Tumakur : ಕಾಂಗ್ರೆಸ್‌ಗೆ ಸೇರಿದ ಜೆಡಿಎಸ್‌ ಮುಖಂಡರು

By Kannadaprabha News  |  First Published Nov 9, 2022, 4:45 AM IST

ತಾಲೂಕಿನ ಜೆಡಿಎಸ್‌ನ ಹಲವು ದಲಿತ ಮುಖಂಡರು ಜೆಡಿಎಸ್‌ಗೆ ಕೈ ಕೊಟ್ಟು ವಿಧಾನ ಪರಿಷತ್‌ ಮಾಜಿ ಸದಸ್ಯ ಬೆಮಲ್‌ ಕಾಂತರಾಜ್‌ ಸಮ್ಮುಖ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.


 ತುರುವೇಕೆರೆ (ನ.09):  ತಾಲೂಕಿನ ಜೆಡಿಎಸ್‌ನ ಹಲವು ದಲಿತ ಮುಖಂಡರು ಜೆಡಿಎಸ್‌ಗೆ ಕೈ ಕೊಟ್ಟು ವಿಧಾನ ಪರಿಷತ್‌ ಮಾಜಿ ಸದಸ್ಯ ಬೆಮಲ್‌ ಕಾಂತರಾಜ್‌ ಸಮ್ಮುಖ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್‌ (Congress) ಮುಖಂಡ ಬೆಮಲ್‌ ಕಾಂತರಾಜ್‌ರವರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ತಾಲೂಕು ಜೆಡಿಎಸ್‌ನ (JDS) ಎಸ್ಸಿ ಘಟಕದ ಅಧ್ಯಕ್ಷರಾಗಿದ್ದ ಮಲ್ಲೂರು ತಿಮ್ಮೇಶ್‌, ಜೆಡಿಎಸ್‌ನ ದಲಿತ ಮುಖಂಡರಾದ ದಂಡಿನಶಿವರ ಕುಮಾರ್‌, ರಾಜ್ಯ ನಾಟಕ ಅಕಾಡಮಿಯ ಪ್ರಶಸ್ತಿ ಪುರಸ್ಕೃತ ದಂಡಿನಶಿವರದ ರಂಗಕರ್ಮಿ ಈಶ್ವರ್‌ ದಳ, ನಿವೃತ್ತ ಉಪನ್ಯಾಸಕ ಶಿವಣ್ಣ, ಕಡೇಹಳ್ಳಿ ರಂಗಸ್ವಾಮಿ, ನಿವೃತ್ತ ಎಎಸ್‌ಐ ಪುಟ್ಟಯಲ್ಲಯ್ಯ, ಸೊಪ್ಪನಹಳ್ಳಿ ಜಗದೀಶ್‌, ಗ್ರಾಮ ಪಂಚಾಯಿತಿ ಸದಸ್ಯರಾದ ಗೋವಿಂದರಾಜು, ಚಿಮ್ಮನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ, ರುಕ್ಮಿಣಮ್ಮ ಸೇರಿದಂತೆ ಹಲವಾರು ದಲಿತ ಮುಖಂಡರು ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡರು.

Tap to resize

Latest Videos

ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆ ಆಗುತ್ತಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ತಾಲೂಕಿನಲ್ಲಿಯೂ ಸಹ ಪಕ್ಷದ ಸಿದ್ದಾಂತಕ್ಕೆ ಒಪ್ಪಿ ಪಕ್ಷಕ್ಕೆ ಯಾರೇ ಸೇರ್ಪಡೆಗೊಂಡರೂ ಸಹ ಅವರನ್ನು ಹೃದಯಪೂರ್ವಕವಾಗಿ ಬರಮಾಡಿಕೊಳ್ಳುವುದಾಗಿ ಬೆಮಲ್‌ ಕಾಂತರಾಜ್‌ ತಿಳಿಸಿದರು.

ಡಿಎಸ್‌ಎಸ್‌ ತಾಲೂಕು ಘಟಕದ ಅಧ್ಯಕ್ಷ ದಂಡಿನ ಶಿವಕುಮಾರ್‌ ಮಾತನಾಡಿ, ಖರ್ಗೆಯವರ ನಾಯಕತ್ವ ಹಾಗೂ ದೇಶದಲ್ಲಿ ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಳ್ಳುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನ ಕುಮಾರ, ಜಿಪಂ ಮಾಜಿ ಸದಸ್ಯ ಹನುಮಂತಯ್ಯ, ಟಿಎಪಿಸಿಎಂಎಸ್‌ ಅಧ್ಯಕ್ಷ ಗೋಣಿತುಮಕೂರು ಲಕ್ಷ್ಮೇಕಾಂತ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಚಿಮ್ಮನಹಳ್ಳಿ ಪುಟ್ಟಣ್ಣ, ಗುಡ್ಡೇನಹಳ್ಳಿ ನಂಜುಂಡಪ್ಪ ಸೇರಿದಂತೆ ಹಲವಾರು ಕಾಂಗ್ರೆಸ್‌ ಕಾರ್ಯಕರ್ತರು ಉಪಸ್ಥಿತರಿದ್ದರು.

ಒಂದು ವಿಕೆಟ್  ಪತನ

 ಪಾವಗಡ :  ಶಾಸಕ ವೆಂಕಟರಮಣಪ್ಪ, ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ಹಾಗೂ ನಗರಾಧ್ಯಕ್ಷ ಸುದೇಶ್‌ಬಾಬು ಸಮ್ಮುಖದಲ್ಲಿ ಹಿರಿಯ ಮುಖಂಡ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಬಿ.ಹೊಸಹಳ್ಳಿ ವಿ.ಚಿಂತಲರೆಡ್ಡಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ

ಗುರುವಾರ ಬೆಳಗ್ಗೆ ಕೆಲ ಬೆಂಬಲಿಗ ಕಾರ್ಯಕರ್ತರ ಜತೆ ತಾಲೂಕಿನ ಹನುಮಂತನಹಳ್ಳಿಗೆ ತೆರಳಿದ ಅವರು ಶಾಸಕ (MLA )  ವೆಂಕಟರಮಣಪ್ಪ ನಿವಾಸದಲ್ಲಿ (JDS)  ತೊರೆದು ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಯಾದರು.

ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ಮಾತನಾಡಿ, ಮುಖಂಡ ಚಿಂತಲರೆಡ್ಡಿ ನಮ್ಮ ಮನವಿಗೆ ಸ್ವಂದಿಸಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು ತಾಲೂಕಿನ ಮರಿದಾಸನಹಳ್ಳಿ ಗ್ರಾಪಂ ವ್ಯಾಪ್ತಿಯ ಸೇರಿದಂತೆ ತಾಲೂಕಿನಲ್ಲಿ ಪಕ್ಷಕ್ಕೆ ಬಲಬಂದಾಗಿದೆ. ಶಾಸಕರ ಸಹಕಾರದಿಂದ ಗ್ರಾಪಂ ಪ್ರಗತಿಗೆ ವಿಶೇಷ ಒತ್ತು ನೀಡುವ ಮೂಲಕ ಪಕ್ಷದಲ್ಲಿ ಅವರಿಗೆ ಮಹತ್ತರ ಜವಾಬ್ದಾರಿ ವಹಿಸುವುದಾಗಿ ಹೇಳಿದರು.

ಕಾಂಗ್ರೆಸ್‌ ಸೇರ್ಪಡೆಯಾದ ಮುಖಂಡ ವಿ.ಚಿಂತಲರೆಡ್ಡಿ ಮಾತನಾಡಿ, ಸ್ವಗ್ರಾಮ ಬಿ.ಹೊಸಹಳ್ಳಿ ಪ್ರಗತಿ ಹಿನ್ನಲೆಯಲ್ಲಿ ಶಾಸಕರನ್ನು ಭೇಟಿ ಮಾಡುವ ಸಲುವಾಗಿ ಆಗಮಿಸಿದ್ದು, ಈ ವೇಳೆ ಕಾರ್ಯಕರ್ತರ ಒತ್ತಡದ ಮೇರೆಗೆ ಕಾಂಗ್ರೆಸ್‌ ಸೇರ್ಪಡೆಯಾಗಿದ್ದೇನೆ. ಶಾಸಕ ವೆಂಕಟರಮಣಪ್ಪರ ಸಾಮಾಜಿಕ ನ್ಯಾಯ ಹಾಗೂ ಬದ್ದತೆ ತಾಲೂಕು ಪ್ರಗತಿ ಹಿನ್ನಲೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ನ.10ರಂದು ಈ ಭಾಗದ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರೊಂದಿಗೆ ಬೃಹತ್‌ ಮಟ್ಟದ ಕಾಂಗ್ರೆಸ್‌ ಸೇರ್ಪಡೆ ಸಮಾರಂಭ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಇದೇ ವೇಳೆ ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ, ಪುರಸಭೆ ಸದಸ್ಯರಾದ ಪಿ.ಎಚ್‌.ರಾಜೇಶ್‌ ತೆಂಗಿನಕಾಯಿ ರವಿ, ಮುಖಂಡರಾದ ಮಂಜುನಾಥರೆಡ್ಡಿ, ಬಲ್ಲೇನಹಳ್ಳಿ ಭೀಮಾರೆಡ್ಡಿ, ಎಚ್‌.ವಿ.ಕೇಶವರೆಡ್ಡಿ ಇತರೆ ಮುಖಂಡರು ಉಪಸ್ಥಿತರಿದ್ದರು.

click me!