Chikkamagaluru : ಗಾಂಜಾ ದಂಧೆಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಹೊಸ ಪ್ಲಾನ್

By Suvarna News  |  First Published Jun 8, 2022, 9:31 PM IST
  • ಮಾರಾಟದ ಜೊತೆಗೆ ಸೇವಿಸೋರನ್ನೇ ಟಾರ್ಗೆಟ್ 
  • ಗಾಂಜಾ ಸೇವನೆ ಮಾಡುವರಿಗೆ ಇನ್ನು ಮುಂದೆ ಎಫ್ ಐ ಆರ್ 
  • ಗಾಂಜಾ ಸೇವನೆ ಮಾಡುವ 50 ಮಂದಿ ವಿರುದ್ದ ಈಗಾಗಲೇ ಪ್ರಕರಣ ದಾಖಲು 

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜೂ.8): ಮಲೆನಾಡಿನಲ್ಲಿ ಭಾಗದಲ್ಲಿ ಎಗ್ಗಿಲ್ಲದೇ ಗಾಂಜಾ ದಂಧೆ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಗಾಂಜಾ ಪ್ರಕರಣಗಳು ಜಾಸ್ತಿ ಆಗುತ್ತಿದ್ದರೂ ಯಾವುದೇ ಪ್ರಯೋಜನವಿಲ್ಲ. ಇದಕ್ಕಾಗಿ ಕಾಫಿನಾಡಿನ ಪೊಲೀಸ್ರು ಹೊಸ ಪ್ಲಾನ್ ಮಾಲಕ ಗಾಂಜಾ ದಂಧಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.  ಗಾಂಜಾ ದಂಧೆಯನ್ನು  ಬುಡಸಮೇತ ಕಿತ್ತಾಕೋಕೆ ಮುಂದಾದ ಖಾಕಿ ಟೀಂ ಈಗ ಗಾಂಜಾ ಸೇವಿಸೋರನ್ನೇ ಟಾರ್ಗೇಟ್ ಮಾಡ್ತಾ ಇದೇ.ಸೇವಿಸೋದರನ್ನು ಹಿಡಿಯೋದು ಎಫ್ ಐಆರ್ ದಾಖಲಿಸಿ ಕೊಂಚ ಗಾಂಜಾಗೆ ಬ್ರೇಕ್ ಹಾಕೋಕೆ ಮುಂದಾಗಿದ್ದಾರೆ.

Latest Videos

undefined

ಗಾಂಜಾ ಕೇಸ್ ವರ್ಷದಿಂದ ವರ್ಷಕ್ಕೆ ಹೆಚ್ಚಳ: ಮಲೆನಾಡಿನ ಪ್ರದೇಶವಾದ ಚಿಕ್ಕಮಗಳೂರಿನಲ್ಲಿ ಗಾಂಜಾ ಕರಮತ್ತು ಜೋರಾಗಿದೆ. ವರ್ಷದಿಂದ ವರ್ಷಕ್ಕೆ ಗಾಂಜಾ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ನಡುವೆ ಪೊಲೀಸ್ ಇಲಾಖೆಯೂ ಬಿಗಿಯಾದ ಕಾರ್ಯಚಾರಣೆ ನಡೆಸಿ ಗಾಂಜಾ ದಂಧೆಗೆ ಕಡಿವಾಣ ಹಾಕಲು ಹರಸಾಹಸವನ್ನೇ ಮಾಡುತ್ತಿದೆ. ಜಿಲ್ಲೆಯಲ್ಲಿ ಗಾಂಜಾ ವಾಸನೆಯಂತೂ ಇಂದು ನಿನ್ನೆಯದಲ್ಲ. ಹೊರರಾಜ್ಯದಿಂದಲೂ ಗಾಂಜಾ ಬರ್ತಿತ್ತು ಅನ್ನೋ ಮಾಹಿತಿಯು ಇತ್ತು. ಲಕ್ಷಾಂತರ ಮೌಲ್ಯದ ಗಾಂಜಾವನ್ನು ಪೊಲೀಸ್ರು ಈ ಹಿಂದೆ ವಶ ಪಡಿಸಿಕೊಂಡಿರುವ ನಿದೇರ್ಶನವೂ ಇದೆ. 

ಶಿಕ್ಷಣ ಸಚಿವರ ಮನೆಗೆ ನುಗ್ಗಿದವರು ವಿದ್ಯಾರ್ಥಿಗಳೇ ಅಲ್ಲ: ARAGA JNANENDRA

ಇದಲ್ಲದೆ ಹೊರ ರಾಜ್ಯದ ಗಾಂಜಾಕ್ಕೂ ಬ್ರೇಕ್ ಹಾಕೋಕೆ ಮುಂದಾಗಿದ್ರು. ಅದ್ರೂ ಗಾಂಜಾ ದಂಧೆಯಂತೂ ನಿಂತಿಲ್ಲ ಅನ್ನೋ ಆರೋಪವಿದೆ.ಅದ್ರಲ್ಲಿಯೂ ಯುವಪಿಳಿಗೆಯೇ ಗಾಂಜಾ ಅಮಲಿನಲ್ಲಿ ತೇಲುತ್ತಿದ್ದಾರೆ ಎನ್ನುವ ಮಾಹಿತಿ ಪೊಲೀಸ್ ಇಲಾಖೆಯ ಬಳಿ ಇದೆ. ಜಿಲ್ಲೆಯಲ್ಲಿ 2020ರಲ್ಲಿ 50 ಗಾಂಜಾ ಮಾರಾಟ ಕೇಸ್ ದಾಖಲಾಗಿ 120 ಆರೋಪಗಳನ್ನು ಬಂಧಿಸಿ ಅವರಿಂದ 178 ಕೆಜಿ ಗಾಂಜಾ ವಶಕ್ಕೆ ಪಡೆದ್ರೆ 2021ರಲ್ಲಿ 28 ಕೇಸ್ 142 ಆರೋಪಿಗಳಿಂದ 220 ಕೆ ಜಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ವರ್ಷಈಗಾಗಲೇ 15ಕ್ಕೂ ಹೆಚ್ಚು ದಾಖಲು ಆಗಿದೆ. ಇದಕ್ಕಾಗಿ ಕಾಫಿನಾಡಿನ ಪೊಲೀಸ್ರು ಗಾಂಜಾ ದಂಧೆಗೆ ಬ್ರೇಕ್ ಹಾಕೋ ಜೊತೆಯಲ್ಲಿ ಮತ್ತೊಂದು ಹೊಸ ಪ್ಲಾನ್ ಗೆ ಮುಂದಾಗಿದ್ಧಾರೆ.

ಗಾಂಜಾ ಸೇವನೆ ಮಾಡುವರು ವಿರುದ್ದವೂ ಕೇಸ್ : ಇನ್ನೂ ಗಾಂಜಾಕ್ಕೆ ಕಾಫಿ ನಾಡಲ್ಲಿ ಬ್ರೇಕ್ ಹಾಕ್ಲೇ ಬೇಕು ಅನ್ನೋ ಫಣತೊಟ್ಟಿರೋ ಖಾಕಿ ಟೀಂ ಈಗ ಸೇವನೆ ಮಾಡೋರ ಬೆನ್ನು ಹತ್ತಿದೆ. ಈಗಾಗಲೇ ಆರೋಗ್ಯ ಇಲಾಖೆಯ ಸಹಾಯವನ್ನು ಪಡೆದಿರೋ ಪೊಲೀಸ್ರು. ಗಾಂಜಾ ಅಮಲಿನಲ್ಲಿರೋರು ಸಿಕ್ಕ ತಕ್ಷಣವೇ ಅವ್ರನ್ನು ಮೆಡಿಕಲ್ ಟೆಸ್ಟ್ ಮಾಡಿಸ್ತಾರೆ. ಅಮಲಿನ ನಶೆ ಇರೋದು ಕನ್ಪರ್ಮ್ ಅಗ್ತಾ ಇದ್ದಂತೆ ಎನ್ ಡಿಪಿಎಸ್ ಆಕ್ಟ್ ನಲ್ಲಿ ಎಫ್ ಐಆರ್ ದಾಖಲಿಸಲಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಪೊಲೀಸ್ರ ಟೀಂ ಮಫ್ತಿಯಲ್ಲಿ ರೌಂಡ್ಸ್ ಹಾಕಿ ಹೆಡೆಮುರಿ ಕಟ್ಟೋಕೆ ಮುಂದಾಗಿದೆ.

Chitradurga: ಶಾಲೆಯ ಅಭಿವೃದ್ಧಿಗಾಗಿ ಬೀದಿಗಿಳಿದ ಕೋಟೆ ನಾಡಿನ ವಿದ್ಯಾರ್ಥಿಗಳು

ಗಾಂಜಾ ಸೇವನೆ ಮಾಡುವರಿಗೆ ಬಿಸಿಮುಟ್ಟಿಸುವ  ದಸೆಯಲ್ಲಿ ಪೊಲೀಸ್ ಇಲಾಖೆ ಈ ಕ್ರಮವನ್ನು ತೆಗೆದುಕೊಂಡಿದೆ. ಗಾಂಜಾ ಮಾರಾಟ ಮಾಡುವರ ಜೊತೆಗೆ ಸೇವನೆ ಮಾಡುವರಿಗೆ ಕೇಸ್ ಹಾಕಿದ್ರೆ ಗಾಂಜಾ ಪ್ರಕರಣ ಕಡಿಮೆ ಆಗುತ್ತೆ ಎನ್ನುವುದು ಪೊಲೀಸ್ ಇಲಾಖೆಯ ಪ್ಲಾನ್. ಈಗಾಗಲೇ ಗಾಂಜಾ ಸೇವನೆ ಮಾಡುವ 50 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ತಿಳಿಸಿದ್ದಾರೆ. ಒಟ್ಟಾರೆ ರಾಜ್ಯ ಸರ್ಕಾರದ ಸೂಚನೆಯಂತೆ ಗಾಂಜಾಕ್ಕೆ ಬ್ರೇಕ್ ಹಾಕ್ಲೇ ಬೇಕು ಅಂತಾ ದಂಧೆಕೋರರ ವಿರುದ್ದ ತೊಡೆ ತಟ್ಟಿದ್ದ ಖಾಕೀ ಟೀಂ ಈಗ ನಶೆಯಲ್ಲಿ ತೆಲಾಡೋರ ಮೇಲೆಯೂ ಮುಗಿಬಿಳೋಕೆ ಮುಂದಾಗಿದೆ. ನಶೆಯಲ್ಲಿ ತೆಲ್ತಾ ಇದ್ರೇ ಇನ್ಮುಂದೇ ಎಫ್ ಐ ಆರ್ ಪಿಕ್ಸ್ ಅಂತಿದ್ದಾರೆ ಪೊಲೀಸ್ರು.

click me!