* ಅಗಲಿದ ತಾಯಿ ನೆನಪಲ್ಲಿ ನಿರ್ಮಾಣವಾಯ್ತು ಪಂಚಲೋಹ ಪ್ರತಿಮೆ
* ಮನೆಯಲ್ಲೇ ದೈವ ಸ್ವರೂಪಿ ತಾಯಿ ಪ್ರತಿಮೆ ಇಟ್ಟು ನಿತ್ಯ ಪೂಜೆ..
* ಗದಗನ ಲಕ್ಕಲಕಟ್ಟೆ ಗ್ರಾಮದಲ್ಲಿದೆ ತಾಯಿ ದೈವ ಆರಾಧಕ ಕುಟುಂಬ
ಗದಗ, (ಜೂನ್.16) : ತಾಯಿ ಅಂದ್ರೆ ಅದೊಂದು ಬೆಚ್ಚನೆಯ ಅನುಭವ.. ಕರುಣೆಯ ಸಾಗರ.. ಅಪರಿಮಿತ ಪ್ರೀತಿಯ ಮೂಲ ತಾಯಿ.. ಅದೆಂಥದ್ದೇ ನೋವಿದ್ರೂ ಅಮ್ಮನ ಮಡಿನಲ್ಲಿ ನೆಮ್ಮದಿ ಶಾಂತಿ ಸಿಗುತ್ತೆ.. ತಾಯಿಗೆ ಪ್ರತ್ಯಕ್ಷ ದೈವನೂ ಅಂತಾರೆ.. ಇಂಥ ದೈವ ಸ್ವರೂಪಿ ತಾಯಿಗೆ ಇಲ್ಲೊಂದು ಕುಟುಂಬ ಮೂರ್ತಿ ನಿರ್ಮಿಸಿ ನಿತ್ಯ ಪೂಜಿಸ್ತಿದೆ.. ನಿನ್ನ ನೆರಳು ಸಧಾ ಇರಲಿ ಅಂತಾ ಆಶಿಸಿದೆ.
ಯೆಸ್, ಜನನಿಯ ನೆರಳು ಸ್ವರ್ಗಕ್ಕಿಂತಲೂ ಮಿಗಿಲು ಅಂತಾ ನಂಬಿರೋ ಈ ಕುಟುಂಬ ತಾಯಿ ದೈವವನ್ನ ನಿತ್ಯ ಪೂಜೆ ಮಾಡುತ್ತೆ.. ಈ ಕುಟುಂಬ ಇರೋದು ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟೆ ಗ್ರಾಮದಲ್ಲಿ.. ಲಕ್ಕಲಕಟ್ಟಿ ಗ್ರಾಮದ ಬೆನಕನವಾರಿ ಕುಟುಂಬ ತಾಯಿಯನ್ನು ಕಳೆದುಕೊಂಡ ಬಳಿಕ ಪಂಚ ಲೋಹದ ತದ್ರೂಪಿ ಪ್ರತಿಮೆ ಸ್ಥಾಪಿಸುವ ಮೂಲಕ ತಾಯಿ ಮೇಲಿನ ಮಮಕಾರ ತೋರಿದ್ದಾರೆ.
Koppal ತಂದೆಯ ಮೂರ್ತಿ ಪ್ರತಿಷ್ಠಾಪಿಸಿದ ಮಗ, ಪ್ರತಿನಿತ್ಯ ಪೂಜೆ
ಶಿವಗಂಗಮ್ಮ ಬೆನಕವಾರಿ ವಯೋ ಸಹಜ ಕಾಯಿಲೆಯಿಂದ ಕಳೆದ ವರ್ಷ ನಿಧನರಾದ್ರು. ನಿಧನದ ನಂತರ ಶಿವಗಂಗಮ್ಮ ಅವರ ನಾಲ್ವರು ಪುತ್ರರು, ಏಳು ಪುತ್ರಿಯರಿಗೆ ಅನಾಥ ಭಾವ ಮೂಡಿತ್ತು. ಬದುಕು ಕಟ್ಟಿಕೊಟ್ಟ ತಾಯಿ ಇನ್ನಿಲ್ಲ ಅನ್ನೋ ನೋವು ಕುಟುಂಬಕ್ಕೆ ಅರಗಿಸಿಕೊಳ್ಳಲು ಆಗ್ತಿರಲಿಲ್ಲ.. ಹೀಗಾಗಿ ತಾಯಿಯ ಪ್ರತಿರೂಪವನ್ನ ಮನೆಯಲ್ಲಿರಿಸಲು ಕುಟುಂಬ ನಿರ್ಧರಿಸಿತ್ತು.. ಬಾಗಲಕೊಟೆಯಲ್ಲಿ ಪ್ರಾಧ್ಯಾಪಕರಾಗಿರು ದೇವಣ್ಣ ಬೆನಕನವಾರಿ ಹಾಗೂ ಸಹೋದರಿ ಭಾಗ್ಯ ಲಕ್ಷ್ಮಿ ಗುರಿಕಾರ ಅರೊಂದಿಗೆ ಚರ್ಚಿಸಿ ಮೂರ್ತಿ ತಯಾರಿಸುವ ಪ್ಲಾನ್ ಮಾಡಿದ್ರು..
ಮೊದಲ ವರ್ಷದ ಪುಣ್ಯಾರಾಧನೆ ದಿನದಂದು 3 ಲಕ್ಷ ವೆಚ್ಚದಲ್ಲಿ ಫೈಬರ್, 97 ಸಾವಿರ ರೂಪಾಯಿ ವೆಚ್ಚದಲ್ಲಿ ಪಂಚಲೋಹದ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದಾರೆ. ಅಲ್ದೆ, ಬೆಂಗಳೂರಿನ ಮುರಳಿಧರ ಆಚಾರ್ಯ ಎಂಬುವವರಿಂದ ಪ್ರಣಪ್ರತಿಷ್ಠಾಪನೆ ಮಾಡ್ಸಿ, ಮೂರ್ತಿಯಲ್ಲಿ ತಾಯಿ ದೈವವನ್ನ ಕಾಣ್ತಿದಾರೆ.. ತಾಯಿಯ ಮೂರ್ತಿ ಮನೆಗೆ ತರುತ್ತೇವೆ ಎಂದಾಗ ಕೆಲವರು ನನಗೆ ಬುದ್ಧಿ ಇಲ್ಲ ಹಾಗೂ ದುಡ್ಡಿನ ಬೆಲೆ ಗೊತ್ತಿಲ್ಲ ಎಂದಿದ್ದರು. ಆದರೆ ನನಗೆ ತಾಯಿ ಬೆಲೆ ಏನೆಂದು ಗೊತ್ತಿತ್ತು. ಹೀಗಾಗಿ ತಾಯಿಯ ಪ್ರತಿಮೆಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿದ್ದರಿಂದ ಮನೆಯಲ್ಲಿ ತಾಯಿ ಇದ್ದಾಳೆ ಎನ್ನುವ ಭಾವನೆ ಮೂಡಿಸುತ್ತಿದೆ ಅಂತಾರೆ ಬೆನಕನವಾರಿ ಅವರು..
ವಯಸ್ಸಾಯ್ತು ಅಂತಾ ತಂದೆ ತಾಯಿಯನ್ನ ದೂರ ಇರಿಸೋರೇ ಗೆಚ್ಚು ಅಂಥದ್ರಲ್ಲಿ ತೀರಿಹೋದ ತಾಯಿಯ ಮೂರ್ತಿ ಮಾಡಿ ಇರಿಸಿ ಪೂಜೆ ಸಲ್ಲಿಸುತ್ತಿರೋದು ನಿಜಕ್ಕೂ ಅಪರೂಪ.. ಸ್ವರ್ಗದಲ್ಲಿರೋ ತಾಯಿ ಶಿವಗಂಗಮ್ಮ ಅವರ ಆತ್ಮವೂ ಮಕ್ಕಳ ಪ್ರೀತಿಗೆ ಕರಗಿರಬಹುದು.. ಅಲ್ಲಿಂದಲೇ ಈ ತುಂಬು ಸಂಸಾರಕ್ಕೆ ಆಶೀರ್ವದಿಸುತ್ತಿರಬಹುದು..