COVID19 ಪಾಸಿಟಿವ್ ವಿದ್ಯಾರ್ಥಿ ಜೊತೆ ಪರೀಕ್ಷೆ ಬರೆದವರ ವರದಿ ನೆಗೆಟಿವ್

Suvarna News   | Asianet News
Published : Jun 28, 2020, 03:20 PM ISTUpdated : Jun 28, 2020, 03:34 PM IST
COVID19 ಪಾಸಿಟಿವ್ ವಿದ್ಯಾರ್ಥಿ ಜೊತೆ ಪರೀಕ್ಷೆ ಬರೆದವರ ವರದಿ ನೆಗೆಟಿವ್

ಸಾರಾಂಶ

ಹಾಸನದಲ್ಲಿ SSLC. ವಿದ್ಯಾರ್ಥಿಗೆ ಕೊರೊನಾ ಹಿನ್ನೆಲೆ ಜೊತೆಯಲ್ಲಿ ಪರೀಕ್ಷೆ ಬರೆದವರಿಗೆಲ್ಲಾ ವರದಿ ನೆಗೆಟಿವ್ ಬಂದಿದೆ. 20 ಮಂದಿ ವಿದ್ಯಾರ್ಥಿಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.

ಹಾಸನ(ಜೂ.28) : SSLC. ವಿದ್ಯಾರ್ಥಿಗೆ ಕೊರೊನಾ ಹಿನ್ನೆಲೆ ಜೊತೆಯಲ್ಲಿ ಪರೀಕ್ಷೆ ಬರೆದವರಿಗೆಲ್ಲಾ ವರದಿ ನೆಗೆಟಿವ್ ಬಂದಿದೆ. 20 ಮಂದಿ ವಿದ್ಯಾರ್ಥಿಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.

ನಿನ್ನೆ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಪರೀಕ್ಷಾ ಕೇಂದ್ರದ ವಿದ್ಯಾರ್ಥಿಗೆ ಪಾಸಿಟಿವ್ ಬಂದಿತ್ತು . ಈ‌ ಹಿನ್ನೆಲೆ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳಿಗೆಲ್ಲಾ ಪರೀಕ್ಷೆ ನಡೆಸಲಾಗಿತ್ತು.

ಸಿಲಿಕಾನ್ ಸಿಟಿಯಲ್ಲಿ ಕೊರೊನಾದಿಂದ ಹೆಡ್‌ಕಾನ್ಸ್‌ಸ್ಟೇಬಲ್ ಸಾವು

ವರದಿ ವಿದ್ಯಾರ್ಥಿಗಳಿಗೆ‌ ಹಾಗೂ ಪೋಷಕರಿಗೆ ರಿಲೀಫ್ ನೀಡಿದೆ. ಇಷ್ಟೂ ಮಂದಿ ಪರೀಕ್ಷೆ ಬರೆಯುವ ಬಗ್ಗೆ ಶೀಘ್ರ ತೀರ್ಮಾನವೂ ಆಗಲಿದೆ. ಹಾಸನ ಜಿಲ್ಲೆಯಲ್ಲಿ ಇಂದು 31 ಜನರಿಗೆ ಪಾಸಿಟಿವ್ ಕಂಡು ಬಂದಿದೆ.

ಐವರು ಪೌರ ಕಾರ್ಮಿಕರಿಗೆ, ಸವಿತ ಸಮಾಜದ ಮೂವರಿಗೆ ಸೋಂಕು ತಗುಲಿದ್ದು, ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ 4, ಹೊರ ರಾಜ್ಯದಿಂದ ಬಂದಿದ್ದ ಮೂರು ಜನರಿಗೆ ಸೋಂಕು ತಗುಲಿದೆ.

ಕೊರೋನಾಗೆ ಬಂಟ್ವಾಳದ ವೃದ್ಧೆ, ಸುರತ್ಕಲ್‌ನ ಯುವಕ ಸಾವು

ಅರಸೀಕೆರೆ ತಾಲೂಕಿನ ಮೂವರು ಸವಿತಾ ಸಮಾಜದ ಜನರಿಗೆ ಸೋಂಕು ತಗಲಿದ್ದು, ಜಿಲ್ಲೆಯಲ್ಲಿ ರ‌್ಯಾಂಡಮ್ ಟೆಸ್ಟ್ ವೇಳೆ 8 ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಬೆಂಗಳೂರು ಟ್ರಾವೆಲ್ ಹಿಸ್ಟರಿಯ 3, ಐ.ಎಲ್.ಐ. ಲಕ್ಷಣದ ಮೂರು ಸೋಂಕಿತರ ಪ್ರಾಥಮಿಕ ಸಂಪರ್ಕದ ಐವರಿಗೆ ಕೊರೊನ ಕಂಡುಬಂದಿದೆ ಎಂದು ಡಿ.ಎಚ್.ಓ ಡಾ. ಕೆ.ಎಂ‌.‌ಸತೀಶ್ ಹೇಳಿದ್ದಾರೆ.

ಜೂನ್ 18 ರಂದು ಪಾಸಿಟಿವ್ ಆಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಓರ್ವ ಮಹಿಳೆ ಇಂದು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 360 ಕ್ಕೆ ಏರಿಕೆಯಾಗಿದೆ. ಈವರೆಗೆ 238 ಜನರು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. ಸಕ್ರಿಯ 120 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

PREV
click me!

Recommended Stories

ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!
ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ, ವಿವಿಐಪಿಗೆ ಐದು ಹೆಲಿಪ್ಯಾಡ್ ವ್ಯವಸ್ಥೆ!