Tumakuru: ಪತ್ರಕರ್ತರೆಂದರೆ ಕೇವಲ ಟೀಕೆ ಮಾಡುವವರಲ್ಲ: ಯಡಿ​ಯೂ​ರಪ್ಪ ಅಭಿ​ಮ​ತ

Published : Jun 16, 2022, 12:13 PM IST
Tumakuru: ಪತ್ರಕರ್ತರೆಂದರೆ ಕೇವಲ ಟೀಕೆ ಮಾಡುವವರಲ್ಲ: ಯಡಿ​ಯೂ​ರಪ್ಪ ಅಭಿ​ಮ​ತ

ಸಾರಾಂಶ

ಪತ್ರಕರ್ತರೆಂದರೆ ಕೇವಲ ಟೀಕೆ ಮಾಡುವವರಲ್ಲ. ತಪ್ಪಾದಾಗ ಎಚ್ಚರಿಸಿ, ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟುವ ನೇರ ಮತ್ತು ನಿಷ್ಠುರವಾದಿಗಳು ಎಂದು ಮಾಜಿ ಮುಖ್ಯ​ಮಂತ್ರಿ ಯಡಿ​ಯೂ​ರಪ್ಪ ಅಭಿ​ಪ್ರಾ​ಯ​ಪಟ್ಟರು. 

ತುಮ​ಕೂರು (ಜೂ.16): ಪತ್ರಕರ್ತರೆಂದರೆ ಕೇವಲ ಟೀಕೆ ಮಾಡುವವರಲ್ಲ. ತಪ್ಪಾದಾಗ ಎಚ್ಚರಿಸಿ, ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟುವ ನೇರ ಮತ್ತು ನಿಷ್ಠುರವಾದಿಗಳು ಎಂದು ಮಾಜಿ ಮುಖ್ಯ​ಮಂತ್ರಿ ಯಡಿಯೂರಪ್ಪ ಅಭಿ​ಪ್ರಾ​ಯ​ಪಟ್ಟರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿದ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಬುಧವಾರ ಏರ್ಪಡಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕಕ್ಕೆ ಆಯ್ಕೆಯಾಧ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಸುದ್ದಿ ಮಾಧ್ಯಮಗಳು ಸುದ್ದಿ ಬಿತ್ತರಿಸುವ ರಭಸದಲ್ಲಿ ವಸ್ತುಸ್ಥಿತಿಯನ್ನು ಮರೆಮಾಚಬಾರದು ಎಂದು ಕಿವಿ ಮಾತು ಹೇಳಿದರು.

ಮೊದಲಿನಿಂದಲೂ ಪತ್ರಕರ್ತರೊಂದಿಗೆ ನಾನು ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ಅಧಿಕಾರದಲ್ಲಿದ್ದಾಗ ಪತ್ರಕರ್ತರ ಅಭ್ಯುದಯಕ್ಕಾಗಿ ಸಾಕಷ್ಟುಕೆಲಸ ಮಾಡಿದ್ದೇನೆಂಬ ಆತ್ಮತೃಪ್ತಿ, ಸಂತಸ ನನಗಿದೆ. ಸಂವಿಧಾನದ 4ನೇ ಅಂಗವಾದ ಪತ್ರಿಕಾ ರಂಗವು ಕೋವಿಡ್‌ ಸಂದರ್ಭದಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಿರುವುದು ಶ್ಲಾಘನೀಯವಾದುದು. ಈ ಹಿನ್ನೆಲೆಯಲ್ಲಿ ಪತ್ರಕರ್ತರನ್ನು ಕೋವಿಡ್‌ ವಾರಿಯರ್‌ಗಳೆಂದು ಘೋಷಿಸಿ ಪತ್ರಿಕಾ ವಿತರಕರೂ ಸೇರಿದಂತೆ ಸುಮಾರು 25000ಕ್ಕೂ ಹೆಚ್ಚು ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಉಚಿತ ಕೋವಿಡ್‌ ಲಸಿಕೆಯನ್ನು ಹಾಕಿಸಲು ಕ್ರಮ ಕೈಗೊಳ್ಳಲಾಗಿತ್ತು. ಎಂದರು.

ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ವಿಜ​ಯೇಂದ್ರ ಸ್ಪರ್ಧೆ ಖಚಿತ: ಬಿಎಸ್‌ವೈ

ಪತ್ರಿಕಾ ಭವನ ನಿರ್ಮಾಣಕ್ಕೆ 25 ಲಕ್ಷ: ನಾನು ಮುಖ್ಯ ಮಂತ್ರಿಯಾಗಿದ್ದಾಗ ತುಮಕೂರು ನಗರದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕಾಗಿ 25ಲಕ್ಷ ರು. ನೀಡಲಾಗಿತ್ತು. ಎಲ್ಲರ ಸಹಕಾರದಿಂದ ಪತ್ರಿಕಾಭವನ ಕಟ್ಟಡ ನಿರ್ಮಾಣ ಪೂರ್ಣವಾಗಿದ್ದರೂ ಹಲವಾರು ತಾಂತ್ರಿಕ ಕಾರಣಗಳಿಂದ ನಿರ್ವಹಣೆ ಮಾಡಲಾಗದೆ ಮುಚ್ಚಲಾಗಿತ್ತು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನೀ. ಪುರುಷೋತ್ತಮ್‌ ಹಾಗೂ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಪರಿಶ್ರಮದಿಂದ ಪತ್ರಿಕಾಭವನ ಕಾರ್ಯನಿರ್ವಹಿಸುವಂತಾಗಿದೆ. ಅಲ್ಲದೆ ಪತ್ರಿಕಾಭವನದ ನವೀಕರಣಕ್ಕಾಗಿ ಪಾಲಿಕೆಯಿಂದ 18ಲಕ್ಷ ರೂ. ಮಂಜೂರಾಗಿರುವುದು ಸಂತಸದ ಸಂಗತಿ ಎಂದು ತಿಳಿಸಿದರು. 

ಸಂಘಕ್ಕೆ ನೂತನವಾಗಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಅವರು ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಹುಟ್ಟು ಹಾಕಿರುವ ಪತ್ರಕರ್ತರ ಸಂಘದ ಪದಗ್ರಹಣ ಸಮಾರಂಭವು ಅರ್ಥಪೂರ್ಣವಾದುದು ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಧ್ಯಕ್ಷ ಶಿವಾನಂದ ತಗಡೂರು ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕುರಿತು ಅಭಿನಂದನೆ ನುಡಿಗಳನ್ನಾಡುತ್ತಾ ಬಿ.ಎಸ್‌.ವೈ. ಅವರು ತಮ್ಮ ಅಧಿಕಾರಾವಧಿಯಲ್ಲಿ 55 ಪತ್ರಕರ್ತ ಕುಟುಂಬಗಳಿಗೆ ತಲಾ 5 ಲಕ್ಷ ರು. ಪರಿಹಾರ ನೀಡಲು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರಿಂದ ಸಾಧ್ಯವಾಯಿತು ಎಂದರು. ಸಂಸದ ಜಿ.ಎಸ್‌. ಬಸವರಾಜು ಮಾತನಾಡಿ, ಬಿಎಸ್‌ವೈ ಅವರಂತೆ ದಾನ-ಧರ್ಮ ಮಾಡಿದ ಮುಖ್ಯಮಂತ್ರಿಗಳು ಮತ್ತಾರು ಇಲ್ಲ ಎಂದರು.

ಕೊರಟಗೆರೆ ತಾಲೂಕು ಕ್ಷೇತ್ರ ಸಿದ್ಧರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನೀ. ಪುರುಷೋತ್ತಮ್‌ ಪ್ರಾಸ್ತಾವಿಕವಾಗಿ ಮಾತನಾಡುತ್ತಾ 2ನೇ ಬಾರಿಗೆ ಸಂಘದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದವರೆಲ್ಲರಿಗೂ ಅಭಿನಂದನೆ ಸಲ್ಲಿಸಿದರು

ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್‌, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಗಂಗಹನುಮಯ್ಯ, ಮೇಯರ್‌ ಬಿ.ಜಿ.ಕೃಷ್ಣಪ್ಪ, ಟೂಡಾ ಅಧ್ಯಕ್ಷ ಬಾವಿಕಟ್ಟೆನಾಗಣ್ಣ, ಮಾಜಿ ವಿಧಾನ ಪರಿಷತ್‌ ಸದಸ್ಯ ಡಾ.ಎಂ.ಆರ್‌.ಹುಲಿನಾಯ್ಕರ್‌, ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಇ. ರಘುರಾಮ್‌ ಸ್ವಾಗತಿಸಿದರು. ಪತ್ರಕರ್ತ ಪ್ರಸನ್ನ ದೊಡ್ಡಗುಣಿ ನಿರೂಪಿಸಿದರು. ಸವಿತಾ ಉಮಾಶಂಕರ್‌ ಪ್ರಾರ್ಥಿಸಿದರು.

ಜಾತ್ಯತೀತವಾಗಿ ಎಲ್ಲರಿಗೂ ಸ್ಥಾನಮಾನ ನೀಡಿದ ಮೊದಲ ಸಿಎಂ ಬಿಎಸ್‌ವೈ: ಐಎಫ್‌ಡಬ್ಲ್ಯೂಜೆ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡುತ್ತಾ ಜಾತ್ಯತೀತವಾಗಿ ಎಲ್ಲರಿಗೂ ಸಮಾನ ಸ್ಥಾನಮಾನ ಹಾಗೂ ಹಕ್ಕು ನೀಡಲು ಸಂಕಲ್ಪ ಮಾಡಿದ ಮೊಟ್ಟಮೊದಲ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಂದರೆ ಅತಿಶಯೋಕ್ತಿಯಾಗಲಾರದು. ಅವರು ನಂಬಿದವರನ್ನು ಕೈಬಿಟ್ಟವರಲ್ಲ. ಆತ್ಮವಿಶ್ವಾಸದೊಂದಿಗೆ ಜನಸೇವೆ ಮಾಡಿದಂತಹ ಯಡಿಯೂರಪ್ಪನವರನ್ನು ಸನ್ಮಾನಿಸುತ್ತಿರುವುದು ಸಂತಸದ ಸಂಗತಿ ಎಂದರು.

BREAKING NEWS: ಮತ್ತೊಬ್ಬ ಜನಪ್ರತಿನಿಧಿ ಹತ್ಯೆ, ತುಮಕೂರಿನಲ್ಲಿ ಘಟನೆ

ಪತ್ರಕರ್ತರ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲೆಯ ಪತ್ರಕರ್ತರು ಕೆಟ್ಟಪತ್ರಕರ್ತರ ಸಾಲಿನಲ್ಲಿ ನಿಲ್ಲದೆ ಒಳ್ಳೆಯ ಪತ್ರಕರ್ತರೆನಿಸಿಕೊಳ್ಳಬೇಕು. ಡಿ.ವಿ. ಗುಂಡಪ್ಪ ಅವರಂತಹ ಮಹಾನ್‌ ವ್ಯಕ್ತಿ ಸ್ಥಾಪಿಸಿದ ಈ ಸಂಘಕ್ಕೆ ಕಳಂಕ ತರುವಂತಹ ಕೆಲಸ ಯಾರೂ ಮಾಡಬಾರದು. ಪ್ರಾಮಾಣಿಕ ಸೇವೆ, ಬದ್ಧತೆಯ ಕೆಲಸ ಮಾಡುವ ಮೂಲಕ ಪತ್ರಿಕೋದ್ಯಮಕ್ಕೆ ಶ್ರೇಷ್ಠತೆ ತರಬೇಕೆಂದು ಪತ್ರಕರ್ತರಿಗೆ ಕಿವಿಮಾತು ಹೇಳಿದರು.

ಕೋವಿಡ್‌ ಸಂದರ್ಭದಲ್ಲಿ ಸಾಮಾಜಿಕ ಹೊಣೆಗಾರಿಕೆಯಿಂದ ದುಡಿದು ಸೋಂಕಿನಿಂದ ಮೃತಪಟ್ಟರಾಜ್ಯದ ಅರ್ಹ ಪತ್ರಕರ್ತ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರು. ಪರಿಹಾರವನ್ನು ನೀಡಲಾಗಿದೆ ಎಂದು ತಿಳಿಸಿದ ಅವರು, ಕೋರೋನಾ ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿ ನೆರವಿಗೆ ಧಾವಿಸಿರುವುದು ನಿಜಕ್ಕೂ ಅಭಿನಂದನಾರ್ಹ
-ಬಿ.ಎಸ್‌.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ

PREV
Read more Articles on
click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
ಅಡಿಕೆ ತೋಟದ ದುರಂತ: ಗೊನೆ ಕೊಯ್ಯುವಾಗ ಆಯತಪ್ಪಿ ಬಿದ್ದ ಕಾರ್ಮಿಕ ಸಾವು