ಅಮೂಲ್ಯ ಎನ್‌ಕೌಂಟರ್ ಮಾಡ್ತೇವೆ, ಇಲ್ಲ ಎನ್ಕೌಂಟರ್ ಮಾಡಿದವ್ರಿಗೆ 10 ಲಕ್ಷ ಕೊಡ್ತೇವೆ| ಶ್ರೀರಾಮ ಸೇನೆ ಮುಖಂಡ ಸಂಜೀವ ಮರಡಿ ವಿವಾದಾತ್ಮಕ ಘೋಷಣೆ| ಬಂಧಿತ ಅಮೂಲ್ಯ ಬಿಡುಗಡೆ ಮಾಡಿದ್ರೆ ಎನ್‌ಕೌಂಟರ್ ಮಾಡುತ್ತೇವೆ| ದೇಶದ್ರೋಹಿ ಘೋಷಣೆ ವಿರುದ್ಧ ಹೊಸಪೇಟೆಯಲ್ಲಿ ಪ್ರತಿಭಟನೆ|
ಹೊಸಪೇಟೆ(ಫೆ.23): ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅಮೂಲ್ಯ ಲಿಯೋನ ಎನ್ನುವ ವಿದ್ಯಾರ್ಥಿನಿ ಪಾಕಿಸ್ತಾನ ಜಿಂದಾಬಾದ್ ಎನ್ನುವ ದೇಶದ್ರೋಹಿ ಘೋಷಣೆ ಕೂಗಿದ್ದು, ಅವರನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು. ಒಂದು ವೇಳೆ ಬಿಡುಗಡೆ ಮಾಡಿದರೆ ಅವರನ್ನು ನಾವೇ ಎನ್‌ಕೌಂಟರ್ ಮಾಡ್ತೇವೆ. ಇಲ್ಲ ಎನ್‌ಕೌಂಟರ್ ಮಾಡಿದವರಿಗೆ 10 ಲಕ್ಷ ಬಹುಮಾನ ಕೊಡುತ್ತೇವೆ ಎಂದು ಇಲ್ಲಿನ ಶ್ರೀರಾಮ ಸೇನೆಯ ಮುಖಂಡ ಸಂಜೀವ್ ಮರಡಿ ವಿವಾದಾತ್ಮಕ ಘೋಷಣೆ ಮಾಡಿದ್ದಾರೆ.
ನಗರದಲ್ಲಿ ಬಿಜೆಪಿ ಮತ್ತು ಶ್ರೀರಾಮ ಸೇನೆ ಸೇರಿದಂತೆ ಹಲವು ಸಂಘಟನೆಗಳಿಂದ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಮೂಲ್ಯ ಲಿಯೋನ ಎನ್ನುವ ವಿದ್ಯಾರ್ಥಿನಿ ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆ ಹಾಕಿರುವುದು ಖಂಡನೀಯ. ಇದೊಂದು ಕೆಟ್ಟರೋಗ, ಕ್ಯಾನ್ಸರ್ ರೋಗದಂತೆ ಹರಡುತ್ತಿದೆ. ವೈರಸ್ ರೀತಿಯಲ್ಲಿ ಹರಡುತ್ತಿದೆ. ಮೊದಲು ಜಮ್ಮು-ಕಾಶ್ಮೀರದಲ್ಲಿ ಬಂತು, ನಂತರ ಜೆಎನ್‌ಯುಗೆ ಬಂತು. ಜೆಎನ್‌ಯುನಿಂದ ದೆಹಲಿಗೆ ಬಂತು. ದೆಹಲಿಯಿಂದ ಮೈಸೂರಿಗೆ, ಮೈಸೂರಿನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಮತ್ತೆ ಹುಬ್ಬಳ್ಳಿಗೆ ಬಂತು. ಹುಬ್ಬಳ್ಳಿಯಲ್ಲಿ ಮೂವರು ವಿದ್ಯಾರ್ಥಿಗಳು ಹೇಳಿದರು. ಆದಾದನಂತರ ಮತ್ತೆ ಬೆಂಗಳೂರಿನಲ್ಲಿ ಅಮೂಲ್ಯ ಲಿಯೋನ ವಿದ್ಯಾರ್ಥಿನಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅವರನ್ನು ಯಾವುದೇ ಕಾರಣಕ್ಕೂ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಡಿ ಎಂದು ಕೇಂದ್ರ, ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಒಂದು ವೇಳೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ನಾವೇ ಎನ್‌ಕೌಂಟರ್ ಮಾಡುತ್ತೇವೆ. ಬೇರೆ ಯಾರಾದರೂ ಎನ್‌ಕೌಂಟರ್ ಮಾಡಿದರೆ ಅವರಿಗೆ ಶ್ರೀರಾಮ ಸೇನೆಯಿಂದ 10 ಲಕ್ಷ ಬಹುಮಾನ ಕೊಡುತ್ತೇವೆ ಎಂದು ಮರಡಿ ಘೋಷಿಸಿದರು.