ಅಂಬಿ ಹುಟ್ಟುಹಬ್ಬಕ್ಕೆ ರೆಡಿಯಾಗಿದ್ದ ಪ್ರತಿಮೆ ಪ್ರತಿಷ್ಠಾಪನೆ

By Web DeskFirst Published Nov 27, 2018, 4:18 PM IST
Highlights

ಮಂಡ್ಯದ ಗಂಡು, ರೆಬಲ್ ಸ್ಟಾರ್ ಅಂಬರೀಶ್ ದೈಹಿಕವಾಗಿ ದೂರವಾಗಿದ್ದಾರೆ ಎನ್ನುವುದು ಎಷ್ಟು ಸತ್ಯವೋ, ಅವರು ಅಭಿಮಾನಿಗಳ ಮನಸ್ಸಿನಿಂದ ಎಂದೂ ದೂರವಾಗುವುದಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ. ಇದಕ್ಕೆ ಸಾಕ್ಷಿ ಇಲ್ಲಿದೆ.

ಮಂಡ್ಯ,( ನ.27): ದಿವಂಗತ ಅಂಬರೀಶ್ ಎಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಜೀವಂತ ಎನ್ನುವುದಕ್ಕೆ ಉದಾಹರಣೆಯಾಗಿ ಅವರ ಒಂದು ಪ್ರತಿಮೆ ತಲೆ ಎತ್ತಿ ನಿಂತಿದೆ. ಮಂಡ್ಯ ಜಿಲ್ಲೆಯ ಅಭಿಮಾನಿಗಳು ಒಂದು ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ.

ಮುಂಬರುವ ಅಂಬರೀಶ್ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಲು ತಯಾರಿಸಿದ್ದ ಅಂಬಿ ಪ್ರತಿಮೆಯನ್ನು ಅಭಿಮಾನಿಗಳು, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಡಿ.ಹೊಸೂರು ಗ್ರಾಮದದಲ್ಲಿ ಪ್ರತಿಷ್ಠಾಪಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಅಭಿಮಾನಿಯ ಮೈತುಂಬಾ ಅಂಬಿ ಸಿನಿಮಾಗಳ ಹಚ್ಚೆ

ಅಂಬರೀಶ್ ಅವರ ಮುಂದಿನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಲು 5-6ಅಡಿ ಎತ್ತರದ ಪ್ರತಿಮೆಯನ್ನು ದೇವರ ವಿಗ್ರಹಗಳನ್ನು ತಯಾರಿಸುವ ಮರದಿಂದ ತಯಾರಿಸಲಾಗಿತ್ತು.

ಆದ್ರೆ ಅಂಬರೀಶ್ ಅವ್ರ ಅಕಾಲಿಕ ಮರಣದಿಂದಾಗಿ ಅಭಿಮಾನಿಗಳಿಗೆ ಆಘಾತ ನೀಡಿದೆ. ಪ್ರೀತಿಯಿಂದ ತಯಾರಿಸಿದ್ದ ಪ್ರತಿಮೆಯನ್ನ ಇನ್ಯಾವತ್ತು ಅಂಬ್ರೀಷಣ್ಣ ಅವ್ರಿಗೆ ನೀಡಲು ಆಗಲ್ಲ ಎಂದು ಅಭಿಮಾನಿಗಳು ಅಕ್ಷರಶಃ ನಿರಾಸೆಗೊಂಡಿದ್ದಾರೆ.

ಅಂಬಿ ಈಗಾಗಲೇ ನಮ್ಮನೆಲ್ಲ ಬಿಟ್ಟು ಹೋಗಿದ್ದಾರೆ. ಪ್ರತಿಮೆ ರೂಪದಲ್ಲಾದ್ರು ಅಂಬಿ ಅಣ್ಣ ನಮ್ಮೊಂದಿಗರಲಿ ಎಂದು ಊರಿನ ಮಧ್ಯೆ ಅಂಬಿ ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ.

ಇನ್ನೂ ಅಂಬಿ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲಾಗದ ಸುತ್ತಮುತ್ತಲಿನ ಗ್ರಾಮಸ್ಥರು ಅಂಬಿ ಪ್ರತಿಮೆ ಬಳಿ ಬಂದು ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ದೇವರ ಮಗ ಸಿನೆಮಾ‌ದಲ್ಲಿ ಅಂಬರೀಶ್ ಹಾಕಿದ್ದ ಗೆಟಪ್ ರೀತಿಯಲ್ಲೇ ಅಂಬಿ ಪ್ರತಿಮೆ ತಯಾರು ಮಾಡಲಾಗಿದ್ದು, ಪ್ರತಿಮೆ ನಿರ್ಮಾಣ ವೆಚ್ಚವನ್ನ ಅಂಬಿ ಅಭಿಮಾನಿಗಳಾದ ಉಮೇಶ್ ಹಾಗೂ ಬೆಂಗಳೂರು ಕಾರ್ಪೊರೇಟರ್ ಮೋಹನ್‌ರಾಜ್ ಭರಿಸಿದ್ದಾರೆ.

"

click me!