'ಅನಿಕಾ ಕಿಂಗ್ ಪಿನ್ ಅಲ್ವೇ ಅಲ್ಲ : ಇದ್ರ ಹಿಂದೆ ಇರೋರೆ ಬೇರೆ'

Suvarna News   | Asianet News
Published : Sep 04, 2020, 04:33 PM IST
'ಅನಿಕಾ ಕಿಂಗ್ ಪಿನ್ ಅಲ್ವೇ ಅಲ್ಲ : ಇದ್ರ ಹಿಂದೆ ಇರೋರೆ ಬೇರೆ'

ಸಾರಾಂಶ

ರಾಜ್ಯದಲ್ಲಿ ಡ್ರಗ್ ಮಾಫಿಯಾ ಎನ್ನೋದು ಸಾಕಷ್ಟು ಸದ್ದು ಮಾಡುತ್ತಿದ್ದು, ಇದರ ಹಿಂದೇ ಇರೋರೆ ಬೇರೆ ಎಂದು ಪ್ರಮೋದ್ ಮುತಾಲಿಕ್ ಹರಿಹಾಯ್ದಿದ್ದಾರೆ.

ತುಮಕೂರು (ಸೆ.04): ರಾಜ್ಯದಲ್ಲಿ ಡ್ರಗ್ ಮಾಫಿಯಾ ಎನ್ನೋದು ಭಾರೀ ಸದ್ದು ಮಾಡುತ್ತಿದ್ದು, ನಟಿ ರಾಗಿಣಿಯನ್ನು ಒದ್ದು ಒಳಗೆ ಹಾಕ್ಬೇಕು ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 
 
ತುಮಕೂರಿನಲ್ಲಿ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಇದೊಂದು ಡ್ರಗ್ ಜಿಹಾದ್. ನಟಿ ರಾಗಿಣಿಯನ್ನು ಒಳಗೆ ಹಾಕಬೇಕು. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಅತಿ ಹೆಚ್ಚಿನ ಡ್ರಗ್ಸ್ ಮಾಫಿಯಾ ನಡೆಯುತ್ತಿದೆ ಎಂದರು. 

ಇಂದ್ರಜಿತ್ ಮಾಹಿತಿ ಆಧಾರದ ಮೇಲೆ ಮುಂದಿನ ಕ್ರಮ : ಗೃಹ ಸಚಿವ ...

ಶಾಸಕ ಹ್ಯಾರಿಸ್ ಕ್ಷೇತ್ರದ ಎಲ್ಲಾ   ಕ್ರಿಶ್ಚಿಯನ್ ಕಾಲೇಜು, ಹೈಸ್ಕೂಲುಗಳ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಗಾಂಜಾ ಸಿಗುತ್ತೆ, ಕೋಕೈನ್ ಸಿಗುತ್ತೆ, ಡ್ರಗ್ಸ್ ಚಾಕ್ಲೆಟ್ ಸಿಗುತ್ತವೆ ಎಂದು ಮುತಾಲಿಕ್ ಆರೋಪಿಸಿದ್ದಾರೆ. 

ಈಗ ಸಿಕ್ಕಿ ಬಿದ್ದಿರೋ ಅನಿಕಾ ಕಿಂಗ್ ಪಿನ್ ಅಲ್ವೇ ಅಲ್ಲ . ಅವಳ ಹಿಂದೆ ದೊಡ್ಡ ದೊಡ್ಡ ಕಿಂಗ್ ಪಿನ್ ಗಳಿದ್ದಾರೆ.  ಈ ರಾಗಿಣಿಯನ್ನ ಒದ್ದು ಒಳಗಡೆ ಹಾಕಿ.  ವಿಚಾರಣೆ, ನೋಟಿಸ್ ನೀಡ್ತೀವಿ ಅಂತ ನಾಟಕ ಆಡ್ತಿರಾ ಎಂದು ಪ್ರಶ್ನೆ ಮಾಡಿದ್ದಾರೆ. 

"

ಬೆಂಕಿ ಇದ್ದಾಗಲೇ ಹೊಗೆ ಬರೋದು, ನಿಮ್ಮ ಹತ್ತಿರ  ದಾಖಲೆಗಳಿರುವುದಕ್ಕೆ ನೀವು ಒಳಗಡೆ ನುಗ್ಗಿರುವುದು. ಹೋಗಿ ಮೊದಲು ಅವಳನ್ನು ಒಳಗೆ ಹಾಕಿ. ಅವರಿಗೆಲ್ಲಾ ಭಯವೇ ಇಲ್ಲದಂತಾಗಿವೆ.   

 ರಾಜಕಾರಣಿಗಳಿಗೆ ಹಣ ಕೊಟ್ಟರೆ ಎಲ್ಲವೂ ಸರಿಯಾಗುತ್ತದೆ ಎನ್ನುವ ಭಾವನೆ ಅವರಲ್ಲಿದೆ. ಸಂಜನಾ ರಾಗಿಣಿ ನಟಿಯರಾ..? ಇವರೆಲ್ಲಾ ಮಜಾ ಮಾಡೋಕೆ ಬಂದಿರೋರು. ಇವರನ್ನು ಒಳಗೆ ಹಾಕಬೇಕು. ಇವರಿಗೆಲ್ಲಾ ಭಯ ಬರಬೇಕು.  ಮಕ್ಕಳಿಗೂ ಕೂಡ ಈ ಚಟ ಹಬ್ಬಿದೆ ಎಂದು ಆರೋಪಿಸಿದರು. 

'ಸಿದ್ದು ಪುತ್ರ ರಾಕೇಶ್ ಬಲಿಪಡೆದಿದ್ದು ಡ್ರಗ್ಸ್' .
  
ಇದೊಂದು ಮುಸ್ಲಿಂರೆ ನಡೆಸುತ್ತಿರುವ ದಂಧೆಯಾಗಿದ್ದು,  ಪೊಲೀಸರಿಗೆ ಡ್ರಗ್ ದಂಧೆ ಬಗ್ಗೆ ಇಂಚಿಂಚೂ ಮಾಹಿತಿ ಇರುತ್ತದೆ. ಆದರೆ ಪೊಲೀಸರ ಕೈಯನ್ನು ಕಟ್ಟಿಹಾಕಿದ್ದಾರೆ ರಾಜಕಾರಣಿಗಳು ಎಂದು ಆರೋಪಿಸಿದ್ದಾರೆ.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು