ಜೊತೆಗಿದ್ದ ಫೊಟೊ ಅಪ್ಲೋಡ್ ಮಾಡ್ತಾಳೆಂದು ಮಂಗಳಮುಖಿ ಮರ್ಡರ್ : ಆರೋಪಿ ಅಂದರ್

Kannadaprabha News   | Asianet News
Published : Sep 04, 2020, 04:09 PM IST
ಜೊತೆಗಿದ್ದ ಫೊಟೊ ಅಪ್ಲೋಡ್ ಮಾಡ್ತಾಳೆಂದು ಮಂಗಳಮುಖಿ ಮರ್ಡರ್ : ಆರೋಪಿ ಅಂದರ್

ಸಾರಾಂಶ

ಆಕೆ ಜೊತೆಗೆ ಇದ್ದ ಫೊಟೊ ಅಪ್ಲೋಡ್ ಮಾಡ್ತಾಳೆ ಎಂದು ಬೆದರಿ ಅವಳನ್ನೇ ಮುಗಿಸಿದ್ದಾನೆ. ಆಟೋ ಚಾಲಕ... ಆದರೆ ಈಗ ಕಂಬಿ ಹಿಂದೆ ಸೇರಿದ್ದಾನೆ.

ಚಿತ್ರದುರ್ಗ (ಸೆ.04): ಚಿತ್ರದುರ್ಗದಲ್ಲಿ  ನಡೆದ ಮಂಗಳಮುಖಿಯ ಹತ್ಯೆ ಪ್ರಕರಣ ಕೊನೆಗೂ ಪೊಲೀಸರು ಬೇಧಿಸಿದ್ದಾರೆ. 

ಆಗಸ್ಟ್ 28 ರಂದು ಅಂಜಲಿ ಎಂಬ ಮಂಗಳಮುಖಿ ಹತ್ಯೆಯಾಗಿದ್ದು, ಆಕೆಯನ್ನು ಕೊಲೆ ಮಾಡಿದ್ದು, ಚಿತ್ರದುರ್ಗ ಪೊಲೀಸರು ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಪಾಲವ್ವಲಹಳ್ಳಿ ಬಳಿಯ ಹೊಲದಲ್ಲಿ ಮಂಗಳಮುಖಿ ಅಂಜಲಿ ಮೃತದೇಹ ಪತ್ತೆಯಾಗಿತ್ತು. ಆಟೋ ಚಾಲಕನೋರ್ವ ಆಕೆಯನ್ನು ಕೊಲೆ ಮಾಡಿ ಇಲ್ಲಿ ಬಿಸಾಡಿ ಹೋಗಿದ್ದನೆಂದು ತಿಳಿದು ಬಂದಿದೆ. 

ಮಂಗಳಮುಖಿ ಮರ್ಡರ್ : ಜಮೀನಲ್ಲಿ ಪತ್ತೆ ಆಯ್ತು ಆಕೆಯ ಶವ ..

ಕೊಲೆ ಮಾಡಿದ ಆಟೋ ಚಾಲಕ ಮಧುಸೂದನ್ (24) ಎಂಬಾತನನ್ನು ಕೊಲೆ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಚಿತ್ರದುರ್ಗ ಗ್ರಾಮೀಣ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. 
 
ಆತನ ಜೊತೆಗಿರುವ ಫೊಟೊವನ್ನು ಫೇಸ್ ಬುಕ್‌ ಗೆ ಅಪ್‌ಲೋಡ್ ಮಾಡುವ ಬೆದರಿಕೆ ಒಡ್ಡಿದ್ದು, ಮಂಗಳ ಮುಖಿ ಅಂಜಲಿ ಫೊಟೊ ಅಪಲ್ಓಡ್ ಮಾಡುತ್ತಾಳೆಂದು ಆಕೆಯನ್ನು ಹತ್ಯೆ ಮಾಡಿದ್ದಾರೆ.

ಅಂಜಲಿಯಿಂದ ಬೆದರಿಕೆ ಹಿನ್ನೆಲೆ ಹತ್ಯೆ ಮಾಡಿದ್ದೇನೆ ಎಂದು ಸ್ವತಃ ಆರೋಪಿ ಮಧುಸೂದನ್ ತಪ್ಪೊಪ್ಪಿಕೊಂಡಿದ್ದಾನೆ.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು