ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರ ಶ್ರೇಯಸ್ಸು, ಆರೋಗ್ಯ ಮತ್ತು ಶತ್ರು ನಾಶದ ಸಲುವಾಗಿ ಉಡುಪಿಯ ಕಾಪು ದಂಡ ತೀರ್ಥ ಮಠದಲ್ಲಿ ವಿಶೇಷ ಯಾಗ ಮಾಡಿಸಿದ್ದಾರೆ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ(ಅ.3): ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರ ಶ್ರೇಯಸ್ಸು, ಆರೋಗ್ಯ ಮತ್ತು ಶತ್ರು ನಾಶದ ಸಲುವಾಗಿ ಉಡುಪಿಯ ಕಾಪು ದಂಡ ತೀರ್ಥ ಮಠದಲ್ಲಿ ವಿಶೇಷ ಯಾಗ ನಡೆಸಲಾಯಿತು. ಖ್ಯಾತ ಜ್ಯೋತಿಷಿ ಪ್ರಕಾಶ ಅಮ್ಮಣ್ಣಾಯ ನೇತೃತ್ವದಲ್ಲಿ ಈ ನರಸಿಂಹ ಯಾಗ ಸಂಪನ್ನಗೊಂಡಿತು. ನರಸಿಂಹ ಯಾಗದ ಪೂರ್ಣಾಹುತಿಯಲ್ಲಿ ಪ್ರಮೋದ್ ಮುತಾಲಿಕ್ ಭಾಗಿಯಾಗಿದ್ದರು. ಶ್ರೀರಾಮ ಸೇನೆ ಮತ್ತು ಮುತಾಲಿಕ್ ಅಭಿಮಾನಿಗಳಂದ ಯಾಗ ನಡೆಯಿತು. ಮಹಾಯಾಗದ ಪೂರ್ಣಾಹುತಿಯ ಬಳಿಕ ಜ್ಯೋತಿಷಿ ಪ್ರಕಾಶ ಅಮ್ಮಣ್ಣಾಯ ಮಾತನಾಡಿ, ಸಜ್ಜನರು ನಿರ್ಭಯದಿಂದ ಓಡಾಡುವಂತಾಗಬೇಕು. ಸಜ್ಜನರು ನಿರ್ಭಯದಿಂದ ಇರಬೇಕಾದರೆ ದುರ್ಜನರು ಇರಬಾರದು. ದುರ್ಜನರಿಗೆ ದೇವರು ಸದ್ಬುದ್ಧಿಯನ್ನು ಕೊಡಬೇಕು. ಇದೇ ಉದ್ದೇಶದಿಂದ ಯಾಗ ನಡೆಸಲಾಗಿದೆ. ಪ್ರಮೋದ್ ಮುತಾಲಿಕರಿಗೆ ಯಾಗ ನಡೆಸುವಂತೆ ನಾನು ಪ್ರೇರಣೆ ಕೊಟ್ಟಿದ್ದೆ. ಸತ್ಕರ್ಮ ಮಾಡುವವರಿಗೆ ಸೂಕ್ತ ರಕ್ಷಣೆ ಇರಬೇಕು. ಸೂಕ್ತ ರಕ್ಷಣೆ ಇಲ್ಲದೆ ಸತ್ಕರ್ಮ ಮಾಡಲು ಹೊರಟವರಿಗೆ ಅಪಾಯ ಮುಂದಾಗುತ್ತೆ. ಮುತಾಲಿಕರು ನಡೆಸುವ ಕಾರ್ಯಗಳಿಗೆ ದೈವಬಲ ಮತ್ತು ರಕ್ಷಣೆಯ ಅಗತ್ಯವಿದೆ ಹಾಗಾಗಿ ಯಾಗ ನಡೆಸಿದ್ದೇವೆ ಎಂದರು.
ನರಸಿಂಹ ದೇವರಿಗೆ ಸಂಬಂಧಿಸಿದ ಮನ್ಯು ಸೂಕ್ತ ಯಾಗ ನಡೆಸಿದ್ದೇವೆ. ಶತ್ರುಗಳು ಬಾರದಂತೆ ನರಸಿಂಹ ದೇವರಲ್ಲಿ ಪ್ರಾರ್ಥಿಸಲು ಮಾಡುವ ಯಾಗ ಇದು. ಕೆಲವರು ಅನಿವಾರ್ಯತೆಯಲ್ಲಿ ನಮಗೆ ಶತ್ರುಗಳಾಗುತ್ತಾರೆ, ಅವರಿಗೆ ಕೇಡು ಬಯಸಬಾರದು, ಆದರೆ ಉದ್ದೇಶಪೂರ್ವಕವಾಗಿ ಕೇಡು ಬಯಸುವವರು, ಅನ್ಯ ದೇಶದಿಂದ ದಾಳಿ ಇತ್ಯಾದಿ ಮಾಡುವವರು ಇರುತ್ತಾರೆ. ಅಂತವರನ್ನು ಪರಿವರ್ತನೆ ಮಾಡಲು ಸಾಧ್ಯವಿಲ್ಲ ನಾಶವೇ ಮಾಡಲೇಬೇಕು. ಈ ಬಗ್ಗೆ ನರಸಿಂಹ ದೇವರನ್ನು ಪ್ರಾರ್ಥನೆ ಮಾಡಲಾಗಿದೆ ಎಂದು ಅಮ್ಮಣ್ಣಾಯ ಹೇಳಿದರು.
ದೇವಸ್ಥಾನಗಳಲ್ಲಿ ಮನಬಂದಂತೆ ವರ್ತಿಸುವುದು ಸರಿಯಲ್ಲ, ವಸ್ತ್ರ ಸಂಹಿತೆ ಅಗತ್ಯ: ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್ ಅವರ ರಾಜಕೀಯ ಭವಿಷ್ಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು , ರಾಜಕೀಯ ಅಂದರೆ ಗವರ್ನಿಂಗ್ ದ ವರ್ಕ್ ಅಂಡ್ ಐಡಿಯಾಲಜಿ. ಈ ಗುಣ ಮುತಾಲಿಕ್ ಅವರಲ್ಲಿದೆ. ಕೆಲಸ ಮತ್ತು ಚಿಂತನೆಯನ್ನು ಸಮರ್ಥವಾಗಿ ಮಾಡುವ ಶಕ್ತಿ ಮುತಾಲಿಕ್ ಗೆ ಇದೆ. ಮುತಾಲಿಕ್ ರಾಜಕೀಯಕ್ಕೆ ಹೋಗುತ್ತಾರೋ ಇಲ್ಲವೋ ಅನ್ನೋದು ಅವರ ಸೇನೆ ಮತ್ತು ಸಂಘಟನೆಗೆ ಬಿಟ್ಟ ವಿಚಾರ. ಮುತಾಲಿಕ್ ಅವರ ಮನಸ್ಥಿತಿಯನ್ನು ಸ್ಥಿರವಾಗಿಡುವ ದೇವತಾ ಪ್ರಾರ್ಥನೆ ಮಾಡಿದ್ದೇವೆ.ರಾಜಕೀಯಕ್ಕೆ ಬರಬೇಕು ಬೇಡವೋ ಅನ್ನೋದು ಅವರಿಗೆ ಬಿಟ್ಟ ವಿಚಾರ ಎಂದರು.
ಪ್ರವೀಣ್ ನೆಟ್ಟಾರು ಪತ್ನಿಗೆ ಖಾಯಂ ಸರ್ಕಾರಿ ಉದ್ಯೋಗ ನೀಡಿ: ಮುತಾಲಿಕ್ ಆಗ್ರಹ
ಯಾಗದಿಂದ ಹಿಂದೂ ರಾಷ್ಟ್ರ ನಿರ್ಮಾಣದ ಸಂಕಲ್ಪ: ಮುತಾಲಿಕ್
ಹಿಂದೂ ಸಮಾಜ ಮತ್ತು ಹಿಂದೂ ರಾಷ್ಟ್ರಕ್ಕೆ ಬಲಕ್ಕಾಗಿ ಯಾಗ ಮಾಡಿರುವುದಾಗಿ ಪ್ರಮೋದ್ ಮುತಾಲಿಕ್ ಹೇಳಿದರು. ಉಡುಪಿಯ ಕಾಪು ದಂಡತೀರ್ಥದಲ್ಲಿ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದು, ಹಿಂದುಗಳ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ ಯಾಗ ಇದು. ಅತ್ಯಂತ ಶಾಸ್ತ್ರೋಕ್ತವಾಗಿ ಯಾಗ- ಹೋಮವನ್ನು ಮಾಡಲಾಯಿತು. ಹಿಂದೂ ಸಮಾಜಕ್ಕೆ ಬಲ ಸಿಗಬೇಕು ಎಂಬುದೇ ಈ ಯಾಗದ ಉದ್ದೇಶ. ನನ್ನ ಜೀವನದಲ್ಲಿ ವೈಯಕ್ತಿಕ ಎಂಬುದೇ ಇಲ್ಲ. ಕಳೆದ 46 ವರ್ಷಗಳಿಂದ ನಾನು ಇರುವುದೇ ಹಿಂದೂ ಸಮಾಜಕ್ಕೋಸ್ಕರ. ನನ್ನ ಶಕ್ತಿಯನ್ನು ಹಿಂದೂ ಸಮಾಜಕ್ಕೆ ಅರ್ಪಣೆ ಮಾಡಿದ್ದೇನೆ. ಹಿಂದೂ ರಾಷ್ಟ್ರ ನಿರ್ಮಾಣ ಆಗಬೇಕು ಶತ್ರುಗಳ ನಾಶ ಆಗಬೇಕು ಎಂದು ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು.