
ಹುಬ್ಬಳ್ಳಿ, (ಜೂನ್.08): ರಾಜ್ಯದಲ್ಲಿ ಮತ್ತೆ ಧರ್ಮದ ದಂಗಲ್ ಕಿಡಿ ಹೊತ್ತಿಕೊಂಡಿದ್ದು, ಅನಧಿಕೃತ ಮೈಕ್ ವಿರುದ್ಧ ಶ್ರೀರಾಮಸೇನೆ ನಡೆಸುತ್ತಿರುವ, ಸುಪ್ರಭಾತ ಅಭಿಯಾನದ ಎರಡನೇ ಭಾಗ ಇಂದಿನಿಂದ ರಾಜ್ಯಾದ್ಯಂತ ಆರಂಭವಾಗಿದೆ. ಬಿಜೆಪಿ ಶಾಸಕರು ಮತ್ತು ನಾಯಕರ ಕಚೇರಿ ಹಾಗೂ ನಿವಾಸದ ಮುಂದೆ, ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ಹೊರಹಾಕಿ ಮತ್ತೊಂದು ಹೋರಾಟಕ್ಕೆ ಮುನ್ನುಡಿ ಬರೆದಿದ್ದಾರೆ...
ರಾಜ್ಯದ ಮಸೀದಿಗಳ ಮೇಲೆ ಇರುವ ಅನಧಿಕೃತ ಮೈಕ್ ಗಳ ತೆರವು ಹೋರಾಟದ ಪರಿಣಾಮವಾಗಿ ಹಿಂದೂ ಸಂಘಟನೆಗಳು ಹುಟ್ಟುಹಾಕಿರುವ ಸುಪ್ರಭಾತ ಅಭಿಯಾನ ಎರಡನೇ ರೂಪ ಡೆದುಕೊಂಡಿದೆ. ಶ್ರೀರಾಮಸೇನೆ ಸರ್ಕಾರಕ್ಕೆ ನೀಡಿದ ಗಡುವು ಮುಗಿದ್ದರು ಸರ್ಕಾರ ಮಾತ್ರ ಇನ್ನೂ ಎಚ್ಚೆತ್ತಿಲ್ಲ. ಇದರಿಂದ ಆಕ್ರೋಶಗೊಂಡ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರಾಜ್ಯದ ಎಲ್ಲಾ ಬಿಜೆಪಿ ಶಾಸಕರ ಕಚೇರಿ ಎದುರು ಹೋರಾಟಕ್ಕೆ ಕರೆ ನೀಡಿದ್ದರು..ಈ ಪರಿಣಾಮ ರಾಜ್ಯದ ವಿವಿಧ ಕಡೆ ಎರಡನೇ ಹಂತದ ಹೋರಾಟ ಏಕಕಾಲದಲ್ಲಿ ಆರಂಭಗೊಂಡಿದೆ. ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಗದಗ ಸೇರಿದಂತೆ ವಿವಿಧ ಕಡೆ ಬಿಜೆಪಿ ಶಾಸಕರ ಕಚೇರಿ ಎದುರು ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಶಾಸಕರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
'ಕೋರ್ಟ್ ಆದೇಶ ಪಾಲಿಸದವರ ಮೇಲೆ ನಾನೇ ಗುಂಡಿಟ್ಟು ಹೊಡೆಯುತೇನೆ'
ಸರ್ಕಾರ ಗಂಡಸ್ಥನ ಪ್ರದರ್ಶಿಸಲಿ
ಇನ್ನೂ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇಂದು ಹುಬ್ಬಳ್ಳಿಯ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹುಬ್ಬಳ್ಳಿ ನಿವಾಸದ ಎದುರು ತಮ್ಮ ಕಾರ್ಯಕರ್ತರ ಜೊತೆಗೆ ಸೇರಿ ಪ್ರತಿಭಟನೆ ನಡೆಸಿದರು. ಶೆಟ್ಟರ್ ಮನೆ ಮುಂದೆ ಕೆಲ ಹೊತ್ತು ಧರಣಿ ಕುಳಿತ ಮುತಾಲಿಕ್. ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ಶಾಸಕ ಮತ್ತು ನಾಯಕರ ವಿರುದ್ಧ ಕಿಡಿಕಾರಿದರು. ಬಿಜೆಪಿ ಸರ್ಕಾರಕ್ಕೆ ಗಂಡಸ್ಥನವಿಲ್ಲ. ಇವರ ಕೈಯಲ್ಲಿ ಆಗಲಿಲ್ಲ ಅಂದರೆ ನನಗೆ ಅಧಿಕಾರ ಕೊಟ್ಟು ನೋಡಲಿ, ಯೋಗಿ ಮಾದರಿ ಕಾನೂನು ಜಾರಿಗೆ ತಂದು ಸುಪ್ರೀಂಕೋರ್ಟ್ ಆದೇಶ ಬೆಲೆ ನೀಡದವರಿಗೆ ತಕ್ಕ ಶಾಸ್ತಿ ಮಾಡತ್ತಿನಿ, ಇನ್ನೂ ಬಿಜೆಪಿ ನಾಯಕರು ಹೀಗೆ ತಮ್ಮ ನಿರ್ಲಕ್ಷ್ಯ ಧೋರಣೆ ಮುಂದುವರಿಸ್ರಿದೆ, ಮುಂದಿನ ದಿನಗಳಲ್ಲಿ ಅವರ ಮನೆಯ ಎದರು ಮೈಕ್ ಸೆಟ್ ಹಾಕಿ ಭಜನೆ ಅಭಿಯಾನ ಮಾಡುತ್ತೆಂದು ಎಚ್ಚರಿಕೆ ನೀಡಿದರು. ಇನ್ನೂ ಇದೇ ವೇಳೆ ಈ ಹಿಂದೆ ನೀಡಿದ್ದ ಗುಂಡು ಹಾಕಿ ಸರಿ ಮಾಡುವ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡರು.
ಮುತಾಲಿಕ್ ಜೊತೆ ಮುಕ್ತ ಚರ್ಚೆಗೆ ಸಿದ್ದ ಎಂದ ಶೆಟ್ಟರ್
ಇನ್ನೂ ಇದಕ್ಕೂ ಮುನ್ನ ಶ್ರೀರಾಮಸೇನೆ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂವಿಧಾನದ ಪ್ರಕಾರ ಶಾಂತಿಯುತ ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ನಮ್ಮ ಮನೆಯ ಎದುರು ಪ್ರತಿಭಟನೆ ಮಾಡಲು ನನ್ನ ಅಭ್ಯಂತರ ಏನು ಇಲ್ಲ. ಪ್ರತಿಭಟನೆ ಬಿಟ್ಟು ಮುತಾಲಿಕ್ ನನ್ನ ಜೊತೆಗೆ ಮಾತುಕತೆ ಬಂದ್ರೆ ಚರ್ಚೆಗೆ ಸಿದ್ದ ಎಂದರು.
ಒಟ್ಟಿನಲ್ಲಿ ಮಸೀದಿಗಳ ಮೇಲಿನ ಅನಧಿಕೃತ ಮೈಕ್ ತೆರವುಗೊಳಿಸುವ ವಿಚಾರದಲ್ಲಿ ಶ್ರೀರಾಮಸೇನೆ ಪಟ್ಟು ಸಡಿಲಿಸದೆ ಹೋರಾಟ ಮುಂದುವರೆಸಿದೆ. ಸರ್ಕಾರ ಅನಧಿಕೃತ ಮೈಕ್ ಗಳ ತೆರವಿಗೆ ನೀಡಿದ್ದ 15 ದಿನಸ ಗಡವು ಮುಗಿದ್ರು ಯಾವುದೇ ಕ್ರಮ ಜುರಗಿಸುತ್ತಿಲ್ಲ ಇದು ಹಿಂದೂಪರ ಸಂಘಟನೆಗಳನ ಕೆಂಗಣ್ಣಿಗೆ ಗುರಿಯಾಗಿದೆ. ಈ ಹೋರಾಟ ರಾಜ್ಯದಲ್ಲಿ ಮತ್ತೆ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಕಾದು ನೋಡಬೇಕಿದೆ.