ಶೃಂಗೇರಿ ಶಾರದೆ ದೇಗುಲದಲ್ಲಿ ಮಹತ್ವದ ಬದಲಾವಣೆ

By Kannadaprabha News  |  First Published Oct 7, 2020, 12:33 PM IST

ಶೃಂಗೇರಿ ಶಾರದಾ ಪೀಠದಲ್ಲಿ ಮಹತ್ವದ ಬದಲಾವಣೆಯಾಗಿದೆ. ಏನದು ಬದಲಾವಣೆ ..?


ಶೃಂಗೇರಿ (ಅ.07):  ಇಲ್ಲಿನ ಶಾರದಾ ಪೀಠಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶಾವಕಾಶಕ್ಕೆ ನಿಗದಿಪಡಿಸಲಾಗಿದ್ದ ವೇಳೆಯನ್ನು ಮಂಗಳವಾರದಿಂದ ಬದಲಾವಣೆ ಮಾಡಲಾಗಿದೆ.

ಬೆಳಗ್ಗೆ 6ರಿಂದ ಮದ್ಯಾಹ್ನ 2ಗಂಟೆ ಹಾಗೂ ಸಂಜೆ 4 ರಿಂದ ರಾತ್ರಿ 9ಗಂಟೆಯವರೆ ಭಕ್ತರಿಗೆ ದರ್ಶನಾವಕಾಶ ನೀಡಲಾಗಿದೆ.

Latest Videos

undefined

ಕೊರೋನಾ ಕಾಲದಲ್ಲೂ ಮುಳ್ಳಯ್ಯನ ಗಿರಿಗೆ ಪ್ರವಾಸಿಗರ ದಂಡು ...

ಕೊರೋನಾ ಲಾಕ್‌ಡೌನ್‌ ನಂತರ ಸರ್ಕಾರದ ಮಾರ್ಗಸೂಚಿಯಂತೆ ಈ ಹಿಂದೆ ಬೆಳಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಸಂಜೆ 5 ರಿಂದ 8 ಗಂಟೆಯವರೆಗೆ ಮಾತ್ರ ಭಕ್ತರಿಗೆ ಪ್ರವೇಶ ಅವಕಾಶ ಇತ್ತು. 

ಹೊರಜಿಲ್ಲೆ, ರಾಜ್ಯಗಳಿಂದ ಶಾರದಾಂಬೆ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಲಿಸುತ್ತಿದ್ದು, ದಿನಗಟ್ಟಲೆ ಸಾಲುಗಟ್ಟಿನಿಲ್ಲುವುದನ್ನು ತಪ್ಪಿಸಲು ಈ ಅನುಕೂಲ ಒದಗಿಸಲಾಗಿದೆ.

click me!