚ್ ಗಳು ಮತ್ತು ದೇವಾಲಯಗಳಿಗೆ ರಾಜ್ಯಾದ್ಯಂತ ಮತ್ತು ದೇಶದ ವಿವಿಧ ಭಾಗಗಳಿಗೆ ಪ್ರವಾಸಿಗರು ಅಗಮಿಸುತ್ತಿದ್ದಾರೆ, ಇಲ್ಲಿನ ಎಲ್ಲಾ ಪ್ರವಾಸಿ ತಾಣಗಳ ಬಗ್ಗೆ ದೇಶ ಮತ್ತು ವಿದೇಶಗಳ ಕೋಟ್ಯಾಂತರ ಜನರನ್ನು ತಲುಪಲು ಈ ಬಾರಿಯ ಪ್ರವಾಸೋದ್ಯಮ ದಿನಾಚಾರಣೆ ಸಂದರ್ಭದಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಬ್ಲಾಗರ್ಸ್ ಮೀಟ್ ಆಯೋಜಿಸುವ ಮೂಲಕ ವಿಶಿಷ್ಠ ಕಾರ್ಯಕ್ರಮ ರೂಪಿಸಲಾಗಿದೆ. ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಭರಾಟೆ ತೀವ್ರವಾಗಿದೆ, ಕ್ಷಣ ಮಾತ್ರದಲ್ಲಿ ಮಾಹಿತಿಗಳನ್ನು ತಲುಪಿಸುವಲ್ಲಿ ಇವುಗಳ ಪಾತ್ರ ಪ್ರಮುಖವಾಗಿದೆ, ಇವುಗಳನ್ನು ಜಿಲ್ಲೆಯ ಪ್ರವಾಸಿ ತಾಣಗಳ ಪ್ರಚಾರಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ , ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರಸಿದ್ದ ಪ್ರವಾಸಿ ಬ್ಲಾಗರ್ ಗಳನ್ನು ಜಿಲ್ಲೆಗೆ ಆಹ್ವಾನಿಸಿ, ಅವರಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಡಲಾಗುತ್ತಿದೆ. ಈ ಬ್ಲಾಗರ್ ಮೀಟ್ ಕಾರ್ಯಕ್ರಮಕ್ಕೆ, ಗೋವಾದಿಂದ 4, ಹೈದ್ರಾಬಾದ್ ನಿಂದ 1, ಜಾರ್ಖಂಡ್ ನಿಂದ 1, ಬೆಂಗಳೂರಿನಿಂದ 3, ಮಂಗಳೂರು 3 ಮತ್ತು ಮಥುರಾದಿಂದ 1 ಬ್ಲಾಗರ್ ಗಳು ಆಗಮಿಸಿದ್ದಾರೆ. ಈ ಎಲ್ಲಾ ಬ್ಲಾಗರ್ ಗಳು ತಮ್ಮ ಬ್ಲಾಗ್ ಗಳಲ್ಲಿ ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ವಿಶ್ವದಾದ್ಯಂತ ಪ್ರಚುರಪಡಿಸಲಿದ್ದಾರೆ.
ಈ ಎಲ್ಲಾ ಬ್ಲಾಗರ್ ಗಳು ಒಟ್ಟು 8 ಲಕ್ಷಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದು, ಇದುವರೆಗೆ ತಾವು ಬರೆದ ಲೇಖನಗಳಿಗೆ 3 ಕೋಟಿಗೂ ಅಧಿಕ ವ್ಯೂಸ್ ಗಳ ದಾಖಲೆ ಹೊಂದಿದ್ದಾರೆ, ಇವರುಗಳನ್ನು 2 ದಿನಗಳ ಕಾಲ ಜಿಲ್ಲೆಯ ಎಲ್ಲಾ ಪ್ರವಾಸಿ ಕೇಂದ್ರಗಳಿಗೆ ಪ್ರವಾಸೋದ್ಯಮ ಇಲಾಖೆಯ ಮೂಲಕ ಕರೆದೊಯ್ದು ಪ್ರವಾಸಿ ತಾಣಗಳ ವೀಕ್ಷಣೆ, ಮಾಹಿತಿ, ಅಲ್ಲಿನ ಸೌಲಭ್ಯಗಳು, ವಿಶೇಷತೆಗಳ ಕುರಿತ ಸಂಪೂರ್ಣ ಚಿತ್ರಣದ ಮಾಹಿತಿಯನ್ನು ನೀಡಲಿದ್ದು, ಈ ಬ್ಲಾಗರ್ ಗಳು ತಮ್ಮ ಬ್ಲಾಗ್ ಗಳಲ್ಲಿ ಈ ಪ್ರವಾಸಿ ತಾಣಗಳ ಬಗ್ಗೆ ವಿಶೇಷ ಲೇಖನಗಳನ್ನು ಬರೆಯಲಿದ್ದಾರೆ.
ಪೂರಕವಾಗಿ ವೀಡಿಯೋಗಳು, ಪೋಟೋಗಳನ್ನು ಎಲ್ಲಾ ರೀತಿಯ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡುವ ಮೂಲಕ ದೇಶ ಮತ್ತು ವಿದೇಶಗಳ ಕೋಟ್ಯಾಂತರ ಜನರಿಗೆ ತಿಳಿಸಲಿದ್ದಾರೆ. ಈ ಬ್ಲಾಗರ್ ಗಳಲ್ಲಿ ಆರ್.ಜೆ ಗಳು ಮತ್ತು ಯು ಟ್ಯೂಬ್ ಗಳ ಅಡ್ಮಿನ್ ಗಳೂ ಕೂಡಾ ಇದ್ದಾರೆ.