ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೊಸ್ಟ್‌: ಮುರುಗೇಶ್‌ ನಿರಾಣಿ ಉಚ್ಛಾಟಿಸಲು ಆಗ್ರಹ

By Kannadaprabha NewsFirst Published Jul 24, 2020, 12:55 PM IST
Highlights

ಹಿಂದೂ ದೇವತೆಗಳ ಕುರಿತು ಅವಹೇಳನಕಾರಿಯಾಗಿ ನಡೆದುಕೊಂಡಿರುವುದು ಅಕ್ಷಮ್ಯ ಅಪರಾಧ| ಬಿಜೆಪಿ ಹಿಂದೂತ್ವದ ಹೆಸರಿನಲ್ಲಿಯೇ ಜನ್ಮತಳೆದು ಬೆಳೆದಿದೆ| ಹಿಂದೂತ್ವದ ಹೆಸರಿನಲ್ಲಿಯೇ ಅಧಿಕಾರ ಗಿಟ್ಟಿಸಿದೆ| ಶಾಸಕ ಮುರುಗೇಶ ನಿರಾಣಿ ಅವರಿಗೆ ಹಿಂದುತ್ವವಾಗಲಿ, ಹಿಂದೂ ದೇವರುಗಳ ಬಗ್ಗೆ ನಂಬಿಕೆಯಾಗಲಿ, ವಿಶ್ವಾಸವಾಗಲಿ ಇಲ್ಲದಿದ್ದಲ್ಲಿ ಅವರು ಧರ್ಮ ಬದಲಿಸಿಕೊಂಡು ತಮ್ಮ ಹೆಸರನ್ನು ಬದಲಿಸಿಕೊಳ್ಳಲಿ|

ಗದಗ(ಜು.24): ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿ ಪೊಸ್ಟ್‌ ಮಾಡಿರುವ ಶಾಸಕ ಮುರುಗೇಶ ನಿರಾಣಿಯನ್ನು ಬಿಜೆಪಿಯಿಂದ ಉಚ್ಚಾಟಿಸುವಂತೆ ಶ್ರೀರಾಮ ಸೇನೆ ಆಗ್ರಹಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಧಾರವಾಡ ವಿಭಾಗೀಯ ಸಂಚಾಲಕ ರಾಜೂ ಖಾನಪ್ಪನವರ, ಹಿಂದೂ ದೇವತೆಗಳ ಕುರಿತು ಅವಹೇಳನಕಾರಿಯಾಗಿ ನಡೆದುಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಬಿಜೆಪಿ ಹಿಂದೂತ್ವದ ಹೆಸರಿನಲ್ಲಿಯೇ ಜನ್ಮತಳೆದು ಬೆಳೆದಿದೆ. ಹಿಂದೂತ್ವದ ಹೆಸರಿನಲ್ಲಿಯೇ ಅಧಿಕಾರ ಗಿಟ್ಟಿಸಿದೆ. ಶಾಸಕ ಮುರುಗೇಶ ನಿರಾಣಿ ಅವರಿಗೆ ಹಿಂದುತ್ವವಾಗಲಿ, ಹಿಂದೂ ದೇವರುಗಳ ಬಗ್ಗೆ ನಂಬಿಕೆಯಾಗಲಿ, ವಿಶ್ವಾಸವಾಗಲಿ ಇಲ್ಲದಿದ್ದಲ್ಲಿ ಅವರು ಧರ್ಮ ಬದಲಿಸಿಕೊಂಡು ತಮ್ಮ ಹೆಸರನ್ನು ಬದಲಿಸಿಕೊಳ್ಳಲಿ. ಆದರೆ, ಈ ರೀತಿ ಅವಹೆಳನಕಾರಿಯಾಗಿ ಪೋಸ್ಟ್‌ ಮಾಡಬಾರದು ಎಂದು ಹೇಳಿದ್ದಾರೆ. ಕೂಡಲೇ ಶಾಸಕ ಮುರುಗೇಶ ನಿರಾಣಿಯನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸುವಂತೆ ಖಾನಪ್ಪನವರ ಆಗ್ರಹಿಸಿದ್ದಾರೆ.

ಕೊರೋನಾ ಅಟ್ಟಹಾಸ: ಕಪ್ಪತ್ತಗುಡ್ಡದ ಕಪ್ಪತ್ತಮಲ್ಲೇಶ್ವರ ಜಾತ್ರೆ ರದ್ದು

ಶಾಸಕ ಐಹೊಳೆಯನ್ನು ಉಚ್ಛಾಟಿಸಲು ಆಗ್ರಹ

ಕೋಲಾರದ ಬಂಗಾರಪೇಟೆ ತಹಸೀಲ್ದಾರ್‌ ದಿ. ಚಂದ್ರಮೌಳೇಶ್ವರ ಅವರ ಕೊಲೆ ಪ್ರಕರಣ ಮಾಸುವ ಮುನ್ನವೆ ರಾಯಭಾಗದ ಶಾಸಕ ದುರ್ಯೋಧನ ಐಹೊಳೆ ಅವರು ತಹಸೀಲ್ದಾರ್‌ ಚಂದ್ರಕಾಂತ ಭಜಂತ್ರಿ ಅವರಿಗೆ ತೊಂದರೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ಉಚ್ಛಾಟನೆಗೊಳಿಸಲು ಆಗ್ರಹಿಸಿ ಕರ್ನಾಟಕ ಪ್ರದೇಶ ಕೊರಮರ ಸಂಘದಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. 

ಈ ವೇಳೆ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹುಲ್ಲೇಶ ಭಜಂತ್ರಿ, ಜಂಟಿ ಕಾರ್ಯದರ್ಶಿ ರಾಮಣ್ಣ ಭಜಂತ್ರಿ, ಹುಚ್ಚಪ್ಪ ಭಜಂತ್ರಿ, ಸುರೇಶ ಭಜಂತ್ರಿ, ಕರಿಯಪ್ಪ ಭಜಂತ್ರಿ, ಮಾರುತಿ ಭಜಂತ್ರಿ ಪರಸಾಪುರ, ಮಂಜುನಾಥ ಭಜಂತ್ರಿ, ತಿಪ್ಪಣ್ಣ ಭಜಂತ್ರಿ, ನಂದೀಶ ಭಜಂತ್ರಿ, ಯಮನೂರ ಭಜಂತ್ರಿ ಸೇರಿದಂತೆ ಮುಂತಾದವರು ಇದ್ದರು.
 

click me!