ಇಂದು ಯಲಬುರ್ಗಾದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಅನಾವರಣ

By Kannadaprabha News  |  First Published Feb 18, 2023, 9:16 AM IST

ಸ್ಥಳೀಯ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಅನಾವರಣ ಹಾಗೂ ಶಿಲಾಮಂಟಪದ ಉದ್ಘಾಟನೆ ಫೆ. 18ರಂದು ಬೆಳಗ್ಗೆ 11 ಗಂಟೆಗೆ ಜರುಗಲಿದೆ.


ಯಲಬುರ್ಗಾ (ಫೆ.18) : ಸ್ಥಳೀಯ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಅನಾವರಣ ಹಾಗೂ ಶಿಲಾಮಂಟಪದ ಉದ್ಘಾಟನೆ ಫೆ. 18ರಂದು ಬೆಳಗ್ಗೆ 11 ಗಂಟೆಗೆ ಜರುಗಲಿದೆ.

ಕನಕಗುರುಪೀಠದ ತಿಂಥಣಿ ಬ್ರಿಡ್ಜ್‌ ಕಲಬುರಗಿ ವಿಭಾಗದ ಸಿದ್ದರಾಮಾನಂದಪುರಿ ಸ್ವಾಮೀಜಿ, ಯಲಬುರ್ಗಾದ ಸಿದ್ದರಾಮೇಶ್ವರ ಸ್ವಾಮೀಜಿ, ಬಸವಲಿಂಗೇಶ್ವರ ಸ್ವಾಮೀಜಿ, ಹಾಲವರ್ತಿಯ ಶಿವಸಿದ್ದೇಶ್ವರ ಸ್ವಾಮೀಜಿ, ದ್ಯಾಮಯ್ಯ ಗುರುವಿನ, ವಿರುಪಾಕ್ಷಯ್ಯ ಗುರುವಿನ ಸಾನ್ನಿಧ್ಯ ವಹಿಸಲಿದ್ದಾರೆ. ನೂತನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ವೀರನಗೌಡ ಪೊಲೀಸಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.

Tap to resize

Latest Videos

undefined

ಸಚಿವ ಹಾಲಪ್ಪ ಆಚಾರ (Halappa Achar), ಎಂ.ಟಿ.ಬಿ. ನಾಗರಾಜ(MTB Nagaraj), ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಬಸವರಾಜ ರಾಯರಡ್ಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಸುರೇಶ ಭೈರತಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಕುರುಬರ ಸಂಘದ ರಾಜ್ಯಾಧ್ಯಕ್ಷ ಬಿ. ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ವಂಕಟೇಶ ಮೂರ್ತಿ, ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗಳಿ ಸೇರಿದಂತೆ ರಾಜ್ಯ, ಜಿಲ್ಲಾ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ.

ಜಾತ್ರಾ ಕಾರ್ಯಕ್ರಮಗಳು:

ಶನಿವಾರ ಬೆಳಗ್ಗೆ ರೇವಣಸಿದ್ದೇಶ್ವರ, ಬೀರಲಿಂಗೇಶ್ವರ, ಬಸವೇಶ್ವರ ಹಾಗೂ ಮಾಯಮ್ಮದೇವಿ ಮೂರ್ತಿಗಳಿಗೆ ರುದ್ರಾಭಿಷೇಕ ಜರುಗುವುದು. ನಂತರ ಬೀರಲಿಂಗೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವ ಪ್ರಾರಂಭಗೊಂಡು ಸಕಲ ವಾದ್ಯ ವೈಭವಗಳೊಂದಿಗೆ ಗಂಗಾಪೂಜೆ ನೆರವೇರುತ್ತದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ಕನಕದಾಸರ ಮೂರ್ತಿಗೆ ಪೂಜೆ ಸಲ್ಲಿಕೆ ನಂತರ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣಗೊಳ್ಳುವುದು. ನಂತರ ದೇವಸ್ಥಾನಕ್ಕೆ ತಲುಪುತ್ತದೆ. ಮಧ್ಯಾಹ್ನ 12ಕ್ಕೆ ಧಾರ್ಮಿಕ ವೇದಿಕೆ ಕಾರ್ಯಗಳು ಜರುಗಲಿವೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Karnataka Budget 2023: ಕೊಪ್ಪಳ: ಹಳೆ ಘೋಷಣೆಗಳ ಮೆಲುಕು; ಬಜೆಟ್‌ನಲ್ಲಿಲ್ಲ ಹೊಸತು!

click me!