ಕೊಡಗಿನಲ್ಲಿ ಮನೆ ಕೆಲಸದವನ ಮನೆಗೆ ಭೇಟಿ ನೀಡಿದ ಸಚಿವ ರಾಮುಲು

By Kannadaprabha News  |  First Published Jun 10, 2020, 9:14 AM IST

ಆರೋಗ್ಯ ಸಚಿವ ಶ್ರೀರಾಮಲು ಮಂಗಳವಾರ ವಿರಾಜಪೇಟೆಯ ನೆಹರು ನಗರದಲ್ಲಿರುವ ತಮ್ಮ ಮನೆಯ ಕೆಲಸದವನ ಮನೆಗೆ ಭೇಟಿ ನೀಡಿದ್ದಾರೆ.


ವಿರಾಜಪೇಟೆ(ಜೂ.10): ಆರೋಗ್ಯ ಸಚಿವ ಶ್ರೀರಾಮಲು ಮಂಗಳವಾರ ವಿರಾಜಪೇಟೆಯ ನೆಹರು ನಗರದಲ್ಲಿರುವ ತಮ್ಮ ಮನೆಯ ಕೆಲಸದವನ ಮನೆಗೆ ಭೇಟಿ ನೀಡಿದ್ದಾರೆ.

ತಮ್ಮ ಮನೆಯಲ್ಲಿ ಅನೇಕ ವರ್ಷಗಳಿಂದ ಮನೆ ಕೆಲಸ ಮಾಡಿಕೊಂಡಿರುವ ಜಿನೀಷ್‌ ಎಂಬ ಯುವಕನಿಗೆ ನೀಡಿದ ಮಾತಿನಂತೆ, ಮನೆಗೆ ಭೇಟಿ ನೀಡಿ ಕುಟುಂಬದ ಜತೆಗೆ ಕಾಫಿ ಸೇವನೆ ಮಾಡಿದರು. ಹಾಗೂ ಪೋಷಕರ ಜೊತೆ ಮಾತನಾಡಿದರು.

Tap to resize

Latest Videos

ಬಸ್‌ಗೆ ನೀಡಲು ಹಣವೂ ಇಲ್ಲದೇ 70 ಇಳಿ ವಯಸ್ಸಿನಲ್ಲೂ 133 ಕಿಮೀ ನಡೆದೇ ಹೊರಟ ವೃದ್ಧ!

ನಂತರ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಜಿನೀಷ್‌, ಸಚಿವರು ಇಂದು ನನ್ನ ಮನೆಗೆ ಭೇಟಿ ನೀಡಿರುವುದು ನನಗೆ ಮತ್ತು ನಮ್ಮ ಮನೆಯವರಿಗೆ ತುಂಬಾ ಸಂತೋಷವಾಗಿದೆ. ಅವರು ತುಂಬಾ ಸರಳ ಜೀವಿ ಹಾಗೂ ಎಲ್ಲರನ್ನೂ ಪ್ರೀತಿ ಗೌರವದಿಂದ ಕಾಣುತ್ತಾರೆ ಎಂದು ತಿಳಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಜಿನೀಷ್‌ ನನ್ನಲ್ಲಿ ಅನೇಕ ಬಾರಿ ಮನೆಗೆ ಬರಲು ಕೋರಿಕೊಂಡಿದ್ದು, ಕೊಡಗಿಗೆ ಬಂದರೆ ನಿಮ್ಮ ಮನೆಗೆ ಬಂದೆ ಬರುತ್ತೇನೆ ಎಂದು ಮಾತು ಕೊಟ್ಟಿದ್ದೆ. ಅದರಂತೆ ಇಂದು ಭೇಟಿ ನೀಡಿರುವೆ. ಇದೊಂದು ಖಾಸಗಿ ಭೇಟಿ ಮಾತ್ರ. ಇವರು ಬೆಟ್ಟದ ಮೇಲೆ ಮನೆ ನಿರ್ಮಾಣ ಮಾಡಿಕೊಂಡು ಬದುಕುತ್ತಿದ್ದಾರೆ. ಇಲ್ಲಿಗೆ ಬಂದು ಒಳ್ಳೆಯ ಅನುಭವವಾಗಿದೆ ಎಂದು ತಿಳಿಸಿದರು. ಅಲ್ಲದೆ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಸದ್ಯದಲ್ಲಿಯೇ ಅವಶ್ಯಕತೆ ಇರುವ ವೈದ್ಯರನ್ನು ಕಳುಹಿಸಿ ಕೊಡಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

click me!